AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾಹಕ್ಕೆ ವಯಸ್ಸಿನ ಅಂತರ ಅಡ್ಡಿಯಲ್ಲ: ಪ್ರಬುದ್ಧ ಸಂಗಾತಿಯಿಂದ ಕುಟುಂಬಕ್ಕೆ ಶ್ರೇಯಸ್ಸು

ವಿವಾಹಕ್ಕೆ ವಯಸ್ಸಿನ ಅಂತರ ಅಡ್ಡಿಯಲ್ಲ: ಪ್ರಬುದ್ಧ ಸಂಗಾತಿಯಿಂದ ಕುಟುಂಬಕ್ಕೆ ಶ್ರೇಯಸ್ಸು

ಅಕ್ಷಯ್​ ಪಲ್ಲಮಜಲು​​
|

Updated on:May 06, 2026 | 7:26 AM

Share

ಪ್ರಾಚೀನ ಕಾಲದಿಂದಲೂ ವಿವಾಹದಲ್ಲಿ ವಯಸ್ಸಿನ ಅಂತರದ ಬಗ್ಗೆ ಚರ್ಚೆಗಳಿವೆ. ಗಂಡು ತಮ್ಮಿಗಿಂತ ಹಿರಿಯ ವಯಸ್ಸಿನ ಮಹಿಳೆಯರನ್ನು ಮದುವೆಯಾಗುವುದು ಶುಭವೇ, ಅಶುಭವೇ ಎಂಬ ಪ್ರಶ್ನೆಗೆ, ಯಾವುದೇ ಶಾಸ್ತ್ರಗಳಲ್ಲಿ ಇದಕ್ಕೆ ನಿರ್ಬಂಧವಿಲ್ಲ. ವಸಿಷ್ಠ-ಅರುಂಧತಿ, ಅರ್ಜುನ-ಉಲೂಪಿ, ಶ್ರೀಕೃಷ್ಣ-ಸತ್ಯಭಾಮಾ ಸೇರಿದಂತೆ ಪುರಾಣ ಮತ್ತು ಆಧುನಿಕ ಕಾಲದ ಅನೇಕ ಉದಾಹರಣೆಗಳು ಇದಕ್ಕೆ ಪೂರಕವಾಗಿವೆ. ಹಿರಿಯ ವಯಸ್ಸಿನ ಹೆಣ್ಣಿನ ಅನುಭವವು ಕುಟುಂಬದ ಪ್ರಗತಿಗೆ ಸಹಕಾರಿಯಾಗುತ್ತದೆ.

ಬೆಂಗಳೂರು, ಮೇ.6: ವಿವಾಹವು ಮನುಷ್ಯನ ಜೀವನದಲ್ಲಿ ಒಂದು ಪ್ರಮುಖ ಘಟ್ಟ. ಅನಾದಿ ಕಾಲದಿಂದಲೂ ಗಂಡನ ವಯಸ್ಸು ಹೆಚ್ಚಿದ್ದು, ಹೆಣ್ಣಿನ ವಯಸ್ಸು ಕಡಿಮೆಯಿರುವುದು ಸಾಮಾನ್ಯವಾಗಿದೆ. ಆದರೆ, ಕಾಲ ಬದಲಾದಂತೆ, ಪುರುಷರು ತಮ್ಮಿಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರನ್ನು ಮದುವೆಯಾಗುವುದು ಶುಭವೇ ಅಥವಾ ಅಶುಭವೇ ಎಂಬ ಪ್ರಶ್ನೆ ಉದ್ಭವಿಸಿದೆ. ಶಾಸ್ತ್ರೀಯವಾಗಿ ಪರಿಶೀಲಿಸಿದಾಗ, ಯಾವುದೇ ಧರ್ಮಗ್ರಂಥಗಳಲ್ಲಿ ಗಂಡಿಗಿಂತ ಹೆಣ್ಣು ವಯಸ್ಸಿನಲ್ಲಿ ಹೆಚ್ಚಿದ್ದರೆ ಮದುವೆಯಾಗಬಾರದು ಎಂದು ಹೇಳಿಲ್ಲ. ಬದಲಾಗಿ, ಕಾಲಾಂತರದಲ್ಲಿ ಸಮಾಜದ ಚಿಂತನೆಗಳು ಬದಲಾಗಿವೆ. ಪುರಾಣಗಳನ್ನು ಗಮನಿಸಿದರೆ, ವಸಿಷ್ಠ ಋಷಿ-ಅರುಂಧತಿ, ಚಂದ್ರ-ತಾರೆ, ಅರ್ಜುನ-ಉಲೂಪಿ ಮತ್ತು ಶ್ರೀಕೃಷ್ಣ-ಸತ್ಯಭಾಮಾ ಅವರ ವಿವಾಹಗಳಲ್ಲಿ ಹೆಣ್ಣಿನ ವಯಸ್ಸು ಹೆಚ್ಚಾಗಿತ್ತು ಎಂದು ಉಲ್ಲೇಖಿಸಲಾಗಿದೆ. ಇಂದಿಗೂ ಸಚಿನ್ ತೆಂಡೂಲ್ಕರ್, ಅಭಿಷೇಕ್ ಬಚ್ಚನ್, ನಟಿ ಜಯಂತಿ ಮತ್ತು ಸೈಫ್ ಅಲಿ ಖಾನ್ ಅವರಂತಹ ಅನೇಕ ವ್ಯಕ್ತಿಗಳು ತಮ್ಮಿಗಿಂತ ವಯಸ್ಸಾದ ಸಂಗಾತಿಗಳನ್ನು ಮದುವೆಯಾಗಿದ್ದಾರೆ. ಹಿರಿಯ ವಯಸ್ಸಿನ ಹೆಣ್ಣು ತನ್ನ ಅನುಭವ, ಪ್ರಬುದ್ಧ ಆಲೋಚನೆಗಳಿಂದ ಕುಟುಂಬಕ್ಕೆ ಮತ್ತು ಗಂಡನಿಗೆ ಪೂರಕವಾಗಿ ನಿಲ್ಲುತ್ತಾಳೆ. ಇದು ಕುಟುಂಬದಲ್ಲಿ ಶ್ರೇಯಸ್ಸು, ಪ್ರಗತಿ ಮತ್ತು ಅಭಿವೃದ್ಧಿಗೆ ಕಾರಣವಾಗುತ್ತದೆ. ವಿವಾಹವು ದೈವ ಸಂಕಲ್ಪವಾಗಿದ್ದು, ವಯಸ್ಸಿನ ಅಂತರವು ಕುಟುಂಬದ ಸುಖಮಯ ಜೀವನಕ್ಕೆ ಅಡ್ಡಿಯಾಗುವುದಿಲ್ಲ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: May 06, 2026 07:26 AM
Follow Us