ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಗೆ ಸಿಗಂದೂರು ಚೌಡೇಶ್ವರಿ ಸೇತುವೆ ಅಂತ ನಾಮಕರಣ ಮಾಡಿದ ನಿತಿನ್ ಗಡ್ಕರಿ
ಕರ್ನಾಟಕ ರಾಜ್ಯದಲ್ಲಿ ರಸ್ತೆ ಮತ್ತು ಹೆದ್ದಾರಿ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ, ಕೆಲ ಯೋಜನೆಗಳು ಪೂರ್ಣಗೊಂಡಿವೆ, ಕೆಲವು ಯೋಜನೆಗಳು ಜಾರಿಯಲ್ಲಿವೆ ಮತ್ತು ಮುಂಬರುವ ದಿನಗಳಲ್ಲಿ ಕೆಲವು ಆರಂಭವಾಗಲಿವೆ ಎಂದ ಸಚಿವ ಗಡ್ಕರಿ, ಒಟ್ಟು ಮೂರು ಲಕ್ಷ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ, ಮತ್ತು ಮೋದಿ ನೇತೃತ್ವದ ಸರ್ಕಾರದ 5 ವರ್ಷದ ಅವಧಿ ಕೊನೆಗೊಳ್ಳುವುದರೊಳಗೆ ಅದು 5 ಲಕ್ಷ ಕೋಟಿ ರೂ. ಆಗಲಿದೆ ಅಂತ ಹೇಳಿದರು.
ಶಿವಮೊಗ್ಗ, ಜುಲೈ 14: ದೇಶದ ಎರಡನೇ ಅತಿ ಉದ್ದ ಕೇಬಲ್ ಸೇತುವೆ ಎನಿಸಿಕೊಂಡಿರುವ ಸಿಗಂದೂರು ಸೇತುವೆಯನ್ನು (Singandur Bridge) ಉದ್ಘಾಟಿಸಿ ಮಾತಾಡಿದ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಅದಕ್ಕೆ ಸಿಗಂದೂರು ಶ್ರೀ ಚೌಡೇಶ್ವರಿ ಸೇತುವೆ ಅಂತ ನಾಮಕರಣವನ್ನೂ ಮಾಡಿದರು. ಈ ಐತಿಹಾಸಿಕ ಸೇತುವೆಯ ಭೂಮಿ ಪೂಜೆ ಮತ್ತು ಉದ್ಘಾಟನೆ ಎರಡೂ ತನ್ನಿಂದಲೇ ನೆರವೇರಿದ್ದು ಸೌಭಾಗ್ಯವೆಂದು ಭಾವಿಸುತ್ತೇನೆ, ಸೇತುವೆ ನಿರ್ಮಾಣಕ್ಕೆ ಹಲವಾರು ಆಡಚಣೆಗಳಿದ್ದವು, ಸರ್ಕಾರಕ್ಕೆ ಸಮಸ್ಯೆಗಳು ಎದುರಾಗಿದ್ದವು, ಆದರೆ ತಾಯಿ ಸಿಗಂದೂರು ಚೌಡೇಶ್ವರಿ ತಾಯಿಯ ಕೃಪೆಯಿಂದ ಎಲ್ಲವೂ ನೀಗಿ ಇವತ್ತು ಅದರ ಲೋಕಾರ್ಪಣೆಯಾಗುತ್ತಿದೆ, ಈ ಭಾಗದ ಜನತೆಗೆ ಅಭಿನಂದನೆ ಸಲ್ಲಿಸುವುದಾಗಿ ಗಡ್ಕರಿ ಹೇಳಿದರು.
ಇದನ್ನೂ ಓದಿ: Sigandur Bridge: ಸಿಗಂದೂರು ಸೇತುವೆ ವಿಶೇಷತೆಗಳೇನು? ಕೇಬಲ್ ಬ್ರಿಡ್ಜ್ನಿಂದ ಇದೆ ಹಲವು ಪ್ರಯೋಜನ
ವಿಡಿಯೋ ಸುದ್ದಿಗಳಿಗಾಗು ಕ್ಲಿಕ್ ಮಾಡಿ