ಅಧಿಕಾರ ದುರುಪಯೋಗದ ಬಗ್ಗೆ ಪ್ರತಿಭಟನೆ ನಡೆಸುವ ನೈತಿಕತೆ ಸಿದ್ದರಾಮಯ್ಯ ಸರ್ಕಾರಕ್ಕಿಲ್ಲ: ಕುಮಾರಸ್ವಾಮಿ

ಕೇಂದ್ರೀಯ ತನಿಖಾ ದಳಗಳಾಗಿರುವ ಸಿಬಿಐ ಮತ್ತು ಈಡಿ ವಾಲ್ಮೀಕಿ ನಿಗಮ ಹಗರಣವನ್ನು ತನಿಖೆ ನಡೆಸುತ್ತಿರುವುದನ್ನು ಮತ್ತು ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಬಿ ನಾಗೇಂದ್ರ ಮೇಲೆ ತನಿಖಾಧಿಕಾರಿಗಳು ಒತ್ತಡ ಹೇರುತ್ತಿರುವರೆಂದು ಆರೋಪಿಸಿ ಸಿದ್ದರಾಮ್ಯಯ್ಯ ಸರ್ಕಾರ ಇಂದು ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿದೆ.

ಅಧಿಕಾರ ದುರುಪಯೋಗದ ಬಗ್ಗೆ ಪ್ರತಿಭಟನೆ ನಡೆಸುವ ನೈತಿಕತೆ ಸಿದ್ದರಾಮಯ್ಯ ಸರ್ಕಾರಕ್ಕಿಲ್ಲ: ಕುಮಾರಸ್ವಾಮಿ
|

Updated on: Jul 23, 2024 | 12:58 PM

ದೆಹಲಿ: ಮುಖ್ಯಮಂತ್ರಿ , ಉಪ ಮುಖ್ಯಮಂತ್ರಿ, ಮಂತ್ರಿಗಳು ಮತ್ತು ಕಾಂಗ್ರೆಸ್ ಶಾಸಕರು ಈಡಿ ಮತ್ತು ಸಿಬಿಐ ವಿರುದ್ಧ ಪ್ರತಿಭಟನೆ ನಡೆಸುತ್ತ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿರುವುದುನ್ನು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು. ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಅವರು, ಯಾವನೋ ಒಬ್ಬ ಎಂಡಿ ಕೈಯಲ್ಲಿ ಈಡಿ ವಿರುದ್ಧ ದೂರು ಕೊಡಿಸಿ ಎಫ್ಐಆರ್ ಮಾಡಿಸಿದ್ದಾರೆ. ಸರ್ಕಾರದ ಕ್ರಿಮಿನಲ್ ಮೈಂಡ್ ಸೆಟ್ ತನಗೆ ಎಲ್ಲರಿಗಿಂತ ಚೆನ್ನಾಗಿ ಗೊತ್ತಿದೆ, ತಾವೇ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕೇಂದ್ರದ ವಿರುದ್ಧ ಘೋಷನೆ ಕೂಗುವುದು ಹಾಸ್ಯಾಸ್ಪದ ಎನಿಸುತ್ತದೆ, ಪ್ರತಿಭಟನೆ ನಡೆಸುವ ನೈತಿಕತೆ ಅವರಿಗೆ ಖಂಡಿತ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು. ದೇವೇಗೌಡರ ಕುಟುಂಬವನ್ನು ನಾಶ ಮಾಡುವುದಕ್ಕೋಸ್ಕರ ವಕೀಲ ದೇವರಾಜೇಗೌಡರನ್ನು ದಾಳವಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಶಿವರಾಮೇಗೌಡ ಮಾಡಿದ್ದು ಮತ್ತು ದೇವರಾಜೇಗೌಡ ನಿರಾಕರಿಸಿದಾಗ ಅವರ ವಿರುದ್ಧ ಸುಳ್ಳು ಕೇಸ್ ಹಾಕಿಸಿ ಅರೆಸ್ಟ್ ಮಾಡಿಸಿದ್ದು ಎಲ್ಲ ಗೊತ್ತಿರುವಂಥದ್ದೇ. ಇಂಥ ಸರ್ಕಾರಕ್ಕೆ ಅಧಿಕಾರ ದುರುಪಯೋಗದ ಬಗ್ಗೆ ಧರಣಿ ನಡೆಸುವ ನೈತಿಕತೆ ಇದೆಯೇ? ಎಂದು ಕುಮಾರಸ್ವಾಮಿ ಖಾರವಾಗಿ ಕೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಡಿಸಿಎಂ ಡಿಕೆ ಶಿವಕುಮಾರ್​​ರಿಂದಲೇ ಡ್ಯಾಂಗಳು ತುಂಬಿ ತುಳುಕುತ್ತಿವೆ: ಕುಮಾರಸ್ವಾಮಿ ವ್ಯಂಗ್ಯ

Follow us