ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಗಾಳಿ ಬೀಸುವುದು ಕೂಡ ನಿಂತುಹೋಗಿದೆ: ಸುರೇಶ್ ಗೌಡ, ಬಿಜೆಪಿ ಶಾಸಕ
ರೈತರಿಗೆ 7 ಗಂಟೆ ಕಾಲ 3 ಫೇಸ್ ವಿದ್ಯುತ್ ಕೊಡಲೇಬೇಕೆಂಬ ನಿಯಮವಿದೆ, ಆದರೆ ಸಿದ್ದರಾಮಯ್ಯ ಸರ್ಕಾರ ಕೇವಲ 3 ಗಂಟೆಗಳಷ್ಟು ಮಾತ್ರ ವಿದ್ಯುತ್ ಪೂರೈಸುತ್ತಿದೆ ಎಂದು ಶಾಸಕ ಹೇಳಿದರು. ವಿಂಡ್ ಮಿಲ್ ಗಳಿಂದಾದರೂ ವಿದ್ಯುತ್ ಉತ್ಪಾದಿಸಬಹುದಲ್ಲ ಅಂತ ವಿಂಡ್ ಮಿಲ್ ಗೆ ಸಂಬಂಧಪಟ್ಟ ಆಧಿಕಾರಿಗಳನ್ನು ಕೇಳಿದರೆ ಅವರು ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ನಂತರ ಗಾಳಿ ಬೀಸುವುದು ಕೂಡ ನಿಂತುಹೋಗಿದೆ ಎಂದರು ಅಂತ ಗೌಡ ಹೇಳಿದರು.
ತುಮಕೂರು: ತುಮಕೂರು ತಾಲ್ಲೂಕಿನ ಬೆಳ್ಳಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರ ನೇತೃತ್ವದಲದಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತಾಡಿದ ತುಮಕೂರು ಗ್ರಾಮಾಂತರ (Tumakuru Rural) ಶಾಸಕ ಸುರೇಶ್ ಗೌಡ (Suresh Gowda) ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಧಿಕಾರಕ್ಕೆ ಬಂದ ಬಳಿಕ ರಾಜ್ಯವನ್ನು ದಾರಿದ್ರ್ಯ ಆವರಿಸಿದೆ ಎಂದು ಹೇಳಿದರು. ರಾಜ್ಯ ಹಿಂದೆಂದೂ ಕಾಣದ ಭೀಕರ ಬರದಲ್ಲಿ ಸಿಲುಕಿದೆ ಎಂದು ಹೇಳಿದ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಮಳೆಯಿಲ್ಲ, ಬೆಳೆಯಿಲ್ಲ ಯಾವುದೇ ಜಲಾಶಯದಲ್ಲಿ ಒಂದು ಹನಿ ನೀರಿಲ್ಲ ಮತ್ತು ವಿದ್ಯುತ್ ಕೂಡ ಇಲ್ಲದೆ ರೈತರು ಕಂಗಾಲಾಗಿದ್ದಾರೆ ಎಂದು ಸುರೇಶ್ ಗೌಡ ಹೇಳಿದರು. ರೈತರಿಗೆ 7 ಗಂಟೆ ಕಾಲ 3 ಫೇಸ್ ವಿದ್ಯುತ್ ಕೊಡಲೇಬೇಕೆಂಬ ನಿಯಮವಿದೆ, ಆದರೆ ಸಿದ್ದರಾಮಯ್ಯ ಸರ್ಕಾರ ಕೇವಲ 3 ಗಂಟೆಗಳಷ್ಟು ಮಾತ್ರ ವಿದ್ಯುತ್ ಪೂರೈಸುತ್ತಿದೆ ಎಂದು ಶಾಸಕ ಹೇಳಿದರು. ವಿಂಡ್ ಮಿಲ್ ಗಳಿಂದಾದರೂ ವಿದ್ಯುತ್ ಉತ್ಪಾದಿಸಬಹುದಲ್ಲ ಅಂತ ವಿಂಡ್ ಮಿಲ್ ಗೆ ಸಂಬಂಧಪಟ್ಟ ಆಧಿಕಾರಿಗಳನ್ನು ಕೇಳಿದರೆ ಅವರು ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ನಂತರ ಗಾಳಿ ಬೀಸುವುದು ಕೂಡ ನಿಂತುಹೋಗಿದೆ ಎಂದರು ಅಂತ ಗೌಡ ಹೇಳಿದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪನವರು ಕೇಂದ್ರಕ್ಕೆ ಮನವಿ ಸಲ್ಲಿಸಿ ಬರ ಪರಿಹಾರ ನಿಧಿ ಬಿಡುಗಡೆ ಮಾಡಿಸಿ ರಾಜ್ಯ ಸರಕಾರಕ್ಕೆ ಚಾಟಿ ಬೀಸಬೇಕೆಂದು ಕೋರುವುದಾಗಿ ಸುರೇಶ್ ಗೌಡ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ