‘ಲವ್ ಯೂ ರಚ್ಚು ತಂಡದ ಜತೆ ನಾನು ಕಾಣಿಸಿಕೊಳ್ಳಲ್ಲ, ನಿರ್ಮಾಪಕರಿಂದ ಅವಮಾನ ಆಗಿದೆ’; ಅಜಯ್ ರಾವ್
ನಾಯಕ ಅಜಯ್ ರಾವ್ ಮಾತ್ರ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಇದು ಸಾಕಷ್ಟು ಅನುಮಾನ ಹುಟ್ಟು ಹಾಕಿತ್ತು. ಚಿತ್ರತಂಡದ ಜತೆಗೆ ಅವರು ವೈಮನಸ್ಸು ಹೊಂದಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಅಜಯ್ ರಾವ್ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ
ರಚಿತಾ ರಾಮ್ ಮತ್ತು ಅಜಯ್ ರಾವ್ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ‘ಲವ್ ಯೂ ರಚ್ಚು’ ಸಿನಿಮಾ ತಂಡ ಇತ್ತೀಚೆಗೆ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಧ್ರುವ ಸರ್ಜಾ ಆಗಮಿಸಿದ್ದರು. ಆದರೆ, ನಾಯಕ ಅಜಯ್ ರಾವ್ ಮಾತ್ರ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಇದು ಸಾಕಷ್ಟು ಅನುಮಾನ ಹುಟ್ಟು ಹಾಕಿತ್ತು. ಚಿತ್ರತಂಡದ ಜತೆಗೆ ಅವರು ವೈಮನಸ್ಸು ಹೊಂದಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಅಜಯ್ ರಾವ್ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ‘ಖಂಡಿತವಾಗಿಯೂ ನಿರ್ಮಾಪಕರ ನಡುವೆ ಮನಸ್ತಾಪ ಇದೆ. ಅವರಿಂದ ನನಗೆ ಅವಮಾನ ಆಗಿದೆ. ಅದೇನು ಎಂದು ನಾನು ಹೇಳೋಕೆ ಇಷ್ಟಪಡಲ್ಲ. ನಾನು ಚಿತ್ರತಂಡದ ಜೊತೆ ಕಾಣಿಸಿಕೊಳ್ಳಲ್ಲ. ವೈಯಕ್ತಿಕವಾಗಿ ಮಾತ್ರ ಪ್ರಚಾರ ಮಾಡ್ತಿನಿ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಧ್ರುವ ಸರ್ಜಾ ಅವರು ಆಂಜನೇಯನ ಮಗ’; ಹನುಮ ಭಕ್ತನ ಬಗ್ಗೆ ಮನಸಾರೆ ಮಾತಾಡಿದ ರಚಿತಾ ರಾಮ್