ನಡುರೋಡಿನಲ್ಲಿ ಹೋರ್ಡಿಂಗ್ ಮೇಲೆ ಯುವಕನೊಬ್ಬ ಪವಡಿಸು ಪರಮಾತ್ಮ ಎಂದು ಮಲಗಿಬಿಟ್ಟ… ವಿಡಿಯೋ ವೈರಲ್
Nijamabad: ಕೆಳಗಿಳಿಸಿದ ಮೇಲೆ ಏನಪ್ಪಾ ರಾಜಾ ನಿನ್ನ ಸಮಸ್ಯೆ ಎಂದು ಕೇಳಲಾಗಿ... ವ್ಯಕ್ತಿಯೊಬ್ಬ ತನ್ನಿಂದ ಸಾವಿರಾರು ರೂಪಾಯಿ ಹಣ ಪಡೆದಿದ್ದಾನೆ. ಆದರೆ ಅದನ್ನು ವಾಪಸ್ ನೀಡುತ್ತಿಲ್ಲ. ಇದರಿಂದ ತನಗೆ ತೊಂದರೆ ಯಾಗುತ್ತಿದೆ ಎಂದು ಬಾಧಿತ ಯುವಕ ರವೀಂದರ್ ತಿಳಿಸಿದ್ದಾನೆ.
ನಿಜಾಮಾಬಾದ್ ಜಿಲ್ಲಾ ಕೇಂದ್ರದ ನಿತೇಶ್ವರ್ ಚೌಕಾದಲ್ಲಿ ಯುವಕನೊಬ್ಬ ಜಾಹೀರಾತುಗಳ ಹೋರ್ಡಿಂಗ್ ಮೇಲೆ ಹತ್ತಿ, ಅಲ್ಲೇ ಪವಡಿಸು ಪರಮಾತ್ಮ ಎಂದು ಮಲಗಿಬಿಟ್ಟಿದ್ದಾನೆ! ಸ್ಥಳೀಯರು ವಿಚಾರಿಸಿದಾಗ ಆತನನ್ನು ರವೀಂದರ್ ಎಂದು ಗುರುತಿಸಿದ್ದಾರೆ. ಬಳಿಕ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ತ್ರಿ ಟೌನ್ ಎಸ್‌ಐ ನರಹರಿ ಅವರು ಕಾನ್‌ಸ್ಟೆಬಲ್‌ಗಳೊಂದಿಗೆ ಘಟನಾ ಸ್ಥಳಕ್ಕೆ ದೌಡಾಯಿಸಿ ಬಂದರು. ತ್ರಿ ಟೌನ್ ಠಾಣೆ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಯುವಕನ ಕೊನೆಗೂ ಕೆಳಗಿಳಿಸಿದರು.
ಕೆಳಗಿಳಿಸಿದ ಮೇಲೆ ಏನಪ್ಪಾ ರಾಜಾ ನಿನ್ನ ಸಮಸ್ಯೆ ಎಂದು ಕೇಳಲಾಗಿ… ವ್ಯಕ್ತಿಯೊಬ್ಬ ತನ್ನಿಂದ ಸಾವಿರಾರು ರೂಪಾಯಿ ಹಣ ಪಡೆದಿದ್ದಾನೆ. ಆದರೆ ಅದನ್ನು ವಾಪಸ್ ನೀಡುತ್ತಿಲ್ಲ. ಇದರಿಂದ ತನಗೆ ತೊಂದರೆ ಯಾಗುತ್ತಿದೆ ಎಂದು ಬಾಧಿತ ಯುವಕ ರವೀಂದರ್ ತಿಳಿಸಿದ್ದಾನೆ. ಈ ಯುವಕ ಪೇಂಟಿಂಗ್ ಮೂಲಕ ಜೀವನ ಸಾಗಿಸುತ್ತಿದ್ದಾನೆ ಎನ್ನುತ್ತಾರೆ ಸ್ಥಳೀಯರು. ಮದ್ಯದ ಅಮಲಿನಲ್ಲಿ, ಆತ ಹೋರ್ಡಿಂಗ್ ಮೇಲೆ ಹತ್ತಿ ಮಲಗಿದ್ದಾನೆ. ಇಂದು ಬೆಳಗ್ಗೆಯೂ ಹೋರ್ಡಿಂಗ್ ಹತ್ತಲು ಯತ್ನಿಸಿದಾಗ ತಡೆದಿರುವುದಾಗಿ ಸ್ಥಳೀಯರು ಹೇಳುತ್ತಾರೆ. ಈ ಹಿಂದೆಯೂ ಎರಡು ಸಲ ಈ ರೀತಿ ಮಾಡಿದ್ದಾನಂತೆ. ಇದಕ್ಕೆ ಸ್ಪಂದಿಸಿದ ಪೊಲೀಸರು ಯುವಕನನ್ನು ಕೌನ್ಸೆಲಿಂಗ್‌ಗೆ ಕಳುಹಿಸಿದ್ದಾರೆ. ವಿಡಿಯೋ ವೈರಲ್ ಆಗಿದೆ.
ಹೆಚ್ಚಿನ ವೈರಲ್ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ