ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ, ಟಿವಿಕೆಗೆ ಷಣ್ಮುಗಂ ನೇತೃತ್ವದ 30 ಶಾಸಕರ ಬೆಂಬಲ
ಅಣ್ಣಾ ಡಿಎಂಕೆ ಪಕ್ಷದಲ್ಲಿ ಸ್ಪಷ್ಟವಾದ ಒಡಕು ಕಾಣಿಸಿಕೊಂಡಿದೆ. ಷಣ್ಮುಗಂ ನೇತೃತ್ವದ 30 ಶಾಸಕರ ಬಣವು ಸಿಎಂ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಬೆಂಬಲ ಘೋಷಿಸಿದೆ. ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ಡಿಎಂಕೆ ಮೈತ್ರಿ ಪ್ರಸ್ತಾಪದ ಕಾರಣಕ್ಕೆ ಈ ಬಂಡಾಯ ಎದ್ದಿದೆ. ಇದು ವಿಜಯ್ ಸರ್ಕಾರದ ಬಲವನ್ನು ಹೆಚ್ಚಿಸಿದ್ದು, ಅಣ್ಣಾ ಡಿಎಂಕೆ ಭವಿಷ್ಯದ ಬಗ್ಗೆ ಪ್ರಶ್ನೆ ಮೂಡಿಸಿದೆ.
ಚೆನ್ನೈ, ಮೇ 12: ತಮಿಳುನಾಡು ರಾಜಕಾರಣದಲ್ಲಿ ಅಣ್ಣಾ ಡಿಎಂಕೆ ಪಕ್ಷವು ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಇಬ್ಭಾಗವಾಗಿದೆ. ಸಿ.ವಿ. ಷಣ್ಮುಗಂ ನೇತೃತ್ವದ 30 ಶಾಸಕರ ಬಣವು ಮುಖ್ಯಮಂತ್ರಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ಘೋಷಿಸಿದೆ. ಅಣ್ಣಾ ಡಿಎಂಕೆ ಸ್ಥಾಪನಾ ತತ್ವಗಳಿಗೆ ವಿರುದ್ಧವಾಗಿ, ಎಡಪ್ಪಾಡಿ ಪಳನಿಸ್ವಾಮಿ ಅವರು ಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದರು ಎಂಬ ಆರೋಪವೇ ಈ ಬಂಡಾಯಕ್ಕೆ ಮುಖ್ಯ ಕಾರಣ. ಡಿಎಂಕೆಯನ್ನು ಸೈದ್ಧಾಂತಿಕ ವಿರೋಧಿ ಎಂದು ಪರಿಗಣಿಸುವ ಷಣ್ಮುಗಂ ಬಣ, ಜನಾಭಿಪ್ರಾಯವು ಸಿಎಂ ವಿಜಯ್ ಅವರ ಪರವಾಗಿದೆ ಎಂದು ಹೇಳಿದೆ. ಈ ಬೆಂಬಲದಿಂದ ವಿಜಯ್ ಸರ್ಕಾರದ ಬಲವು 150 ಶಾಸಕರಿಗಿಂತ ಹೆಚ್ಚಾಗಲಿದೆ. ಈ ನಡುವೆ ಪಳನಿಸ್ವಾಮಿ ನೇತೃತ್ವದಲ್ಲಿ ಕೇವಲ 17 ಶಾಸಕರು ಮಾತ್ರ ಉಳಿದಿದ್ದಾರೆ. ಅಣ್ಣಾ ಡಿಎಂಕೆ ಮುಂದಿನ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಷಣ್ಮುಗಂ ಬಣ ಸ್ಪಷ್ಟಪಡಿಸಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
