ಶಿರೂರು ಗುಡ್ಡ ಕುಸಿತ ದುರಂತ: ಮೃತದೇಹಗಳನ್ನು ಹುಡುಕುವ ಕಾರ್ಯಾಚರಣೆ ಮುಂದುವರಿದಿದೆ
ಗುಡ್ಡ ಕುಸಿದಾಗ ಉರುಳಿ ಬಿದ್ದ ಕಲ್ಲು ಮಣ್ಣು ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡೆಯಾದ ಕಾರಣ ವಾಹನ ಸಂಚಾರ ಸಂಪೂರ್ಣವಾಗಿ ನಿಂತು ಹೋಗಿದೆ. ಶೇಕಡ 70 ರಷ್ಟು ಮಣ್ಣು ತೆರವು ಕಾರ್ಯಾಚರಣೆ ಮುಗಿದಿದೆ ಎಂದು ನಮ್ಮ ವರದಿಗಾರ ಹೇಳುತ್ತಾರೆ. ಉಳಿದ ಶೇಕಡ 30ರಷ್ಟು ಮಣ್ಣನ್ನು ತೆರವುಗೊಳಿಸಲು ಕನಿಷ್ಟ ಮೂರು ದಿನಗಳಾದರೂ ಬೇಕಾಗುತ್ತದೆ.
ಕಾರವಾರ: ಜಿಲ್ಲೆಯ ಅಂಕೋಲಾ ಬಳಿ ಗುಡ್ಡ ಕುಸಿತದ ದುರಂತ ನಡೆದು 8 ದಿನ ಕಳೆದರೂ ಮಣ್ಣು ತೆರವು ಮತ್ತು ದುರಂತದಲ್ಲಿ ಬಲಿಯಾದವರ ಮೃತದೇಹಗಳನ್ನು ಹುಡುಕುವ ಕಾರ್ಯಾಚರಣೆ ಜಾರಿಯಲ್ಲಿದೆ. ನಮ್ಮ ವರದಿಗಾರ ಈಗಾಗಲೇ ನೀಡಿರುವ ಮಾಹಿತಿ ಪ್ರಕಾರ ಏಳು ಜನರ ದೇಹಗಳು ಸಿಕ್ಕಿವೆ ಮತ್ತು ಇನ್ನೂ 4 ದೇಹಗಳಿಗಾಗಿ ಶೋಧ ಕಾರ್ಯ ಮುಂದದುವರಿದಿದೆ. ಎಲ್ಲ 7 ದೇಹಗಳು ಪಕ್ಕದಲ್ಲಿ ಹರಿಯುತ್ತಿರುವ ಗಂಗಾವಳಿ ನದಿಯಲ್ಲಿ ಸಿಕ್ಕಿರುವುದರಿಂದ ಉಳಿದ ದೇಹಗಳು ನದಿಯಲ್ಲೇ ಇರುವ ಸಾಧ್ಯತೆ ಇದ್ದು ಸೇನೆ, ಎಸ್ ಡಿ ಅರ್ ಎಫ್ ಮತ್ತು ಎನ್ ಡಿಆರ್ ಎಫ್ ತಂಡಗಳು ಅಲ್ಲೇ ಶೋಧ ಕಾರ್ಯ ಮುಂದುವರಿಸಿವೆ. ಒಬ್ಬ ಟ್ರಕ್ ಡ್ರೈವರ್ ತನ್ನ ವಾಹನದೊಂದಿಗೆ ನಾಪತ್ತೆಯಾಗಿದ್ದಾನೆ ಎಂಬ ಮಾಹಿತಿಯೂ ಲಭ್ಯವಾಗಿದ್ದು ವಾಹನ ಮತ್ತು ಚಾಲಕನ ದೇಹವನ್ನು ಹುಡುಕಲಾಗುತ್ತಿದೆ. ಗುಡ್ಡದ ಕಲ್ಲು ಮಣ್ಣು ನದಿಗೆ ಜಾರಿ ನದಿ ನೀರಲ್ಲಿ ಒಂದು ನಡುಗಡ್ಡೆ ನಿರ್ಮಾಣವಾಗಿದೆ. ಅಲ್ಲಿ ದೇಹಗಳಿರಬಹುದೆಂಬ ಶಂಕೆಯಿಂದ ಹುಡುಕಾಟ ನಡೆಸಲಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಣಭೀಕರ ಮಳೆ ನಡುವೆಯೇ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ SDRF-NDRF ಜೊತೆ ಸಿಎಂ ಚರ್ಚೆ, ಮಹತ್ವದ ಸೂಚನೆ