Union Budget 2024: ಕರ್ನಾಟಕಕ್ಕೆ ಅನುದಾನ ಯಾಕಿಲ್ಲ ಅಂದ್ರೆ ಬೊಮ್ಮಾಯಿ ಹೇಳಿದ್ದನ್ನೇ ಕುಮಾರಸ್ವಾಮಿ ಹೇಳಿದರು!
Union Budget 2024: ಪ್ರತಿಬಾರಿ ಬಜೆಟ್ ಮಂಡನೆಯಾದಾಗ ರಾಜ್ಯಗಳ ವಿರೋಧ ಪಕ್ಷಗಳು ಅಪಸ್ವರ ಎತ್ತುವುದನ್ನು ಶುರುವಿಟ್ಟುಕೊಳ್ಳುತ್ತವೆ, ಆದರೆ ಅದೆಲ್ಲ ಚರ್ಚೆಗಷ್ಟೇ ಸೀಮಿತ ಎಂದು ಕುಮಾರಸ್ವಾಮಿ ಹೇಳಿದರು. ಅವರು ಈಗ ಕೇಂದ್ರ ಸಚಿವರು, ತಮ್ಮ ಸರ್ಕಾರವನ್ನು ಬಿಟ್ಟುಕೊಟ್ಟಾರೆಯೇ?
ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಕರ್ನಾಟಕ್ಕೆ ಏನೂ ಕೊಟ್ಟಿಲ್ಲ ಅಂತ ಕೇಳಿದಾಗ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ್ ಬಸವರಾಜ ಬೊಮ್ಮಯಿ ನೀಡಿದ ಉತ್ತರವನ್ನೇ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸಹ ನೀಡಿದರು. ದೆಹಲಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕುಮಾರಸ್ವಾಮಿ ಬಜೆಟ್ ಭಾಷಣ ಓದುವಾಗ ರಾಜ್ಯಗಳ ಹೆಸರುಗಳನ್ನು ಉಲ್ಲೇಖಿಸುವುದಿಲ್ಲ, ರಾಜ್ಯದ ಬಜೆಟ್ ಮಂಡನೆ ಸಮಯದಲ್ಲೂ ಜಿಲ್ಲೆಗಳ ಹೆಸರುಗಳನ್ನು ಹೇಳುವುದಿಲ್ಲ, ಅದರೆ ಕೇಂದ್ರದಿಂದ ಇಲಾಖೆಗಳಿಗೆ ಬಿಡುಗಡೆಯಾಗುವ ಹಣ ಎಲ್ಲ ರಾಜ್ಯಗಳಿಗೆ ಹೋಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು. ಉದಾಹರಣೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ₹2.65 ಲಕ್ಷ ಕೋಟಿ ಹಣ ಮೀಸಲಿಡಲಾಗಿದೆ. ಆ ಹಣ ಕರ್ನಾಟಕವೂ ಸೇರಿ ಎಲ್ಲ ರಾಜ್ಯಗಳಿಗೆ ಹಂಚಿಕೆಯಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಧಿಕಾರ ದುರುಪಯೋಗದ ಬಗ್ಗೆ ಪ್ರತಿಭಟನೆ ನಡೆಸುವ ನೈತಿಕತೆ ಸಿದ್ದರಾಮಯ್ಯ ಸರ್ಕಾರಕ್ಕಿಲ್ಲ: ಕುಮಾರಸ್ವಾಮಿ