Davanagere: ಕೃಷಿಮೇಳದಲ್ಲಿ ಪ್ರಗತಿಪರ ರೈತರ ಸಾಹಸಗಳನ್ನು ಉಲ್ಲೇಖಿಸಿದ ಕೃಷಿ ಸಚಿವ ಬಿಸಿ ಪಾಟೀಲ್
ಇನ್ನೊಬ್ಬರು ಜೇನು ಕೃಷಿಯನ್ನು ಉದ್ಯಮವಾಗಿ ಪರಿವರ್ತಿಸಿ ತಮ್ಮಲ್ಲಿ ಸಂಗ್ರಹವಾಗುವ ಜೇನುತಪ್ಪವನ್ನು ವೀದೇಶಗಳಿಗೆ ಮಾರಿ ವರ್ಷಕ್ಕೆ ರೂ. 2 ಕೋಟಿ ಗಳಿಸುತ್ತಿದ್ದಾರೆ ಅಂತ ಪಾಟೀಲ್ ಹೇಳಿದರು.
ದಾವಣಗೆರೆ: ಜಿಲ್ಲೆಯಲ್ಲಿ ಕೃಷಿಮೇಳವನ್ನು ಉದ್ಘಾಟಿಸಿ ಮಾತಾಡಿದ ಕೃಷಿ ಸಚಿವ ಬಿಸಿ ಪಾಟೀಲ್ (BC Patil) ಅವರು ಜನ ಇತ್ತೀಚಿಗೆ ಕೃಷಿ ಬಗ್ಗೆ ಅಸಡ್ಡೆ ಭಾವನೆಯನ್ನು ತಳೆಯುತ್ತಿದ್ದಾರೆ ಅಂತ ಹೇಳಿ ಕೆಲ ಪ್ರಗತಿಪರ ರೈತರ (progressive farmers) ಉದಾಹರಣೆಗಳನ್ನು ವಿವರಿಸಿದರು. ಕೋಲಾರದಲ್ಲಿ (Kolar) ಒಬ್ಬ ರೈತ ಕೇವಲ ಒಂದೂವರೆ ಎಕರೆ ಜಮೀನಲ್ಲಿ ರೇಷ್ಮೆ ಮತ್ತು ಕುರಿ ಸಾಕಾಣಿಕೆ ಮಾಡಿಕೊಂಡು ವರ್ಷಕ್ಕೆ ರೂ. 16 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ ಅಂತ ಅವರು ಹೇಳಿದರು. ಇನ್ನೊಬ್ಬರು ಜೇನು ಕೃಷಿಯನ್ನು ಉದ್ಯಮವಾಗಿ ಪರಿವರ್ತಿಸಿ ತಮ್ಮಲ್ಲಿ ಸಂಗ್ರಹವಾಗುವ ಜೇನುತಪ್ಪವನ್ನು ವೀದೇಶಗಳಿಗೆ ಮಾರಿ ವರ್ಷಕ್ಕೆ ರೂ. 2 ಕೋಟಿ ಗಳಿಸುತ್ತಿದ್ದಾರೆ ಅಂತ ಪಾಟೀಲ್ ಹೇಳಿದರು. ಸಿರಾ ತಾಲ್ಲೂಕಿನ ದಿಲೀಪ್ ಎನ್ನುವವರು ಸಿರಿಧಾನ್ಯಗಳನ್ನು ರೈತರಿಂದ ಖರೀದಿಸಿ ಅವುಗಳನ್ನು ಸಂಸ್ಕರಿಸಿ, ಪೌಡರ್ ಮಾಡಿ ಕರ್ನಾಟಕವಲ್ಲದೆ ನೆರೆರಾಜ್ಯಗಳಲ್ಲೂ ಮಾರುತ್ತಿದ್ದಾರಂತೆ. ಅವರು ಸುಮಾರು 450 ಮಹಿಳೆಯರಿಗೆ ಉದ್ಯೋಗ ನೀಡಿದ್ದು ಅವರ ಸಂಬಳಕ್ಕಾಗೇ ಪ್ರತಿ ತಿಂಗಳು ರೂ. 60 ಲಕ್ಷ ತೆಗೆದಿಡುತ್ತಾರೆ ಅಂತ ಬಿಸಿ ಪಾಟೀಲ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ