Assembly Polls: ವರುಣಾದಿಂದ ಸ್ಪರ್ಧಿಸುವಂತೆ ಆಪ್ತಮಿತ್ರ ಸಿದ್ದರಾಮಯ್ಯಗೆ ಸಲಹೆ ನೀಡಿದ ಸಿ ಎಮ್ ಇಬ್ರಾಹಿಂ
ಕಳೆದ ಬಾರಿಯ ಚುನಾವಣೆಯಲ್ಲಿ ಬಾದಾಮಿಗೆ ತಾವೇ ಸಿದ್ದರಾಮಯ್ಯನನ್ನು ಕಳಿಸಿದ್ದು, ಈ ಸಲ ಅವರು ಪುನಃ ವಿಧಾನ ಸಭೆಗೆ ಬರಬೇಕಾದರೆ ವರುಣದಿಂದ ಸ್ಪರ್ಧಿಸಬೇಕೆಂದು ಇಬ್ರಾಹಿಂ ಹೇಳಿದರು.
ಕೋಲಾರ: ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ ಎಮ್ ಇಬ್ರಾಹಿಂ (CM Ibrahim) ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಪ್ರಾಯಶಃ ಅರ್ಧ ಶತಮಾನದಿಂದ ದೋಸ್ತಿಗಳು. ಜೊತೆಯಾಗೇ ರಾಜಕಾರಣದಲ್ಲಿ ಬೆಳೆದವರು. ಈಗ ಬೇರೆ ಬೇರೆ ಪಕ್ಷಗಳಲ್ಲಿದ್ದಾರೆ, ಇಬ್ರಾಹಿಂ ಅವರು ಸಿದ್ದರಾಮಯ್ಯನವರ ಬಗ್ಗೆ ಕಾಮೆಂಟ್ ಮಾಡುತ್ತಿರುತ್ತಾರೆ ಆದರೆ ಸಿದ್ದರಾಮಯ್ಯ ಇಬ್ರಾಹಿಂ ಬಗ್ಗೆ ಮಾತಾಡೋದು ಬಹಳ ಕಮ್ಮಿ. ಇಂದು ಕೋಲಾರದಲ್ಲಿ (Kolar) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಇಬ್ರಾಹಿಂ, ಕಳೆದ ಬಾರಿಯ ಚುನಾವಣೆಯಲ್ಲಿ ಬಾದಾಮಿಗೆ ತಾವೇ ಸಿದ್ದರಾಮಯ್ಯನನ್ನು ಕಳಿಸಿದ್ದು, ಈ ಸಲ ಅವರು ಪುನಃ ವಿಧಾನ ಸಭೆಗೆ ಬರಬೇಕಾದರೆ ವರುಣದಿಂದ ಸ್ಪರ್ಧಿಸಬೇಕೆಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos