ಬೆಳಗಾವಿ: ನೆರೆಯ ಜೊತೆಗೆ ನದಿ ತೀರದ ಜನರಿಗೆ ಶುರುವಾಯ್ತು ಮೊಸಳೆಗಳ ಆತಂಕ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 23, 2024 | 8:52 PM

ಬೆಳಗಾವಿಯಲ್ಲಿ ನೆರೆಯ ಜೊತೆಗೆ ನದಿ ತೀರದ ಜನರಿಗೆ ಮೊಸಳೆಗಳ ಆತಂಕ ಶುರುವಾಗಿದೆ. ಹೌದು, ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಯಲ್ಲಿ ಭಾರಿ ಗಾತ್ರದ ಮೊಸಳೆಗಳು ಓಡಾಡುತ್ತಿವೆ. ದೂದಗಂಗಾ ನದಿಯ ಪ್ರವಾಹದಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ.

ಬೆಳಗಾವಿ, ಜು.23: ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, 17 ಸಂಪರ್ಕ ಸೇತುವೆಗಳು ಬೆಳಗಾವಿಯಲ್ಲಿ ಹಾಗೂ ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಯಲ್ಲಿ ಏಳು ಸೇತುವೆಗಳು ಜಲಾವೃತಗೊಂಡಿವೆ. ಇದೀಗ ಬೆಳಗಾವಿಯಲ್ಲಿ ನೆರೆಯ ಜೊತೆಗೆ ನದಿ ತೀರದ ಜನರಿಗೆ ಮೊಸಳೆಗಳ ಆತಂಕ ಶುರುವಾಗಿದೆ. ಹೌದು, ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಯಲ್ಲಿ ಭಾರಿ ಗಾತ್ರದ ಮೊಸಳೆಗಳು ಓಡಾಡುತ್ತಿವೆ. ದೂದಗಂಗಾ ನದಿಯ ಪ್ರವಾಹದಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮದ ಬಳಿ ನದಿ ನೀರಲ್ಲಿ ಮೊಸಳೆ ಓಡಾಟ ಮಾಡುತ್ತಿರುವ ವಿಡಿಯೋ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ನದಿ ತೀರಕ್ಕೆ ಇಳಿಯದಂತೆ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ