Hectic lobbying in Delhi: ಸಚಿವ ಸ್ಥಾನ ಕೊಡಿಸಿ ಅಂತ ಯತೀಂದ್ರ ಸಿದ್ದರಾಮಯ್ಯರ ದುಂಬಾಲು ಬಿದ್ದಿದ್ದಾರೆಯೇ ಕಲಘಟಗಿ ಶಾಸಕ ಸಂತೋಷ್ ಲಾಡ್?
ಅಷ್ಟಕ್ಕೂ, ಯತೀಂದ್ರ ಶಾಸಕರಲ್ಲ ಮತ್ತು ಅವರು ದೆಹಲಿ ಏನು ಮಾಡುತ್ತಿದ್ದಾರೆ ಅನ್ನೋದು ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ.
ದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ಕರ್ನಾಟಕ ಕಾಂಗ್ರೆಸ್ ಶಾಸಕರು (MLAs) ಅತ್ತಿಂದಿತ್ತ ಇತ್ತಿಂದತ್ತ ಆತಂಕದಲ್ಲಿ ಓಡಾಡುತ್ತಿದ್ದಾರೆ. ಯಾಕೆ ಅಂತ ಬೇರೆ ಗ್ರಹದವರಿಗೂ ಗೊತ್ತಿರುವ ಸಂಗತಿ. ಕರ್ನಾಟಕ ಸಚಿವ ಸಂಪುಟದ ಗಾತ್ರ 33 ಸದಸ್ಯರದ್ದು ಮಾತ್ರ. ಆದರೆ ಚುನಾವಣೆಯಲ್ಲಿ ಗೆದ್ದಿರುವ ಎಲ್ಲರಿಗೂ ಮಂತ್ರಿಯಾಗುವಾಸೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೈಕಮಾಂಡ್ ಜೊತೆ ಕಸರತ್ತು ನಡೆಸುತ್ತಿದ್ದಾರೆ. ಏತನ್ಮಧ್ಯೆ, ಕಲಘಟಗಿ ಶಾಸಕ ಸಂತೋಷ್ ಲಾಡ್ (Santosh Lad), ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ಜೊತೆ ಗಹನ ಚರ್ಚೆ ನಡೆಸುತ್ತಿರುವುದು ಗಮನ ಸೆಳೆದಿದೆ. ಲಾಡ್ ಸಚಿವ ಸ್ಥಾನಕ್ಕಾಗಿ ಪರದಾಡುತ್ತಿದ್ದಾರೆ ಸರಿ, ಅದರೆ, ಯತೀಂದ್ರ ಜೊತೆ ಚರ್ಚಿಸುವುದು ಏನಿರುತ್ತೆ? ಅಷ್ಟಕ್ಕೂ ಯತೀಂದ್ರ ಶಾಸಕರಲ್ಲ ಮತ್ತು ಅವರು ದೆಹಲಿ ಏನು ಮಾಡುತ್ತಿದ್ದಾರೆ ಅನ್ನೋದು ಅರ್ಥವಾಗುತ್ತಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos