AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಶಿವಭಕ್ತನ ಪ್ರಾಣ ಉಳಿಸಿದ ಮುಸ್ಲಿಂ ಯೋಧ; ಇದು ಭಾರತೀಯ ಸಂಸ್ಕೃತಿ ಎಂದ ನೆಟ್ಟಿಗರು

ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಶಿವಭಕ್ತನ ಪ್ರಾಣ ಉಳಿಸಿದ ಮುಸ್ಲಿಂ ಯೋಧ; ಇದು ಭಾರತೀಯ ಸಂಸ್ಕೃತಿ ಎಂದ ನೆಟ್ಟಿಗರು

ಸುಷ್ಮಾ ಚಕ್ರೆ
|

Updated on: Jul 23, 2024 | 5:17 PM

Share

ಉತ್ತರಾಖಂಡದ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಯುವಕನನ್ನು ರಕ್ಷಿಸಿದೆ. ನದಿಯಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆಗೆ ಎಸ್‌ಡಿಆರ್‌ಎಫ್ ಯೋಧರು ಧಾವಿಸುತ್ತಿರುವ ವಿಡಿಯೋ ಇದೀಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

ಹರಿದ್ವಾರ: ಉತ್ತರಾಖಂಡದಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಈ ಪ್ರವಾಹದಿಂದ ಗಂಗಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಪ್ರವಾಹದ ನಡುವೆ ಯುವಕ ಮುಳುಗುತ್ತಿರುವುದನ್ನು ಕಂಡ ಎಸ್​ಡಿಆರ್​ಎಫ್ ಯೋಧರು ಅವನನ್ನು ರಕ್ಷಿಸಲು ನದಿಗೆ ಹಾರಿದ್ದಾರೆ. ಅವರಿಗೆ ಓರ್ವ ಪೊಲೀಸ್ ಸಿಬ್ಬಂದಿ ಕೂಡ ಜೊತೆಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹರಿದ್ವಾರದ ಕಾಂಗ್ರಾ ಘಾಟ್‌ನಲ್ಲಿ ಸ್ನಾನ ಮಾಡುತ್ತಿದ್ದಾಗ, ದೆಹಲಿಯಿಂದ ಬಂದ ಶಿವಭಕ್ತರೊಬ್ಬರು ಗಂಗಾನದಿಯ ಬಲವಾದ ಪ್ರವಾಹದಲ್ಲಿ ಮುಳುಗಿದರು. ಉತ್ತರಾಖಂಡ್ ಪೋಲೀಸ್ ಎಸ್‌ಡಿಆರ್‌ಎಫ್ ಜವಾನ್ ಎಚ್‌ಸಿ ಆಶಿಕ್ ಅಲಿ ಕೂಡಲೆ ಗಂಗಾ ನದಿಗೆ ಹಾರಿ ಆ ಯುವಕನನ್ನು ಸುರಕ್ಷಿತವಾಗಿ ಹೊರತೆಗೆದು ಆತನ ಪ್ರಾಣ ಉಳಿಸಿದ್ದಾರೆ. ಹೀಗಾಗಿ, ಇದು ಭಾರತ ಮತ್ತು ಭಾರತದ ಸಂಸ್ಕೃತಿ. ಇಲ್ಲಿ ಹಿಂದೂಗಳು, ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ಸಹೋದರರಂತೆ ಬದುಕುತ್ತಾರೆ. ನೀವು ಇದನ್ನು ಸುಳ್ಳು ಹೇಳಲು ಸಾಧ್ಯವಿಲ್ಲ. ಒಬ್ಬ ಮುಸ್ಲಿಂ ಸಹೋದರ ತನ್ನ ಪ್ರಾಣವನ್ನು ಪಣಕ್ಕಿಟ್ಟು ಈ ಶಿವ ಭಕ್ತನನ್ನು ಉಳಿಸಿದ್ದಾನೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ