Dy CM DK Shivakumar; ಅವಕಾಶ ಎಲ್ಲರಿಗೂ ಸಿಗುತ್ತದೆ, ಶಾಸಕರು ತಾಳ್ಮೆಯಿಂದಿರಬೇಕು: ಡಿಕೆ ಶಿವಕುಮಾರ್
ತಾನು ತಾಳ್ಮೆಯಿಂದ ಇದ್ದ ಹಾಗೆಯೇ, ಈಗಿನ ಅವಕಾಶವಂಚಿತರು ಸಹ ತಾಳ್ಮೆಯಿಂದ ಇರಬೇಕು ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ಸಚಿವ ಸ್ಥಾನ ಸಿಗದೆ ಹೋಗಿರುವುದಕ್ಕೆ ಕಾಂಗ್ರೆಸ್ ಪಕ್ಷದ ಹಲವಾರಿ ಶಾಸಕರಲ್ಲಿ ಅಸಮಾಧಾನ, ಹತಾಷೆ ಮಡುಗಟ್ಟಿದೆ. ಎಲ್ಲರೂ ತಾಳ್ಮೆಯಿಂದರಬೇಕು ಮುಂದೆ ಎಲ್ಲರಿಗೆ ಅವಕಾಶ ಸಿಗಲಿದೆ ಅಂತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಎಚ್ಚರಿಕೆ ರೂಪದ ಸಲಹೆ ನೀಡಿದರು. ಇಂದು ನೂತನ ಸಚಿವರ ಪದಗ್ರಹಣ (swearing-in ceremony) ಸಮಾರಂಭದಲ್ಲಿ ಭಾಗವಹಿಸಲು ರಾಜಭವನಕ್ಕೆ ಆಗಮಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿಗಳು; ಹಿಂದೆ, ಧರಂ ಸಿಂಗ್ (Dharam Singh) ಅವರ ಅವಧಿ ಮತ್ತು ಸಿದ್ದರಾಮಯ್ಯನವರು (Siddaramaiah) ಮುಖ್ಯಮಂತ್ರಿಯಾಗಿದ್ದಾಗ ತನಗೂ ಅವಕಾಶ ಸಿಕ್ಕಿರಲಿಲ್ಲ, ಆಗ ತಾನು ತಾಳ್ಮೆಯಿಂದ ಇದ್ದ ಹಾಗೆಯೇ, ಈಗಿನ ಅವಕಾಶವಂಚಿತರು ಸಹ ತಾಳ್ಮೆಯಿಂದ ಇರಬೇಕು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Latest Videos