Karnataka Assembly Polls; ನಾನು ಶಿವರಾಜ್ ಕುಮಾರ್ ಅಭಿಮಾನಿ, ಅವರ ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ: ಪ್ರತಾಪ್ ಸಿಂಹ, ಸಂಸದ

Updated on: May 05, 2023 | 3:44 PM

ವರುಣಾ ಕ್ಷೇತದಲ್ಲಿ ಸೋಮಣ್ಣ ಸ್ಪರ್ಧಿಸುತ್ತಿದ್ದಾರೆ ಅಂತ ತಮಗೆ ಗೊತ್ತಿರಲಿಲ್ಲ, ಬಿಜೆಪಿ ನಾಯಕರು ಕರೆದಿದ್ದರೂ ಪ್ರಚಾರಕ್ಕೆ ಹೋಗುತ್ತಿದ್ದೆ ಎಂದು ಶಿವಣ್ಣ ಹೇಳಿದ್ದಾರೆ, ಅವರ ಪ್ರೀತಿಗೆ ಧನ್ಯವಾದ ಎಂದು ಸಂಸದ ಹೇಳಿದರು.

ರಾಯಚೂರು: ಸಚಿವ ವಿ ಸೋಮಣ್ಣ (V Somanna) ಹಾಗೂ ಸಂಸದ ಪ್ರತಾಪ್ ಸಿಂಹ (Pratap Simha) ಇಬ್ಬರೂ ನನ್ನ ಆಪ್ತರು ಶಿವರಾಜ್ ಕುಮಾರ್ (Shivarajkumar) ಎಂದು ಹೇಳಿದ್ದಕ್ಕೆ ಪ್ರತಾಪ್ ಸಿಂಹ ರಾಯಚೂರಿನ ಯಾಪಲದಿನ್ನಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಶಿವರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿ ತಾನು, ಅವರ ರಥಸಪ್ತಮಿ, ಮನ ಮೆಚ್ಚಿದ ಹುಡುಗಿ ಸಿನಿಮಾಗಳಿಂದ ಮೊದಲ್ಗೊಂಡು ಎಲ್ಲ ಸಿನಿಮಾಗಳನ್ನು ನೋಡಿರುವುದಾಗಿ ಪ್ರತಾಪ್ ಸಿಂಹ ಹೇಳಿದರು. ವರುಣಾ ಕ್ಷೇತದಲ್ಲಿ ಸೋಮಣ್ಣ ಸ್ಪರ್ಧಿಸುತ್ತಿದ್ದಾರೆ ಅಂತ ತಮಗೆ ಗೊತ್ತಿರಲಿಲ್ಲ, ಬಿಜೆಪಿ ನಾಯಕರು ಕರೆದಿದ್ದರೂ ಅವರ ಪ್ರಚಾರಕ್ಕೆ ಹೋಗುತ್ತಿದ್ದೆ, ತನ್ನನ್ನು ಯಾರೂ ಕರೆಯಲಿಲ್ಲ ಎಂದು ಶಿವಣ್ಣ ಹೇಳಿದ್ದಾರೆ, ಅವರ ಪ್ರೀತಿಗೆ ಧನ್ಯವಾದ ಹೇಳಿದ  ಪ್ರತಾಪ್ ಸಿಂಹ ಡಾ ರಾಜ್ ಕುಟುಂಬವನ್ನು ತಾವೆಲ್ಲ ರಾಜಕೀಯದಿಂದ ಹೊರಗಿಟ್ಟು ನೋಡುತ್ತೇವೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More