ಬಳ್ಳಾರಿಯಲ್ಲಿ ಪತ್ರಿಕಾ ಗೋಷ್ಟಿ ನಡೆಸುವಾಗ ಮಾಜಿ ಶಾಸಕ ಕೆಎಸ್ ಈಶ್ವರಪ್ಪನವರಿಗೆ ಸಿಟ್ಟು ಬಂದಿದ್ದು ಯಾಕೆ?
ಅವರ ದಾರ್ಷ್ಟ್ಯತೆಯ ಮಾತುಗಳಿಂದ ಸಿಟ್ಟಿಗೇಳುವ ಪತ್ರಕರ್ತರು ಪ್ರಶ್ನೆಗಳ ದಾಳಿಯನ್ನು ತೀವ್ರಗೊಳಿಸಿದಾಗ ಈಶ್ವರಪ್ಪ ಗೋಷ್ಟಿಯನ್ನು ನಿಲ್ಲಿಸಿ ಎದ್ದು ಹೋಗುವ ಬೆದರಿಕೆಯನ್ನೂ ಹಾಕುತ್ತಾರೆ. ಆದರೆ, ತನ್ನ ಬೆದರಿಕೆಗೆ ಬಳ್ಳಾರಿ ಪತ್ರಕರ್ತರು ಮಣಿಯಲಾರರು ಅಂತ ಮನವರಿಕೆಯಾದಾಗ, ಮೆತ್ತಗಾಗಿ ಸಂಯಮದಿಂದ ಮಾತಾಡುತ್ತಾರೆ.
ಬಳ್ಳಾರಿ: ಇದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪನವರ (KS Eshwarappa) ಪ್ರವೃತ್ತಿ ಮಾತ್ರ ಅಲ್ಲ ಬಹುತೇಕ ಎಲ್ಲ ರಾಜಕಾರಣಿಗಳ ಪ್ರವೃತ್ತಿ ಇದೇ ತೆರನಾಗಿರುತ್ತದೆ. ಪತ್ರಿಕಾ ಗೋಷ್ಟಿ (press conference) ನಡೆಸುವಾಗ ನಮ್ಮ ನಾಯಕರಿಗೆ ಸುಲಭವಾದ ಪ್ರಶ್ನೆಗಳು ಬೇಕು ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆ ಕೇಳಿದರೆ ಕೆಂಡಾಮಂಡಲರಾಗುತ್ತಾರೆ. ಬಳ್ಳಾರಿ ಪ್ರವಾಸದಲ್ಲಿರುವ ಮಾಜಿ ಶಾಸಕ ಈಶ್ವರಪ್ಪ ಬಳ್ಳಾರಿಯ ಪತ್ರಕರ್ತರು (Ballari media persons) ಕೇಳಿದ ಪ್ರಶ್ನೆಗಳನ್ನು ತೆಗೆದುಕೊಳ್ಳಲಾಗದೆ ಕೂಗಾಡಲಾರಂಭಿಸಿದರು. ಒಬ್ಬ ಪತ್ರಕರ್ತ ಮಾತ್ರ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆ ಕೇಳಿದ್ದರೆ ಅವರು ಪ್ರಾಯಶಃ ನಿಭಾಯಿಸುತ್ತಿದ್ದರು ಇಲ್ಲವೇ ಪತ್ರಕರ್ತನ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಿದ್ದರು. ಆದರೆ ಗಮನಾರ್ಹ ಸಂಗತಿಯೆಂದರೆ ಅವರ ಪತ್ರಿಕಾ ಗೋಷ್ಟಿಯಲ್ಲಿದ್ದ ಮಾಧ್ಯಮ ಪ್ರತಿನಿಧಿಗಳೆಲ್ಲ ಅವರ ಮೇಲೆ ಮುಗಿಬಿದ್ದರು, ಅಂದರೆ ಅವರಿಗೆ ಉತ್ತರಿಸಲು ಕಷ್ಟವಾಗುವ ಪ್ರಶ್ನೆಗಳನ್ನು ಕೇಳಿದರು. ಆವರ ದಾಳಿಯಿಂದ ತಾಳ್ಮೆ ಕಳೆದುಕೊಳ್ಳುವ ಈಶ್ವರಪ್ಪ ಪತ್ರಿಕಾ ಗೋಷ್ಟಿ ಕರೆದವನು ಆಡಬಾರದ ಮಾತನ್ನಾಡುತ್ತಾರೆ. ‘ನೀವು ಕೇಳಿದಕ್ಕೆಲ್ಲ ಉತ್ತರ ಕೊಡೋದಿಕ್ಕೆ ನಾನು ಬಂದಿಲ್ಲ, ನನು ಹೇಳೋದನ್ನಷ್ಟೇ ನೀವು ಕೇಳಿಸಿಕೊಳ್ಳಬೇಕು!’ ಅನ್ನುತ್ತಾರೆ. ಅವರ ದಾರ್ಷ್ಟ್ಯತೆಯ ಮಾತುಗಳಿಂದ ಸಿಟ್ಟಿಗೇಳುವ ಪತ್ರಕರ್ತರು ಪ್ರಶ್ನೆಗಳ ದಾಳಿಯನ್ನು ತೀವ್ರಗೊಳಿಸಿದಾಗ ಈಶ್ವರಪ್ಪ ಗೋಷ್ಟಿಯನ್ನು ನಿಲ್ಲಿಸಿ ಎದ್ದು ಹೋಗುವ ಬೆದರಿಕೆಯನ್ನೂ ಹಾಕುತ್ತಾರೆ. ಆದರೆ, ತನ್ನ ಬೆದರಿಕೆಗೆ ಬಳ್ಳಾರಿ ಪತ್ರಕರ್ತರು ಮಣಿಯಲಾರರು ಅಂತ ಮನವರಿಕೆಯಾದಾಗ, ಮೆತ್ತಗಾಗಿ ಸಂಯಮದಿಂದ ಮಾತಾಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:47 pm, Mon, 6 November 23