ಸದನದಲ್ಲಿ ಮಹಾಭಾರತದ ಪಾತ್ರಗಳನ್ನು ನೆನೆದ ಶಿವಕುಮಾರ್; ಲೇವಡಿ ಮಾಡಿದ ಅಶ್ವಥ್ ನಾರಾಯಣ!
ಬೆಂಗಳೂರು ಬಗ್ಗೆ ಮಾತಾಡುವಾಗ ಶಿವಕುಮಾರ್ ಬೆಂಗಳೂರು ಎಲ್ಲರ ಸೊತ್ತು, ಅದು ಎಲ್ಲರಿಗೂ ಸೇರಿದ್ದು ಅನ್ನುತ್ತಾರೆ. ಅದಕ್ಕೆ ಸದಸ್ಯರೆಲ್ಲ ಧ್ವನಿಗೂಡಿಸಿದಾಗ, ಅಶೋಕ ಎದ್ದು ನಿಂತು ಹಾಗೆಯೇ ಕನಕಪುರ ಕೂಡ ಎಲ್ಲರಿಗೂ ಸೇರಿದ್ದು ಅನ್ನುತ್ತಾರೆ. ಕೂಡಲೇ ಪ್ರತಿಕ್ರಿಯಿಸುವ ಶಿವಕುಮಾರ್ ಕನಕಪುರ ನಿಂದಪ್ಪ ಅಶೋಕಾ ಅನ್ನುತ್ತಾರೆ.
ಬೆಂಗಳೂರು: ವಿಧಾನಸಭೆಯಲ್ಲಿ ಪ್ರತಿದಿನ ಕಿತ್ತಾಡುತ್ತಿದ್ದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಇವತ್ತು ಫಾರ್ ಎ ಚೇಂಜ್ ಫ್ರೆಂಡ್ಲೀ ಬ್ಯಾಂಟರ್ ನಡೆಯಿತು. ಡಿಕೆ ಶಿವಕುಮಾರ್ ಮಾತಾಡುವಾಗ ಮಹಾಭಾರತದ ಪಾಂಡವರನ್ನು ಉಲ್ಲೇಖಿಸಿದರು. ಗುರಿ ಸಾಧನೆಗೆ ಧರ್ಮರಾಯನ ಧರ್ಮದರ್ಶಿತ್ವ, ದಾನಶೂರ ಕರ್ಣನ ಉದಾರತೆ, ಬಲಭೀಮನ ಬಲ, ಅರ್ಜುನನ ಗುರಿ, ವಿದುರನ ನೀತಿ ಮತ್ತು ಕೃಷ್ಣನ ತಂತ್ರ ಇರಬೇಕು ಅಂದರು. ಅವರ ಮಾತಿಗೆ ನಗುತ್ತಾ ಅಡ್ಡಿಪಡಿಸಿದ ಡಾ ಸಿಎನ್ ಅಶ್ವಥ್ ನಾರಾಯಣ, ಸರ್ ನೀವು ಮಾತೇನೋ ಚೆನ್ನಾಗಿ ಆಡ್ತೀರಿ, ಅದರೆ ಮಾತು ಮತ್ತು ಕೃತಿ ನಡುವೆ ಅಜಗಜಾಂತರ ವ್ಯತ್ಯಾಸವಿದೆ ಅನ್ನುತ್ತಾರೆ. ಅದಕ್ಕೆ ಶಿವಕುಮಾರ್, ಆಡುವ ಮಾತಿಗೆ ನಾನು ಯಾವಾಗಲೂ ಬದ್ಧನಾಗಿರ್ತೀನಿ, ನಾಲಗೆಯೇ ನನ್ನ ದೊಡ್ಡ ಶಕ್ತಿ ಎನ್ನುತ್ತಾರೆ. ನಂತರ ಅವರು ಸುರೇಶ್ ಕುಮಾರ್ ಬಗ್ಗೆ ಮೆಚ್ಚುಗೆಯ ಮಾತಾಡಿ, ನಿಮ್ಮ ಬದ್ಧತೆಯನ್ನು ನಾನು ಶ್ಲಾಘಿಸುತ್ತೇನೆ, ಬೆಂಗಳೂರು ನಗರದ ಅಭಿವೃದ್ದಿಗೆ ನೀವು ಹೇಳಿರುವುದನ್ನೆಲ್ಲ ಚರ್ಚೆ ಮಾಡಿ ಅನುಷ್ಠಾನಗೊಳಿಸೋಣ ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗಂಗಾರತಿ ಮಾದರಿಯಲ್ಲಿ ಕೆಆರ್ಎಸ್ ಜಲಾಶಯದಲ್ಲಿ ಕಾವೇರಿ ಆರತಿ: ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ