ದುಬೈನಲ್ಲಿ ನಡೆದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಮೈಸೂರು ಯುವಕನ ಸಾಧನೆ, ಬಾಕ್ಸಿಂಗ್‌ನಲ್ಲಿ ಬಾಲಕನಿಗೆ ಕಂಚು
ಮೈಸೂರಿನ ಶಾರದದೇವಿ ನಗರದ ನಿವಾಸಿ ಪರಿಕ್ಷೀತ್ ಪ್ರದೀಪ್ ಎಂಬ ಬಾಲಕ ಜರ್ಮನಿಯಲ್ಲಿ ನಡೆದ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಪದಕ ಗಳಿಸಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾನೆ. ಮತ್ತೊಂದೆಡೆ ಫಿಟ್ನೆಸ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮೈಸೂರಿನ ನಾಯ್ಡು ನಗರದ ವಿನೋದ್ ಗೌಡ ದುಬೈನ ಯುಎಇನಲ್ಲಿ ನಡೆದ ವಿಶ್ವ ದರ್ಜೆಯ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.
ಮೈಸೂರು, ನ.06: ಸಾಂಸ್ಕೃತಿಕ ನಗರಿ ಮೈಸೂರು (Mysuru) ಹೇಳಿ ಕೇಳಿ ಕಲೆ ರಾಜ ಪರಂಪರೆಯ ನಾಡು. ಪ್ರವಾಸಿಗರ ಸ್ವರ್ಗ, ಕವಿಗಳ ಸ್ಪೂರ್ತಿಯ ಊರು. ಅಷ್ಟೇ ಅಲ್ಲ ಇದು ಹೆಮ್ಮೆಯ ಕ್ರೀಡಾಪಟುಗಳ ತವರೂರು. ಇದಕ್ಕೆ ಸಾಕ್ಷಿ ಯುವಕ ಹಾಗೂ ಬಾಲಕ. ಸಾಂಸ್ಕೃತಿಕ ನಗರಿ ಮೈಸೂರಿನ ಬಾಲಕ ಹಾಗೂ ಯುವಕ ವಿದೇಶದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಮೈಸೂರಿನ ಶಾರದದೇವಿ ನಗರದ ನಿವಾಸಿ ಪರಿಕ್ಷೀತ್ ಪ್ರದೀಪ್ ಎಂಬ ಬಾಲಕ ಜರ್ಮನಿಯಲ್ಲಿ ನಡೆದ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಪದಕ ಗಳಿಸಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾನೆ. ನಾಲ್ಕನೇ ತರಗತಿ ಓದುತ್ತಿರುವ ಪರಿಕ್ಷೀತ್ 45 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಕೆ1 ಲೈಟ್ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾನೆ. ಇನ್ನು ಬಾಲಕನ ಜೊತೆಗೆ ಮೈಸೂರಿನ ಯುವಕ ಸಹಾ ದೂರದ ದುಬೈನಲ್ಲಿ ಸಾಧನೆ ಮಾಡಿದ್ದಾನೆ. ಫಿಟ್ನೆಸ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮೈಸೂರಿನ ನಾಯ್ಡು ನಗರದ ವಿನೋದ್ ಗೌಡ ದುಬೈನ ಯುಎಇನಲ್ಲಿ ನಡೆದ ವಿಶ್ವ ದರ್ಜೆಯ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.
IFBB ಫೆಡರೇಶನ್ ಆಯೋಜಿಸಿದ ಬಾಡಿ ಬಿಲ್ಡಿಂಗ್ ಸ್ಪರ್ಧೆಗೆ ವಿಶ್ವದ ಮೂಲೆ ಮೂಲೆಗಳಿಂದ ಅನೇಕ ಸ್ಪರ್ಧಿಗಳು ಬಂದಿದ್ದರು. ವಿನೋದ್ ಫಿಟ್ನೆಸ್ ಮಾಡೆಲ್ ವಿಭಾಗದಲ್ಲಿ ಮೊದಲನೆ ಸ್ಥಾನ ಹಾಗೂ ಬಾಡಿ ಸ್ಟೈಲ್ ಪೋಸಿಂಗ್‌ನಲ್ಲಿ ಮೂರನೆಯ ಸ್ಥಾನ ಪಡೆಸಿದ್ದಾರೆ. ಅಷ್ಟೇ ಅಲ್ಲ ಮೆನ್ಸ್ ಫಿಸಿಕ್ಸ್ ನಲ್ಲಿ ಐದನೇ ಸ್ಥಾನ ಪಡೆದಿದ್ದರೆ.
ಸದ್ಯ ಇವರಿಬ್ಬರು ಮೈಸೂರಿನ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸಿದ್ದಾರೆ. ಪರಿಕ್ಷೀತ್ ಕಿಕ್ ಬಾಕ್ಸಿಂಗ್‌ನಲ್ಲಿ ಮತ್ತಷ್ಟು ಸಾಧನೆ ಮಾಡಬೇಕೆಂಬ ಕನಸು ಕಟ್ಟಿಕೊಂಡಿದ್ದರೆ, ವಿನೋದ್ ಒಲಂಪಿಕ್‌ನಲ್ಲಿ ದೇಶವನ್ನು ಪ್ರತಿನಿಧಿಸಬೇಕೆಂಬ ಮಹದಾಶೆ ಹೊಂದಿದ್ದಾರೆ. ಇಬ್ಬರ ಕನಸು ನನಸಾಗಲಿ ಇಬ್ಬರು ದೇಶಕ್ಕೆ ಮತ್ತಷ್ಟು ಕೀರ್ತಿ ತರಲಿ ಅನ್ನೋದೆ ಎಲ್ಲರ ಆಶಯ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪುನೀತ್ ರಾಜ್ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ

ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ

ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ

ಕೋರ್ಟ್ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
