ದುಡ್ದಿದ್ದೆಲ್ಲಾ ಅತ್ತೆ ಕೈಗೆ ಕೊಡಬೇಕು, ಕನಿಷ್ಠ ಪಕ್ಷ 2 ಸಾವಿರ ರೂ. ನಮಗೆ ಕೊಡಿ ಎಂದ ಸೊಸೆ
ಗೃಹಲಕ್ಷ್ಮಿ ಯೋಜನೆ ಮಾತ್ರ ಅತ್ತೆ-ಸೊಸೆ ನಡುವೆ ಕಿತ್ತಾಟಕ್ಕೆ ಕಾರಣವಾಗುವ ಎಲ್ಲಾ ಸೂಚನೆ ಸಿಗುತ್ತಿದೆ ಎನ್ನಲಾಗುತ್ತಿದೆ. ಅತ್ತೆಗೆ ಮಾತ್ರ 2000 ರೂ. ಅಂದ್ರೆ ಹೇಗೆ, ನಮಗೂ ಬೇಕು ಎಂದು ಸೊಸೆ ಹೊಸ ವರಸೆ ತೆಗೆದಿದ್ದಾರೆ.
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅನ್ನೋ ಮಾತು ಇದೆ. ಆದರೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇದು ಯಾವ ಕಾಲವನ್ನುವುದು ಪ್ರಶ್ನೆಯಾಗಿದೆ. ಯಾಕೆಂದರೆ ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಅದರಲ್ಲಿಯೂ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಮಾತ್ರ ಅತ್ತೆ-ಸೊಸೆ ನಡುವೆ ಕಿತ್ತಾಟಕ್ಕೆ ಕಾರಣವಾಗುವ ಎಲ್ಲಾ ಸೂಚನೆ ಸಿಗುತ್ತಿದೆ ಎನ್ನಲಾಗುತ್ತಿದೆ. ಅತ್ತೆಗೆ ಮಾತ್ರ 2000 ರೂ. ಅಂದ್ರೆ ಹೇಗೆ, ನಮಗೂ ಬೇಕು ಎಂದು ಸೊಸೆ ಹೊಸ ವರಸೆ ತೆಗೆದಿದ್ದಾರೆ. ದುಡ್ದಿದ್ದೆಲ್ಲಾ ಅತ್ತೆ ಕೈಗೆ ಕೊಡಬೇಕು. ಕನಿಷ್ಠ ಪಕ್ಷ ಸರ್ಕಾರ ಕೊಡೊ ಆ 2 ಸಾವಿರ ರೂ. ಸೊಸೆಗೆ ಕೊಡಿ ಎನ್ನುವುದು ಅವರ ವಾದವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.