ಲಕ್ಷ್ಮಿ ಹೆಬ್ಬಾಳ್ಕರ್ ಕಚೇರಿಗೆ ಮನವಿ ಪತ್ರ ಸಲ್ಲಿಸಲು ತೆರಳಿದ ಬಿಜೆಪಿ ಮುಖಂಡರು ಸಚಿವೆ ಮಗನಿಂದ ಜೈ ಶ್ರೀರಾಮ್ ಹೇಳಿಸಿದರು!

ಲಕ್ಷ್ಮಿ ಹೆಬ್ಬಾಳ್ಕರ್ ಕಚೇರಿಗೆ ಮನವಿ ಪತ್ರ ಸಲ್ಲಿಸಲು ತೆರಳಿದ ಬಿಜೆಪಿ ಮುಖಂಡರು ಸಚಿವೆ ಮಗನಿಂದ ಜೈ ಶ್ರೀರಾಮ್ ಹೇಳಿಸಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 10, 2024 | 3:03 PM

ಮನವಿ ಪತ್ರವನ್ನು ಮೃಣಾಲ್ ಕೈಗೆ ಕೊಡುವಾಗ ಬಿಜೆಪಿ ಕಾರ್ಯಕರ್ತರು ಬೋಲೋ ಭಾರತ್ ಮಾತಾ ಕೀ ಅಂದಾಗ ಅವರೊಂದಿಗೆ ಜೈ ಅನ್ನುತ್ತಾರೆ. ಆಮೇಲೆ ಖುದ್ದು ಮೃಣಾಲ್, ವಂದೇ ಮಾತರಂ ಮತ್ತು ಜೈ ಶ್ರೀರಾಮ್ ಅಂದಾಗ ಬಿಜೆಪಿ ಮುಖಂಡರು ಜೈ ಜೈ ಶ್ರೀರಾಮ್ ಅನ್ನುತ್ತಾರೆ. ಆಗ ಒಬ್ಬ ಬಿಜೆಪಿ ನಾಯಕ ಗಾಡಿ ದಾರಿ ಮೇಲೆ ಬರ್ತಾ ಇದೆ ತಮಾಶೆ ಮಾಡುತ್ತಾರೆ!

ಬೆಳಗಾವಿ: ಜಿಲ್ಲೆಯ ಬಿಜೆಪಿ ಮುಖಂಡರು (BJP leaders) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರ ವಿರುದ್ಧ ಒಂದು ವಿನೂತನ ಪ್ರತಿಭಟನೆ (protest) ನಡೆಸಿದರು. ಇದು ನಿಸ್ಸಂದೇಹವಾಗಿ ಎಲ್ಲರಿಗೂ ಮೆಚ್ಚಿಗೆಯಾಗುವ ರೀತಿಯ ಪ್ರತಿಭಟನೆ. ಗೌಜು ಗದ್ದಲ, ಧಿಕ್ಕಾರದ ಘೋಷಣೆ-ಮೊದಲಾವುಗಳಿಲ್ಲದ ಸರಳ ಮತ್ತು ಅತ್ಯಂತ ಪರಿಣಾಮಕಾರಿ ಪ್ರತಿಭಟನೆ. ತಮ್ಮ ಆಕ್ಷೇಪಣೆ, ದೂರು-ದುಮ್ಮಾನಗಳನ್ನು ಒಂದು ಮನವಿ ಪತ್ರದ ರೂಪದಲ್ಲ್ಲಿ ಅವರು ಸಲ್ಲಿಸಿದ್ದಾರೆ. ನಗರದಲ್ಲಿರುವ ಕಚೇರಿಗೆ ಬಿಜೆಪಿ ಮುಖಂಡರು ಬಂದಾಗ ಸಚಿವೆ ಸ್ಥಳದಲ್ಲಿ ಲಭ್ಯರಿರಲಿಲ್ಲ. ಆದರೆ ಅವರ ಮಗ ಮೃಣಾಲ್ ಇದ್ದರು ಮತ್ತು ಅಮ್ಮನ ಪರವಾಗಿ ಮನವಿಯನ್ನು ಸ್ವೀಕರಿಸಿದರು. ಅರ್ಜಿಯನ್ನು ನೀಡುವ ಮುನ್ನ ಅದರಲ್ಲಿ ಬರೆದಿರುವುದನ್ನು ಒಬ್ಬ ಕಾರ್ಯಕರ್ತ ಗಟ್ಟಿಯಾಗಿ ಓದಿ ಹೇಳಿದರು.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಚಿವೆಯಾಗಿ ಹೆಚ್ಚು ಕಡಿಮೆ ಒಂದು ವರ್ಷ ಕಳೆಯುತ್ತಾ ಬಂದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಶುರುವಾಗಿಲ್ಲ, ಜನ ಸಚಿವೆ ಮೇಲೆ ಅತೀವ ಭರವಸೆ ಮತ್ತು ನಂಬಿಕೆಯಿಟ್ಟು ಗೆಲ್ಲಿಸಿ ವಿಧಾನಸಭೆಗೆ ಕಳಿಸಿದ್ದಾರೆ, ಅವರನ್ನು ನಿರಾಶರಾಗಿಸಬಾರದು ಎಂದು ಮನವಿಯಲ್ಲಿ ಹೇಳಲಾಗಿದೆ. ಮನವಿ ಪತ್ರವನ್ನು ಮೃಣಾಲ್ ಕೈಗೆ ಕೊಡುವಾಗ ಬಿಜೆಪಿ ಕಾರ್ಯಕರ್ತರು ಬೋಲೋ ಭಾರತ್ ಮಾತಾ ಕೀ ಅಂದಾಗ ಅವರೊಂದಿಗೆ ಜೈ ಅನ್ನುತ್ತಾರೆ. ಆಮೇಲೆ ಖುದ್ದು ಮೃಣಾಲ್, ವಂದೇ ಮಾತರಂ ಮತ್ತು ಜೈ ಶ್ರೀರಾಮ್ ಅಂದಾಗ ಬಿಜೆಪಿ ಮುಖಂಡರು ಜೈ ಜೈ ಶ್ರೀರಾಮ್ ಅನ್ನುತ್ತಾರೆ. ಆಗ ಒಬ್ಬ ಬಿಜೆಪಿ ನಾಯಕ ಗಾಡಿ ದಾರಿ ಮೇಲೆ ಬರ್ತಾ ಇದೆ ತಮಾಶೆ ಮಾಡುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ