ದರ್ಶನ್ ನೋಡಲು ಬಂದ ಸಾಧು ಕೋಕಿಲ ಈ ರೀತಿ ರಿಯಾಕ್ಷನ್ ಕೊಟ್ಟಿದ್ದು ಯಾಕೆ?
ದರ್ಶನ್ ಅವರನ್ನು ಭೇಟಿ ಮಾಡಲು ಇಂದು (ಜುಲೈ 23) ಸಾಧು ಕೋಕಿಲ ಅವರು ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಕ್ಯಾಮೆರಾ ನೋಡಿದಾಗ ಈ ರೀತಿ ಪ್ರತಿಕ್ರಿಯಿಸಿದರು. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಜೈಲು ವಾಸ ಅನುಭವಿಸುತ್ತಿದ್ದಾರೆ. ಅವರ ಭೇಟಿಯಾಗಿ ಆಪ್ತರು ಮತ್ತು ಕುಟುಂಬದವರು ಬರುತ್ತಿದ್ದಾರೆ.
ನಟ ದರ್ಶನ್ ಅವರು ಚಿತ್ರರಂಗದ ಅನೇಕರ ಜೊತೆ ಒಡನಾಟ ಹೊಂದಿದ್ದಾರೆ. ಆದರೆ ಈಗ ಅವರು ರೇಣುಕಾ ಸ್ವಾಮಿಯ ಕೊಲೆ ಆರೋಪದಲ್ಲಿ ಜೈಲಿನಲ್ಲಿ ಇದ್ದಾರೆ. ದರ್ಶನ್ ಅವರನ್ನು ನೋಡಲು ಪ್ರತಿ ದಿನ ಅವರ ಆಪ್ತರು ಬರುತ್ತಿದ್ದಾರೆ. ಈಗಾಗಲೇ ವಿನೋದ್ ರಾಜ್, ವಿನೋದ್ ಪ್ರಭಾಕರ್, ತರುಣ್ ಸುಧೀರ್ ಮುಂತಾದವರು ಬಂದು ಭೇಟಿ ಮಾಡಿದ್ದಾರೆ. ಕುಟುಂಬದವರು ಕೂಡ ಆಗಾಗ ಬಂದು ಕಾನೂನಿನ ಪ್ರಕ್ರಿಯೆ ಬಗ್ಗೆ ಮಾತನಾಡುತ್ತಿದ್ದಾರೆ. ಮಂಗಳವಾರ (ಜುಲೈ 23) ನಟ ಸಾಧು ಕೋಕಿಲ ಅವರು ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ದರ್ಶನ್ ಭೇಟಿ ಮಾಡುವ ಸಲುವಾಗಿ ಜೈಲಿನ ಬಳಿ ಬಂದ ಅವರು ಮಾಧ್ಯಮಗಳ ಕ್ಯಾಮೆರಾ ಕಂಡು ಈ ರೀತಿ ರಿಯಾಕ್ಷನ್ ನೀಡಿದ್ದಾರೆ. ಹತ್ತಿರದಿಂದ ಅವರ ವಿಡಿಯೋ ಚಿತ್ರಿಸಲು ಮುಂದಾಗಿದ್ದಕ್ಕೆ ಸಾಧು ಕೋಕಿಲ ಅವರು ಹೀಗೆ ಪ್ರತಿಕ್ರಿಯಿಸಿದರು. ಇಂದು ಅವರಿಗೆ ದರ್ಶನ್ನ ಭೇಟಿಯಾಗಲು ಸಾಧ್ಯವಾಗಿಲ್ಲ. ಇನ್ನೊಂದಿನ ಬರುವುದಾಗಿ ಸಾಧು ಕೋಕಿಲ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos