ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ

Updated on: Mar 01, 2026 | 1:14 PM

Alyssa Healy Records: ಹೋಬರ್ಟ್​ನ ಓವಲ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಆರಂಭಿಕಗಳಾಗಿ ಕಣಕ್ಕಿಳಿದ ಅಲಿಸಾ ಹೀಲಿ 98 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 27 ಫೋರ್​ಗಳೊಂದಿಗೆ ಬರೋಬ್ಬರಿ 158 ರನ್​ ಸಿಡಿಸಿದ್ದಾರೆ.

ಭಾರತ ಮಹಿಳಾ ತಂಡದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ್ತಿ ಅಲಿಸಾ ಹೀಲಿ ಭರ್ಜರಿ ಶತಕ ಸಿಡಿಸಿದ್ದಾರೆ. ವಿಶೇಷ ಎಂದರೆ ಇದು ಹೀಲಿ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯ. ಅಂದರೆ ವಿದಾಯ ಪಂದ್ಯದಲ್ಲಿ ಮೂರಂಕಿ ಮೊತ್ತಗಳಿಸುವ ಮೂಲಕ ಅಲಿಸಾ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಹೋಬರ್ಟ್​ನ ಓವಲ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಆರಂಭಿಕಗಳಾಗಿ ಕಣಕ್ಕಿಳಿದ ಅಲಿಸಾ ಹೀಲಿ 98 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 27 ಫೋರ್​ಗಳೊಂದಿಗೆ ಬರೋಬ್ಬರಿ 158 ರನ್​ ಸಿಡಿಸಿದ್ದಾರೆ.

ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ವಿದಾಯ ಪಂದ್ಯದಲ್ಲಿ ಗರಿಷ್ಠ ಸ್ಕೋರ್​ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಅಲಿಸಾ ಹೀಲಿ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಅಲಿಸಾ ಹೀಲಿ ಅವರ 158 ರನ್​ಗಳ ಕೊಡುಗೆಯೊಂದಿಗೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 50 ಓವರ್​ಗಳಲ್ಲಿ ಬರೋಬ್ಬರಿ 407 ರನ್​ ಕಲೆಹಾಕಿದೆ.

 

 

 

Follow Us