ಕಾಂತಾರ ಸಿನಿಮಾ ಬಳಿಕ ಹೊಸ ಸಂಕಷ್ಟ ಶುರು; ದೈವಾರಾಧನೆ ಹೆಸರಿನಲ್ಲಿ ದಂಧೆ
ಮೈಸೂರು, ಬೆಂಗಳೂರು ಭಾಗದಲ್ಲಿ ಕೋಲ ಸೇವೆ ಹೆಸರಿನಲ್ಲಿ ದೈವನಂಬಿಕೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ತುಳುನಾಡು ದೈವಾರಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೊಡ್ಡಬಳ್ಳಾಪುರ: ಕಾಂತಾರ ಸಿನಿಮಾದ ಮೂಲಕ ಕರಾವಳಿ ಭಾಗದ ಭೂತಕೋಲವನ್ನು ದೇಶಾದ್ಯಂತ ಪರಿಚಯಿಸಿದ್ದು, ಇದೀಗ ದುಡ್ಡು ಮಾಡುವುದಕ್ಕಾಗಿ ಅಲ್ಲಲ್ಲಿ ದೈವ ಕಟ್ಟೆಗಳನ್ನು ನಿರ್ಮಿಸಿ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಡೆಯುತ್ತಿದ್ದಾರೆ. ಇದರ ಮೂಲಕ ಕೊರಗಜ್ಜನ ಸಂಸ್ಕೃತಿಗೆ ಧಕ್ಕೆ ತರುತ್ತಿದ್ದಾರೆ ಎಂದು ತುಳುನಾಡು ದೈವಾರಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರು ಪ್ರಚಾರಕ್ಕಾಗಿ ನಮ್ಮ ಕರಾವಳಿಯ ಆರಾಧ್ಯ ದೈವದ ಹೆಸರನ್ನು ಹಾಳು ಮಾಡುತ್ತಿದ್ದಾರೆ. ದೈವದ ಹೆಸರನ್ನು ಬಳಸಿ ದುಡ್ಡು ಮಾಡುತ್ತಿದ್ದಾರೆ. ಇದರಿಂದ ಜನರ ನಂಬಿಕೆಗೆ ದಕ್ಕೆಯಾಗುತ್ತಿದೆ. ಎಂದು ತುಳು ನಾಡು ದೈವರಾಧಕರು ಆರೋಪ ಮಾಡಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ