ಕಾಂಗ್ರೆಸ್ ಪಕ್ಷದಲ್ಲೂ ಅಲ್ಪಸಂಖ್ಯಾತರು ಅತೃಪ್ತರೇ? ರಂದೀಪ್ ಸುರ್ಜೆವಾಲಾ ಪಕ್ಷದ ಮುಸ್ಲಿಂ ನಾಯಕರನ್ನು ಭೇಟಿಯಾಗಿದ್ದು ಯಾಕೆ?

|

Updated on: Feb 14, 2023 | 5:54 PM

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕರಾದ ರಿಜ್ವಾನ್ ಅರ್ಷದ್, ಜಮೀರ್ ಅಹ್ಮದ್ ಮತ್ತು ಇನ್ನೂ ಹಲವಾರು ನಾಯಕರು ಸುರ್ಜೆವಾಲಾ ಅವರನ್ನು ಭೇಟಿಯಾದರು

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲೂ ಅಲ್ಪಸಂಖ್ಯಾತರು (minorities) ಸಂತೋಷದಿಂದ ಇಲ್ಲವೇ? ರಾಜ್ಯ ಮುಸ್ಲಿಂ ಸಮುದಾಯದ ಕೆಲ ಶಾಸಕರು ಮತ್ತು ನಾಯಕರ ಕರ್ನಾಟಕದ ಎಐಸಿಸಿ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ (Randeep Singh Surjewala) ಅವರನ್ನು ಪ್ರತ್ಯೇಕವಾಗಿ ನಗರದ ಹೋಟೆಲೊಂದರಲ್ಲಿ ಭೇಟಿಯಾಗಿದ್ದನ್ನು ಗಮನಿಸಿದರೆ ಇಂಥದೊಂದು ಅನುಮಾನಕ್ಕೆ ಎಡೆಮಾಡುತ್ತದೆ. ಸಭೆಯ ಅಜೆಂಡಾ ಏನಾಗಿತ್ತು ಅಂತ ನಮಗೆ ಗೊತ್ತಾಗಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕರಾದ ರಿಜ್ವಾನ್ ಅರ್ಷದ್, ಜಮೀರ್ ಅಹ್ಮದ್ (Zameer Ahmed) ಮತ್ತು ಇನ್ನೂ ಹಲವಾರು ನಾಯಕರು ಸುರ್ಜೆವಾಲಾ ಅವರನ್ನು ಭೇಟಿಯಾದರು. ಒಂದು ಮೂಲದ ಪ್ರಕಾರ ಸುರ್ಜೆವಾಲಾ ಅವರೇ ಮುಸ್ಲಿಂ ನಾಯಕರ ಸಭೆ ಕರೆದಿದ್ದರು.

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 14, 2023 05:54 PM