Puja at minister’s office: ಸಚಿವ ಸಂತೋಷ್ ಲಾಡ್ ಕಚೇರಿ ಪೂಜೆಗೆ ಆಗಮಿಸಿದ ಲೈಂಗಿಕ ಅಲ್ಪಾಸಂಖ್ಯಾತರು ಮನವಿಯೊಂದನ್ನು ಸಲ್ಲಿಸಿದರು

Puja at minister’s office: ಸಚಿವ ಸಂತೋಷ್ ಲಾಡ್ ಕಚೇರಿ ಪೂಜೆಗೆ ಆಗಮಿಸಿದ ಲೈಂಗಿಕ ಅಲ್ಪಾಸಂಖ್ಯಾತರು ಮನವಿಯೊಂದನ್ನು ಸಲ್ಲಿಸಿದರು

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 01, 2023 | 7:16 PM

ಪೂಜೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಮಂಗಳಮುಖಿಯರು ಅರ್ಜಿಯೊಂದನ್ನು ಸಚಿವರಿಗೆ ಸಲ್ಲಿಸಿದರು.

ಬೆಂಗಳೂರು: ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಸಂತೋಷ್ ಲಾಡ್ (Santosh Lad) ಇಂದು ವಿಧಾನ ಸೌಧದಲ್ಲಿ ತಮ್ಮ ಕಚೇರಿಯನ್ನು ಪ್ರವೇಶಿಸಿ ಕುರ್ಚಿಯಲ್ಲಿ ಆಸೀನರಾಗುವ ಮೊದಲು ವಿಶೇಷ ಪೂಜೆ ಮಾಡಿಸುವಾಗ ಅವರ ಕುಟುಂಬ ಜೊತೆಗಿತ್ತು. ಪೂಜೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಮಂಗಳಮುಖಿಯರು (transgender) ಅರ್ಜಿಯೊಂದನ್ನು ಸಚಿವರಿಗೆ ಸಲ್ಲಿಸಿದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ, ಗಾಯಕಿ ಮತ್ತು ಮೋಟಿವೇಷನಲ್ ಸ್ಪೀಕರ್ ಅಕ್ಕೈ ಪದ್ಮಶಾಲಿ (Akkai Padmashali) ಅವರು ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಮನವಿ ಪತ್ರವನ್ನು ಸಚಿವ ಲಾಡ್ ಗೆ ಸಲ್ಲಿಸಿದರು.

ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ