AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರ ಪ್ರದೇಶ ಮತ್ತು ಬಿಹಾರಗೆ ಹೆಚ್ಚಿನ ಅನುದಾನ ಯಾಕೆ ಅಂತ ಎಲ್ಲರಿಗೂ ಗೊತ್ತು: ಸಿದ್ದರಾಮಯ್ಯ

ಆಂಧ್ರ ಪ್ರದೇಶ ಮತ್ತು ಬಿಹಾರಗೆ ಹೆಚ್ಚಿನ ಅನುದಾನ ಯಾಕೆ ಅಂತ ಎಲ್ಲರಿಗೂ ಗೊತ್ತು: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 23, 2024 | 6:39 PM

Share

ಬಿಹಾರ ಮತ್ತು ಆಂದ್ರ ಪ್ರದೇಶ ರಾಜ್ಯಗಳಿಗೆ ನೀಡಿರುವ ಅನುದಾನದ ಬಗ್ಗೆ ರಾಜ್ಯದಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ . ರಾಜ್ಯದ ಬಿಜೆಪಿ ನಾಯಕರು ಅದಕ್ಕೆ ನೀಡುವ ಸಮರ್ಥನೆ ಅಸಂಜಸವಾಗಿದೆ. ಆದರೆ ಕಾಂಗ್ರೆಸ್ ನಾಯಕರು ನಿರ್ಮಲಾ ಸೀತಾರಾಮನ್ ಅವರನ್ನು ರಾಜ್ಯದಿಂದ ರಾಜ್ಯಸಭೆ ಪದೇಪದೆ ಕಳಿಸಿದರೂ ಅವರಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನ ಆಗುತ್ತಿಲ್ಲ ಎನ್ನುತ್ತಿದ್ದಾರೆ.

ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವತ್ತು ಸಂಸತ್ತಿನಲ್ಲಿ 2024-25 ಸಾಲಿನ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ ಎಂದು ಹೇಳಿದರು. ಹಣಕಾಸು ಸಚಿವೆ ನಿರ್ಮಲಾ ಅವರು ಮಂಡಿಸಿದ ಬಜೆಟ್ ಗಾತ್ರ ₹48, 21,000 ಲಕ್ಷ ಕೋಟಿ. ಅದರೆ, ಅವರು ₹ 14.1 ಲಕ್ಷ ಕೋಟಿ ಸಾಲ ಕೂಡ ತೆಗೆದುಕೊಂಡಿದ್ದಾರೆ. ಹಣಕಾಸು ಸಚಿವೆ ಆಂದ್ರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಅತಿಹೆಚ್ಚು ಅನುದಾನ ನೀಡಿದ್ದಾರೆ, ಬೇರೆ ರಾಜ್ಯಗಳಿಗೆ ಅವರು ಹೆಚ್ಚಿನ ಅನುದಾನವಾಗಲೀ ಹೊಸ ಯೋಜನೆಗಳಾಗಲೀ ನೀಡಿಲ್ಲ ಎಂದು ಹೇಳಿದರು. ಆ ಎರಡು ರಾಜ್ಯಗಳಿಗೆ ಯಾಕೆ ಹೆಚ್ಚನ ಅನುದಾನ ಸಿಕ್ಕಿದೆ ಅಂತ ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಉಳಿಯಬೇಕಾದರೆ ಬಿಹಾರ ಮತ್ತು ಆಂದ್ರ ಪ್ರದೇಶ ರಾಜ್ಯಗಳ ನೆರವು ಬೇಕೇ ಬೇಕು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಅಧಿಕಾರ ದುರುಪಯೋಗದ ಬಗ್ಗೆ ಪ್ರತಿಭಟನೆ ನಡೆಸುವ ನೈತಿಕತೆ ಸಿದ್ದರಾಮಯ್ಯ ಸರ್ಕಾರಕ್ಕಿಲ್ಲ: ಕುಮಾರಸ್ವಾಮಿ