ಅಮ್ಮ ಹೇಳಿದ ಮಾತನ್ನು ನಡೆಸಿಕೊಟ್ಟ ವಿನೋದ್ ರಾಜ್; ದರ್ಶನ್ ಭೇಟಿ ಹಿಂದಿನ ಕಾರಣ ತಿಳಿಸಿದ ನಟ
ನಟ ದರ್ಶನ್ ಅವರನ್ನು ನೋಡಲು ಅನೇಕರು ಪರಪ್ಪನ ಅಗ್ರಹಾರಕ್ಕೆ ತೆರಳುತ್ತಿದ್ದಾರೆ. ಕುಟುಂಬದವರು ಮಾತ್ರವಲ್ಲದೇ ಚಿತ್ರರಂಗದ ಆಪ್ತರು ಕೂಡ ಜೈಲಿಗೆ ಬಂದು ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ನಟ ವಿನೋದ್ ರಾಜ್ ಅವರು ಜೈಲಿಗೆ ಬಂದಿದ್ದಾರೆ. ಇದಕ್ಕೆ ಕಾರಣವನ್ನು ಅವರು ವಿವರಿಸಿದ್ದಾರೆ.
ದರ್ಶನ್ ಅವರನ್ನು ವಿನೋದ್ ರಾಜ್ ಅವರು ಭೇಟಿ ಮಾಡಿದ್ದಾರೆ. ಜುಲೈ 22ರಂದು ಈ ಭೇಟಿ ನಡೆದಿದೆ. ಜೈಲಿಗೆ ತೆರಳಿದ ವಿನೋದ್ ರಾಜ್ ಅವರು ದರ್ಶನ್ ಜೊತೆ ಮಾತುಕತೆ ನಡೆಸಿದ್ದಾರೆ. ದರ್ಶನ್ ಭೇಟಿಗೆ ತಾಯಿ ನೀಡಿದ ಹೇಳಿಕೆ ಕಾರಣ ಎಂದಿದ್ದಾರೆ. ‘ನನ್ನ ತಾಯಿ ಮಂಚದಲ್ಲಿ ಮಲಗಿದ್ದಾಗ ಒಂದು ಮಾತನ್ನು ಹೇಳಿದ್ದರು. ತೂಗುದೀಪ ಶ್ರೀನಿವಾಸ್ ಮಗ ಬೆಂಬಲ ಇಲ್ಲದೆ ಬೆಳೆದವನು. ಕಷ್ಟದಲ್ಲಿ ಬೆಳೆದ ಹುಡುಗ. ಅವನ ಜೊತೆ ಇರಬೇಕು ಎಂದಿದ್ದರು. ಅಮ್ಮ ಬದುಕಿದ್ದಾಗ ಹೇಳಿದ ಮಾತು ಇದು’ ಎಂದು ಭೇಟಿ ಹಿಂದಿನ ಕಾರಣ ತಿಳಿಸಿದ್ದಾರೆ. ‘ಈ ಘಟನೆ ಯಾಕೆ ಆಯ್ತು ಎಂದು ತುಂಬಾ ನೋವಾಗುತ್ತದೆ. ಸಡನ್ ಆಗಿ ನಡೆಯುವ ಘಟನೆಗಳು ಇವು. ಇದಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆ ಬರುತ್ತದೆ. ಅಚಾತುರ್ಯದಿಂದ ಆಗುವ ಘಟನೆಗಳು ಇವು’ ಎಂದಿದ್ದಾರೆ ವಿನೋದ್ ರಾಜ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos