ತುಂಗಭದ್ರಾಗೆ ಜೀವಕಳೆ; ಜಲಾಶಯದಿಂದ ಇಪ್ಪತ್ತು ತಿಂಗಳ ನಂತರ ನದಿಗೆ ನೀರು

ತುಂಗಭದ್ರಾಗೆ ಜೀವಕಳೆ; ಜಲಾಶಯದಿಂದ ಇಪ್ಪತ್ತು ತಿಂಗಳ ನಂತರ ನದಿಗೆ ನೀರು

ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 23, 2024 | 2:37 PM

ತುಂಗಭದ್ರಾ ಜಲಾಶಯ ಭರ್ತಿಯಾಗದೆ ಇದ್ದರಿಂದ ಕಳೆದ ವರ್ಷ ಬರಗಾಲದಿಂದ ನದಿಗೆ ನೀರನ್ನೇ ಬಿಟ್ಟಿರಲಿಲ್ಲ. ಆದ್ರೆ, ಈ ಬಾರಿ ತುಂಗಭದ್ರಾ ಜಲಾಶಯ ಭರ್ತಿಯಾಗುವ ಹಂತಕ್ಕೆ ಬಂದ ಹಿನ್ನೆಲೆ ಅಧಿಕಾರಿಗಳು ಜುಲೈ ತಿಂಗಳಲ್ಲಿಯೇ ನದಿಗೆ ನೀರು ಬಿಟ್ಟಿದ್ದಾರೆ. ಇಪ್ಪತ್ತು ತಿಂಗಳ ನಂತರ ನದಿಗೆ ನೀರು ಹರಿಯುತ್ತಿದ್ದಂತೆ ರೈತರ ಮೊಗದಲ್ಲಿ ಸಂತಸ ತುಂಬಿಕೊಂಡಿದೆ.

ಕೊಪ್ಪಳ, ಜು.23: ಭಾರಿ ಮಳೆಯಿಂದ ತುಂಗಭದ್ರಾ ಜಲಾಶಯ(Tungabhadra Dam)ಕ್ಕೆ ಜೀವಕಳೆ ಬಂದಿದೆ. ಈ ಹಿನ್ನಲೆ ಇಪ್ಪತ್ತು ತಿಂಗಳ ನಂತರ ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರಾ ನದಿ ಹರಿಯುತ್ತಿದೆ. ಹೌದು, ಜಲಾಶಯ ಭರ್ತಿಯಾಗದೆ ಇದ್ದರಿಂದ ಕಳೆದ ವರ್ಷ ಬರಗಾಲದಿಂದ ನದಿಗೆ ನೀರನ್ನೇ ಬಿಟ್ಟಿರಲಿಲ್ಲ. ಆದ್ರೆ, ಈ ಬಾರಿ ತುಂಗಭದ್ರಾ ಜಲಾಶಯ ಭರ್ತಿ ಯಾಗೋ ಹಂತಕ್ಕೆ ಬಂದ ಹಿನ್ನೆಲೆ ಅಧಿಕಾರಿಗಳು ಜುಲೈ ತಿಂಗಳಲ್ಲಿಯೇ ನದಿಗೆ ನೀರು ಬಿಟ್ಟಿದ್ದಾರೆ. 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಡ್ಯಾಂನಲ್ಲಿ,  ಇಲ್ಲಿವರೆಗೂ 91 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 87 ಸಾವಿರ ಕ್ಯೂಸೆಕ್ ನೀರಿನ ಒಳ ಹರಿವು ಇದೆ. ಇನ್ನು ನದಿಗೆ ನೀರು ಬಿಡ್ತಿದ್ದಂತೆ ನೀರು ನಾಯಿಗಳು ಪ್ರತ್ಯಕ್ಷವಾಗಿದೆ.  ತುಂಗಭದ್ರಾ ನದಿಯಲ್ಲಿ ಹೆಚ್ಚಾಗಿ ಈ ನೀರು ನಾಯಿಗಳು ಕಾಣಿಸಿಕೊಳ್ಳುತ್ತದೆ. ತುಂಗಭದ್ರಾ ಜಲಾಶಯದಿಂದ ಇಪ್ಪತ್ತು ತಿಂಗಳ ನಂತರ ನದಿಗೆ ನೀರು ಹರಿಯುತ್ತಿದ್ದಂತೆ ರೈತರ ಮೊಗದಲ್ಲಿ ಸಂತಸ ತುಂಬಿಕೊಂಡಿದೆ.

ರಾಜ್ಯದ  ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ