Horoscope Today 03 March : ಇಂದು ಈ ರಾಶಿಯವರು ಇಟ್ಟ ಹೆಜ್ಜೆಯನ್ನು ಹಿಂದಿಡಲಾರರು
Daily Horoscope Mach 03: ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಶುಕ್ಲ ಪಕ್ಷದ ಪೂರ್ಣಿಮಾ ತಿಥಿ ಮಂಗಳವಾರವಾಗಿದ್ದು, ಸ್ವಾರ್ಥ, ವಿದೇಶ ಪ್ರಯಾಣ, ಕೃಷಿ ಚಿಂತನೆ, ವ್ಯಾಪಾರದ ವಿಸ್ತಾರಣೆ, ಪ್ರೇಮಕ್ಕೆ ಒತ್ತಾಯ ಇವೆಲ್ಲ ಇಂದಿನ ಭವಿಷ್ಯವಾಗಿರಲಿದೆ. ಇಂದು ಕೇಸುಗ್ರಸ್ಥ ಚಂದ್ರಗ್ರಹಣವಾಗಿದೆ.

ಮೇಷ ರಾಶಿ :
ನೀವು ಯಾರ ಪರವಿರೋಧವೂ ಇಲ್ಲದೇ ತಟಸ್ಥರಾಗಿ ಇರುವಿರಿ. ನಿಮ್ಮದು ಉದ್ದೇಶಪೂರ್ವಕ ಆಡಿದ ಮಾತಾಗಿದ್ದು ಸಮಸ್ಯೆಗಳನ್ನು ಎದುರಿಸಬೇಕಾದೀತು. ಜವಾಬ್ದಾರಿಯನ್ನು ಸಡಿಲಮಾಡಿಕೊಂಡು ತಪ್ಪಿಗೆ ದಾರಿಮಾಡಿಕೊಡುವಿರಿ. ನಂಬಿಕೆಯನ್ನು ಗಳಿಸುವುದು ನಿಮಗೆ ಸವಾಲಾಗಬಹುದು. ಆಭರಣ ಪ್ರಿಯರಿಗೆ ಸಂತೋಷವಾಗುವುದು. ಸಹೋದರರು ನಿಮ್ಮ ಯೋಜನೆಗೆ ಸಹಕರಿಸಬಹುದು. ಹಳೆಯ ವ್ಯವಹಾರವು ಪುನಃ ಮುನ್ನೆಲೆಗೆ ಬಂದು ಕಲಹದಲ್ಲಿ ಅಂತ್ಯವಾಗಬಹುದು.
ವೃಷಭ ರಾಶಿ :
ನಿಮ್ಮ ದುರಾಲೋಚನೆಗೆ ಸ್ನೇಹಿತರು ಅಡ್ಡಿ ಮಾಡುವರು. ಶತ್ರುವಿನ ಬಲವನ್ನು ನಿಯಂತ್ರಿಸಲು ಸಿದ್ಧತೆ ನಡೆಸುವಿರಿ. ಧಾರ್ಮಿಕಚಿಂತನೆಗಳು ನಿಮ್ಮ ಮನಸ್ಸಿನಲ್ಲಿ ಓಡಬಹುದು. ಒಗ್ಗಟ್ಟಿನಿಂದ ಕಾರ್ಯವನ್ನು ಸಾಧಿಸುವುದು ಇಂದಿನ ಅಗತ್ಯವೂ ಇದೆ. ನಿಮ್ಮನ್ನು ನೋಡುವ ದೃಷ್ಟಿಕೋನವು ಬದಲಾದೀತು. ನಿಮ್ಮ ಕಾರ್ಯದಲ್ಲಿ ಗುಣಮಟ್ಟ ಕಡಿಮೆ ಆಗಬಹುದು. ಯಾರ ಬೆಂಬಲವನ್ನು ಬಯಸದೇ ಸ್ವತಂತ್ರವಾಗಿ ಕೆಲಸವನ್ನು ಮಾಡುವಿರಿ. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣವಿದ್ದರೂ ಸಂತೋಷವು ಇರದು.
ಮಿಥುನ ರಾಶಿ :
ಇಂದು ಪುರುಷ ಪ್ರಯತ್ನವು ಹೆಚ್ಚಿರಬೇಕಾಗುವುದು. ಕುಟುಂಬ ಸದಸ್ಯರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದು, ಕುಟುಂಬವೇ ನಿಮ್ಮ ಶಕ್ತಿ. ಸರಿಯಾದುದನ್ನು ಆಯ್ಕೆ ಮಾಡುವುದು ನಿಮ್ಮಿಂದಾಗದು. ಸರ್ಕಾರಿ ಉದ್ಯೋಗದ ಕಡೆ ನಿಮ್ಮ ಮನಸ್ಸು ಹೊರಳುವುದು. ನಿಶ್ಚಿತ ಕಾರ್ಯವು ನಿಮ್ಮಿಂದ ಆಗದೇ ಹೋಗಬಹುದು. ಶತ್ರುಗಳನ್ನು ಹಿಮ್ಮೆಟ್ಟಿಸುವ ಕಾರ್ಯವು ನಿಮ್ಮ ಕಡೆಯಿಂದ ಆಗುವುದು. ಯಾವುದಾದರೂ ರೀತಿಯಲ್ಲಿ ನೀವು ಆರ್ಥಿಕ ಉಳಿತಾಯವನ್ನು ಮಾಡಬೇಕಾಗುವುದು.
ಕರ್ಕಾಟಕ ರಾಶಿ :
ನಿಮ್ಮ ಯಶಸ್ಸಿನ ವಿಧಾನವವನ್ನು ಹೇಳಿಕೊಳ್ಳುವುದು ಬೇಡ. ವಾಹನ ಚಾಲನೆಗೆ ಅತ್ಯುತ್ಸಾಹವಿದ್ದರೂ ಎಚ್ಚರಿಕೆಯನ್ನು ಹೆಚ್ಚು ಇಟ್ಟುಕೊಳ್ಳುವುದು ಮುಖ್ಯ. ಉದ್ಯಮವನ್ನು ಬಿಟ್ಟು ಬೇರೆಯ ಕಾರ್ಯವನ್ನು ಮಾಡಲು ಆಗದು. ಕುಟುಂಬದ ಜವಾಬ್ದಾರಿಯು ನಿಮ್ಮ ಮೇಲೇ ಬರಬಹುದು. ಯಾವುದೇ ವ್ಯವಸ್ಥೆಯಲ್ಲಿ ಮುಂದುವರಿಯಲು ಇಷ್ಟವಾಗದು. ವ್ಯಂಗ್ಯ ಮಾತುಗಳನ್ನು ಆಡಿ ಯಾರಿಂದಲೂ ಏನನ್ನೂ ನಿರೀಕ್ಷಿಸಲಾಗದು. ಸ್ತ್ರೀಯರಿಂದ ನಿಮಗೆ ನಿಂದನೆಯಾಗಬಹುದು. ಅವಿವಾಹಿತರಿಗೆ ವಿವಾಹದ ಬಗ್ಗೆ ಚಿಂತೆಯಾದೀತು.
ಸಿಂಹ ರಾಶಿ :
ಹಿತಶತ್ರುಗಳಿಂದ ನಿಮ್ಮ ವಿವಾಹವು ತಪ್ಪಬಹುದು. ಸ್ಥಗಿತಗೊಂಡಿರುವ ಕಾಮಗಾರಿಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ವಿರೋಧಿಗಳು ಸೋಲುತ್ತಾರೆ. ಪ್ರಯಾಣಕ್ಕೆ ತೊಂದರೆಯಾಗಬಹುದು. ತಾಳ್ಮೆ ಮತ್ತು ಸಂಯಮ ಮೇಲುಗೈ ಸಾಧಿಸುತ್ತದೆ. ಪ್ರಭಾವಿ ಜನರ ಸಂಸರ್ಗದಿಂದ ಹೊಸ ಆಯಾಮವು ತೆರೆದುಕೊಳ್ಳುವುದು. ಬೆನ್ನು ನೋವು ನಿಮ್ಮನ್ನು ಬಾಧಿಸೀತು. ಎಲ್ಲರಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ಯಾರ ಮೇಲೇ ರೇಗದೇ ಇರುವುದು ನಿಮಗೆ ಇಷ್ಟವಾದೀತು.
ಕನ್ಯಾ ರಾಶಿ :
ಸ್ನೇಹಿತರು ವೈಯಕ್ತಿಕ ಸಮಸ್ಯೆಗಳಿಗೆ ನಿಮ್ಮನ್ನು ಭೇಟಿಯಾಗುವ ಸಾಧ್ಯತೆ ಇದೆ. ಏನೇ ಬಂದರೂ ಇರುವ ಸತ್ಯವನ್ನು ಹೇಳಲು ಇಂದು ನೀವು ಹಿಂಜರಿಯಲಾರಿರಿ. ತನ್ನಿಂದ ತನ್ನವರಿಗೆ ತೊಂದರೆಯಾಗುವುದೆಂಬ ಭಯವೂ ಕಾಡಬಹುದು. ಕೃಷಿಗೆ ಸಂಬಂಧಿಸಿದ ನೂತನ ಅನ್ವೇಷಣೆಯನ್ನು ಮಾಡುವ ಹೊಸ ಆಲೋಚನೆಯನ್ನು ಮಾಡುವಿರಿ. ಮಕ್ಕಳ ಅನಾರೋಗ್ಯದಿಂದ ನೀವು ಆತಂಕಕ್ಕೆ ಒಳಗಾಗುವಿರಿ. ವಿದೇಶೀ ವ್ಯಾಪಾರದಲ್ಲಿ ಅನಿಶ್ಚಿತತೆ ಕಾಡಬಹುದು.
ತುಲಾ ರಾಶಿ :
ಯಾವುದೇ ಸವಾಲುಗಳನ್ನು ಧೈರ್ಯದಿಂದ ಎದುರಿಸಿ. ನಿಮ್ಮ ಭಯವೇ ಶಕ್ತಿಯನ್ನು ಬೇಕಾದ ಶಕ್ತಿಯನ್ನು ಕೊಡದೆ ಕುಗ್ಗಿಸುತ್ತದೆ. ಹಣಕಾಸಿನ ವಿಚಾರದಲ್ಲಿ ಅಧಿಕವಾಗಿ ಕೊಡುವುದು ಒಳ್ಳೆಯದಲ್ಲ. ಕೋಪ ಮೇಲೆ ನಿಯಂತ್ರಣವನ್ನು ಕಾಪಾಡಿಕೊಳ್ಳಿ. ಆಪತ್ಕಾಲಕ್ಕೆ ಬೇಕಾದ ಹಣವನ್ನು ತೆಗೆದಿರಿಸುವಿರಿ. ಸ್ತ್ರೀಯರು ಆಭರಣಗಳನ್ನು ಜತನದಿಂದ ಇರಿಕೊಳ್ಳಿ. ಚರಾಸ್ತಿಯು ಅನ್ಯರ ಪಾಲಾಗಬಹುದು. ಅವಶ್ಯಕ ವಸ್ತುಗಳನ್ನು ನೀವು ಕಳೆದುಕೊಳ್ಳುವಿರಿ. ಇನ್ನೊಬ್ಬರನ್ನು ನೋಡಿ ಕಲಿಯುವ ವಿಚಾರವು ಸಾಕಷ್ಟಿರಬಹುದು.
ವೃಶ್ಚಿಕ ರಾಶಿ :
ಇಂದು ವ್ಯಾಪಾರಕ್ಕಾಗಿ ಮಾಡಿದ ಪ್ರವಾಸ ಯಶಸ್ವಿಯಾಗಲಿದೆ. ಹಲವು ದಿನಗಳ ನಿಮ್ಮ ಋಣವು ಮುಕ್ತಾಯವಾಗಿದ್ದು ಸಂತಸದ ವಿಚಾರವಾಗಿದೆ. ಯಾರಿಂದ ಬಂದರೂ ಉಡುಗೊರೆಗಳನ್ನು ಸ್ವೀಕರಿಸುವಿರಿ. ಅಪಾಯ ಸೂಚನೆಯನ್ನು ಧಿಕ್ಕರಿಸಲೊಲ್ಲಿರಿ. ಕೃಷಿಯ ವ್ಯಾಪಾರದಲ್ಲಿ ಹಿನ್ನಡೆಯನ್ನು ಕಾಣಬೇಕಾಗುವುದು. ಪ್ರತಿಫಲದ ನಿರೀಕ್ಷೆ ಇಲ್ಲದೇ ನೀವು ಸ್ನೇಹಿತನಿಗೆ ಸಹಾಯವನ್ನು ಮಾಡುವಿರಿ. ನಿರ್ದಿಷ್ಟ ಕ್ರಮವನ್ನು ಅಳವಡಿಸಿಕೊಂಡು ಉದ್ಯಮವನ್ನು ಕ್ರಮಬದ್ಧವಾಗಿಸಿ.
ಧನು ರಾಶಿ :
ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಕೆಲಸ ಇರುತ್ತದೆ. ಪೂರ್ವ ಕರ್ಮಗಳು ಫಲ ನೀಡುವುದು ನಿಮ್ಮ ಅನುಭವಕ್ಕೆ ಬಂದರೂ ಒಪ್ಪಿಕೊಳ್ಳಲಾರಿರಿ. ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ. ವ್ಯಾಪಾರದಲ್ಲಿ ಅಪೇಕ್ಷಿತ ಲಾಭ ದೊರೆಯಲಿದೆ. ಇಂದು ನಿಮ್ಮ ಕೆಲಸಕ್ಕೆ ಇತರರ ಹಸ್ತಕ್ಷೇಪವು ಇರಲಿದ್ದು ಅದನ್ನು ಸಹಿಸುವುದು ಆಗದು. ಹಣಕಾಸಿನ ವ್ಯವಹಾರದ ಪ್ರತಿನಿಧಿಗಳು ಅಂದುಕೊಂಡ ಕೆಲಸವನ್ನು ಸಾಧಿಸಿಕೊಳ್ಳುವರು. ಹಿರಿಯರ ಆರೋಗ್ಯದಲ್ಲಿ ವ್ಯತ್ಯಸಾವಾಗಿದ್ದು ತುರ್ತು ಚಿಕಿತ್ಸೆಯ ಅವಶ್ಯಕತೆ ಇರಲಿದೆ.
ಮಕರ ರಾಶಿ :
ಬಹಳ ದಿನಗಳ ಅನಂತರ ಅತಿಥಿಗಳ ಆಗಮನ ಇರುತ್ತದೆ. ನೀವು ಯಾರಿಂದಲಾದರೂ ಉತ್ಸಾಹ ಬರುವ ಮಾಹಿತಿಯನ್ನು ಪಡೆಯುವಿರಿ. ಸ್ವಾಭಿಮಾನ ಹಾಗೇ ಉಳಿಯುತ್ತದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗುವುದು. ಕಾರ್ಯದ ಒತ್ತಡವಿರುವ ಕಾರಣ ಸಂಭ್ರಮವನ್ನು ಕಳೆದುಕೊಳ್ಳಬೇಕಾಗುವುದು. ಶಿಕ್ಷಕವೃತ್ತಿಯವರು ಉನ್ನತ ಸ್ಥಾನದ ನಿರೀಕ್ಷೆಯಲ್ಲಿ ಇರುವರು. ಖಾಸಗಿ ಸಂಸ್ಥೆಯ ಹುದ್ದೆಯನ್ನು ನೀವು ಪಡೆಯಲಿದ್ದೀರಿ. ಇಂದು ನಿಮ್ಮ ನೇತೃತ್ವದಲ್ಲಿ ಕೆಲವು ಕಾರ್ಯಗಳು ನಡೆಯುವುದು.
ಕುಂಭ ರಾಶಿ :
ಏನೇ ಮಾಡಿದರೂ ಕಳೆದುಕೊಂಡ ವಸ್ತುವಿನ ಚಿಂತೆಯನ್ನು ನೀವು ಬಿಡುವುದು ಕಷ್ಟವಾದೀತು. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ವ್ಯಾಪಾರದ ನಿಮಿತ್ತ ಹೊರಗೆ ಹೋಗಬೇಕಾಗಬಹುದು. ಮಾತಿನಲ್ಲಿ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಿ. ಆರಾಮಾಗಿ ಹಣ ಗಳಿಸಲಾಗುವುದು. ಆಸ್ತಿಯ ವಿಚಾರದಲ್ಲಿ ನಿಮ್ಮ ನಿಲುವಿಗೆ ಅಪಜಯ. ಔಷಧಗಳ ವ್ಯತ್ಯಾಸದಿಂದ ಆರೋಗ್ಯ ತಪ್ಪುವುದು ಇಂದು ನೀವು ಸಂಗಾತಿಯ ಮಾತನ್ನೇ ಹೆಚ್ಚು ಕೇಳಬೇಕಾದೀತು.
ಮೀನ ರಾಶಿ :
ಪ್ರಣಯದಲ್ಲಿ ಇಂದು ಸಮಯ ಕಳೆಯಲಾಗುವುದು. ನಿಮ್ಮ ಶ್ರಮಕ್ಕೆ ಫಲವನ್ನು ಇಂದೇ ನಿರೀಕ್ಷಿಸಬೇಡಿ. ಕಾರ್ಯಯಿಂದ ಸಂತಸವಿರುತ್ತದೆ. ವ್ಯಾಪಾರದಲ್ಲಿ ಯಾವುದೇ ಉದ್ವೇಗವಿಲ್ಲದೇ ಚೆನ್ನಾಗಿ ನಡೆಯುತ್ತದೆ. ಕಾರ್ಯದ ಒತ್ತಡದಿಂದ ನೀವು ವಿಶ್ರಾಂತಿಯನ್ನು ಪಡೆಯುವುದು ಕಷ್ಟವಾದೀತು. ಕಲಾವಿದರಿಗೆ ಅವಕಾಶದ ದೊಡ್ಡ ಬಾಗಿಲು ತೆರೆದುಕೊಳ್ಳಬಹುದು. ಎದುರಿಸಬಹುದಾದ ಸಮಸ್ಯೆಯನ್ನು ಧೈರ್ಯದಿಂದ ಮುನ್ನುಗ್ಗಿ. ಇಂದು ನಿಮಗೆ ಕೆಲಸವು ಆಗಬೇಕಾಗಿದ್ದು ಪ್ರಯಾಣವು ಅನಿವಾರ್ಯವಾಗುವುದು.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಶತಭಿಷಾ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಮಘಾ, ಯೋಗ : ಸುಕರ್ಮ, ಕರಣ : ಬವ, ಸೂರ್ಯೋದಯ – 06 – 41 am, ಸೂರ್ಯಾಸ್ತ – 06 – 31 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:34 – 07:03, ಯಮಗಂಡ ಕಾಲ 09:39 – 11:08, ಗುಳಿಕ ಕಾಲ 12:36 – 14:05
-ಲೋಹಿತ ಹೆಬ್ಬಾರ್ – 8762924271 (what’s app only)
Published On - 11:13 am, Tue, 3 March 26
