‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ

Updated on: Oct 03, 2024 | 5:51 PM

ಇತ್ತೀಚೆಗೆ ಧನರಾಜ್​ ಅವರು ಅತ್ತಿದ್ದರು. ಈಗ ಐಶ್ವರ್ಯಾ ಕೂಡ ಕಣ್ಣೀರು ಹಾಕುತ್ತಾ ಕುಳಿತಿದ್ದಾರೆ. ಇತರೆ ಸ್ಪರ್ಧಿಗಳ ಮಾತಿನ ಭರದಲ್ಲಿ ಐಶ್ವರ್ಯಾಗೆ ನೋವಾಗಿದೆ. ಆ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಸ್ವರ್ಗ ಮತ್ತು ನರಕದ ಕಾನ್ಸೆಪ್ಟ್​ನಲ್ಲಿ ಶೋ ಆರಂಭ ಆಗಿದೆ. ಐಶ್ವರ್ಯಾ ಅವರು ಸ್ವರ್ಗದಲ್ಲಿ ಇದ್ದರೂ ಕೂಡ ಕಣ್ಣೀರು ಹಾಕುವುದು ತಪ್ಪಲಿಲ್ಲ.

ಕಿರುತೆರೆ ನಟಿ ಐಶ್ವರ್ಯಾ ಅವರು ಬಿಗ್​ ಬಾಸ್​ ಮನೆಯಲ್ಲಿ ಗಳಗಳನೆ ಅತ್ತಿದ್ದಾರೆ. ಅವರ ಕಣ್ಣೀರಿಗೆ ಕಾರಣ ಆಗಿರುವುದು ಖಾರವಾದ ಮಾತುಗಳು. ಅಳುತ್ತಾ ಕುಳಿತ ಐಶ್ವರ್ಯಾಗೆ ಗೌತಮಿ ಜಾಧವ್, ಭವ್ಯಾ ಗೌಡ ಅವರು ಸಮಾಧಾನ ಮಾಡಿದ್ದಾರೆ. ‘ನಮ್ಮ ಮನೆಯ ಕೆಲಸದವರಿಗೂ ನಾನು ಈ ರೀತಿ ಮಾತುಗಳನ್ನು ಹೇಳಲ್ಲ’ ಎಂದು ಐಶ್ವರ್ಯಾ ಅವರು ಕಣ್ಣೀರು ಸುರಿಸಿದ್ದಾರೆ. ಐಶ್ವರ್ಯಾಗೆ ಮಾತುಗಳಿಂದ ನೋವುಂಟು ಮಾಡಿದ್ದು ಯಾರು ಎಂಬುದು ಅಕ್ಟೋಬರ್​ 3ರ ಸಂಚಿಕೆಯಲ್ಲಿ ತಿಳಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More