ವಿಡಿಯೋ ನೋಡಿ: ತಿರುಪತಿ ತಿಮ್ಮಪ್ಪನಿಗೆ ಅದ್ಧೂರಿ ಪುಷ್ಪಯಾಗ, ಕರ್ನಾಟಕದಿಂದ 2 ಟನ್​ ಸೇರಿದಂತೆ 8 ಟನ್ ಹೂವಿನಿಂದ ಪೂಜೆ

|

Updated on: Nov 20, 2023 | 1:29 PM

ತಿರುಪತಿ ತಿಮ್ಮಪ್ಪನಿಗೆ ಅದ್ಧೂರಿ ಪುಷ್ಪಯಾಗ, ಕರ್ನಾಟಕದಿಂದ 2 ಟನ್​ ಸೇರಿದಂತೆ 8 ಟನ್ ಹೂವಿನಿಂದ ಪೂಜೆ. ಈ ವಿಶೇಷ ಘಳಿಗೆಗಾಗಿ ತಮಿಳುನಾಡಿನಿಂದ 4 ಟನ್, ಕರ್ನಾಟಕದಿಂದ 2 ಟನ್ ಮತ್ತು ಆಂಧ್ರಪ್ರದೇಶದಿಂದ 2 ಟನ್ ಹೂವು ತರಿಸಲಾಗಿತ್ತು. ಟಿಟಿಡಿ ಇಒ ಧರ್ಮಾ ರೆಡ್ಡಿ ಹೂವಿನ ದಳಗಳನ್ನು ರಥಬೀದಿಯಲ್ಲಿ ಮೆರವಣಿಗೆ ಮೂಲಕ ತಂದರು.

ತಿರುಪತಿ: ತಿರುಮಲ ತಿಮ್ಮಪ್ಪನಿಗೆ ಶ್ರೀವಾರಿ ದೇವಸ್ಥಾನದಲ್ಲಿ (Tirumala Srivari Temple) ಪುಷ್ಪಯಾಗ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಅದಕ್ಕೂ ಮುನ್ನ ಸ್ವಾಮಿಗೆ ಇಬ್ಬರೂ ದೇವತೆಗಳೊಂದಿಗೆ ಸ್ವಪನ ತಿರುಮಂಜನವನ್ನು ನೆರವೇರಿಸಲಾಯಿತು. ತಿರುಮಲದಲ್ಲಿ ಶ್ರೀವಾರಿಯ ಪುಷ್ಪಯಾಗವನ್ನು ವೈಭವದಿಂದ ನೆರವೇರಿಸಲಾಯಿತು. 17 ಬಗೆಯ ಹೂವು, ಪತ್ರೆಗಳಿಂದ ಪುಷ್ಪಯಾಗ ನೆರವೇರಿಸಿದ್ದು, ಭಕ್ತರಜನರು ಕಣ್ತುಂಬಿಕೊಂಡರು. ಪವಿತ್ರ ಕಾರ್ತಿಕ ಮಾಸದಲ್ಲಿ ಶ್ರವಣ ನಕ್ಷತ್ರದ ನಿಮಿತ್ತ ದೇವಸ್ಥಾನದಲ್ಲಿ ಪುರೋಹಿತರು ಪುಷ್ಪ ಯಾಗ (Pushpayagam) ನೆರವೇರಿಸಿದರು. ಶ್ರೀದೇವಿ ಮತ್ತು ಭೂದೇವಿ ಸಮೇತ ಮಲಯಪ್ಪಸ್ವಾಮಿಗೆ 11 ಬಗೆಯ ಪರಿಮಳಯುಕ್ತ ಹೂವುಗಳು (Flowers) ಮತ್ತು 6 ಬಗೆಯ ಎಲೆಗಳನ್ನು ಭವ್ಯವಾಗಿ ಅರ್ಪಿಸಲಾಯಿತು. ಈ ವಿಶೇಷ ಘಳಿಗೆಗಾಗಿ ತಮಿಳುನಾಡಿನಿಂದ 4 ಟನ್, ಕರ್ನಾಟಕದಿಂದ 2 ಟನ್ ಮತ್ತು ಆಂಧ್ರಪ್ರದೇಶದಿಂದ 2 ಟನ್ ಹೂವು ತರಿಸಲಾಗಿತ್ತು. ಟಿಟಿಡಿ ಇಒ ಧರ್ಮಾ ರೆಡ್ಡಿ ಹೂವಿನ ದಳಗಳನ್ನು ರಥಬೀದಿಯಲ್ಲಿ ಮೆರವಣಿಗೆ ಮೂಲಕ ತಂದರು.

ಅದಕ್ಕೂ ಮುನ್ನ ಸ್ವಾಮಿಗೆ ಇಬ್ಬರೂ ದೇವತೆಗಳೊಂದಿಗೆ ಸ್ವಪನ ತಿರುಮಂಜನವನ್ನು ನೆರವೇರಿಸಲಾಯಿತು. ಸುಗಂಧ ದ್ರವ್ಯಗಳಿಂದ ವಿಶೇಷವಾಗಿ ಅಭಿಷೇಕ ಮಾಡಲಾಯಿತು. ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪುಷ್ಪ ಯಾಗ ಮಹೋತ್ಸವವು ಕಣ್ಣಿಗೆ ಹಬ್ಬವಾಗಿ ನಡೆಯಿತು. ಅರ್ಚಕರು ಮಲಯಪ್ಪಸ್ವಾಮಿ ಮತ್ತು ಅಮ್ಮನವರ ಉತ್ಸವಕ್ಕೆ ರೇಷ್ಮೆ ವಸ್ತ್ರದಿಂದ ಅಲಂಕರಿಸಿ ವೇದಮಂತ್ರಗಳ ನಡುವೆ ಪುಷ್ಪಾರ್ಚನೆ ಮಾಡಿದರು.

ಸ್ವಾಮಿ ಮತ್ತು ಅಮ್ಮನವರನ್ನು ಚಾಮಂತಿ, ಸಂಪಿಗೆ ಮತ್ತು ನೂರು ವರಾಹ ಹೂವಿನಿಂದ ಅಲಂಕರಿಸಲಾಗಿದೆ. ವೇದ ವಿದ್ವಾಂಸರು ಋಗ್ವೇದ, ಶುಕ್ಲ ಯಜುರ್ವೇದ, ಕೃಷ್ಣ ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದಗಳನ್ನು ಪಠಿಸಿದರು. ಕಾರ್ಯಕ್ರಮದಲ್ಲಿ ಟಿಟಿಡಿ ಇಒ ಧರ್ಮರೆಡ್ಡಿ ಭಾಗವಹಿಸಿದ್ದರು. ದಾನಿಗಳ ಸಹಕಾರದಿಂದ ಪುಷ್ಪಯಾಗವನ್ನು ಮಾಡಲಾಗುವುದು ಎಂದು ಇಒ ಧರ್ಮ ರೆಡ್ಡಿ ತಿಳಿಸಿದರು.

Published on: Nov 20, 2023 01:27 PM