Non Veg Food Row; ಮಾಂಸದೂಟ ಸೇವಿಸಿ ದೇವಸ್ಥಾನಕ್ಕೆ ಹೋಗ್ತೀನಿ ಅನ್ನುವಷ್ಟು ದಾರ್ಷ್ಟ್ಯತೆ ನನ್ನಲ್ಲಿಲ್ಲ: ಸಿಟಿ ರವಿ
ಒಂದು ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟು ಬೆಳೆದವನು ನಾನು, ಕಾಂಗ್ರೆಸ್ ಪಕ್ಷದ ಟೂಲ್ ಕಿಟ್ ಗೆ ಬಲಿಯಾಗುವಂಥ ವ್ಯಕ್ತಿ ನಾನಲ್ಲ, ಎಂದು ರವಿ ಹೇಳುತ್ತಾರೆ.
ಮಂಡ್ಯ: ಕಾರವಾರದಲ್ಲಿ ಮಾಂಸದೂಟ ತಿಂದು ದೇವಸ್ಥಾನಕ್ಕೆ ಹೋದ ವಿವಾದ ಕುರಿತಂತೆ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ (CT Ravi) ಅವರು ಮಂಡ್ಯದಲ್ಲಿ (Mandya) ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳು ಆ ಬಗ್ಗೆ ಪ್ರಶ್ನೆ ಕೇಳಿದ ಕೂಡಲೇ ರವಿ ಒಂದೆರಡು ಕ್ಷಣ ಗಾಬರಿಯಾದರೂ ಯಾವಾಗ ಹೋಗಿದ್ದೆ ಅಂತ ಕೇಳಿ ತಾವು ಹೋಗೇ ಇಲ್ಲ ಎಂದು ಹೇಳುತ್ತಾರೆ. ಮಾಧ್ಯಮದವರು ಸಿದ್ದರಾಮಯ್ಯನವರ (Siddaramaiah) ಹೆಸರು ಪ್ರಸ್ತಾಪಿಸುವ ಮೊದಲೇ, ‘ನಾನು ಸಿದ್ದರಾಮಯ್ಯ ಥರ ಅಲ್ಲ, ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುತ್ತೇನೆ ಅಂತ ಹೇಳುವ ದಾರ್ಷ್ಟ್ಯತೆ ನನ್ನಲ್ಲಿಲ್ಲ, ಒಂದು ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟು ಬೆಳೆದವನು ನಾನು, ಕಾಂಗ್ರೆಸ್ ಪಕ್ಷದ ಟೂಲ್ ಕಿಟ್ ಗೆ ಬಲಿಯಾಗುವಂಥ ವ್ಯಕ್ತಿ ನಾನಲ್ಲ,’ ಎಂದು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ