ಸದನದಲ್ಲಿ ತುಳು ಭಾಷೆ ಅಬ್ಬರ: ಇದೇನು ಮಂಗಳೂರು ಅಧಿವೇಶನವಾ ಎಂದ ಆರ್ ಅಶೋಕ್
ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಬಗ್ಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸರ್ಕಾರದ ಗಮನ ಸೆಳೆದಿದ್ದು, ತುಳು ಭಾಷೆಯಲ್ಲೇ ಮಾತನಾಡಿದರು. ಈ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಇದೇನು ಮಂಗಳೂರು ಅಧಿವೇಶನವಾ ಎಂದು ತಮಾಷೆ ಮಾಡಿದ್ದಾರೆ.
ಬೆಂಗಳೂರು, ಜುಲೈ 23: ಇಂದಿನ ವಿಧಾನಸಭೆಯ (Assembly Session) ಗಮನ ಸೆಳೆಯುವ ಸೂಚನಾ ಕಲಾಪದಲ್ಲಿ ರಾಜ್ಯದಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಬಗ್ಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸರ್ಕಾರದ ಗಮನ ಸೆಳೆದರು. ತುಳು ಭಾಷೆಯಲ್ಲೇ ಶಾಸಕ ಅಶೋಕ್ ರೈ ಮಾತನಾಡಿದ್ದಾರೆ. ಈ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ (R Ashoka) ಇದೇನು ಮಂಗಳೂರು ಅಧಿವೇಶನವಾ ಎಂದು ತಮಾಷೆ ಮಾಡಿದ್ದಾರೆ. ಅಶೋಕ್ ರೈ ಪ್ರಸ್ತಾಪಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಿಜೆಪಿ ಶಾಸಕರು ಬೆಂಬಲಿಸಿದ್ದಾರೆ. ನೀವು ಸ್ಪೀಕರ್ ಆಗಿರುವಾಗ ಇದೊಂದು ಕೆಲಸ ಆಗಲಿ ಎಂದು ಶಾಸಕ ವೇದವ್ಯಾಸ ಕಾಮತ್ ಕೈ ಮುಗಿದರು. ಏನೂ ಮಂಡೆ ಬಿಸಿ ಮಾಡಬೇಡಿ, ಮಾಡಿಕೊಡುವ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jul 23, 2024 08:20 PM
Latest Videos