[lazy-load-videos-and-sticky-control id=”QEt6u4TLd8A”]
ಕೊರೊನಾ ಭೀತಿ ಈಗ ಬೆಂಗಳೂರಿನಲ್ಲಿ ಅದ್ಯಾವ ಪರಿ ಭಯ ಹುಟ್ಟುಹಾಕಿದೆ ಅಂದ್ರೆ ಸದಾ ಗಿಜಿಗುಡುತ್ತಿದ್ದ ರಸ್ತೆಗಳು ಈಗ ಖಾಲಿ ಖಾಲಿ ಹೊಡೆಯುತ್ತಿವೆ.
ಹೌದು ಕೊರೊನಾ ಅಟ್ಟ ಹಾಸಕ್ಕೆ ಬೆಚ್ಚಿ ಬಿದ್ದಿದೆ ಬೆಂದಕಾಳೂರಿನ ಮಂದಿ. ಮನೆಯಿಂದ ಹೊರ ಬಂದ್ರೆ ಅದೆಲ್ಲಿ ಕೊರೊನಾ ಬರುತ್ತೋ ಅಂತಾ ಮನೆಯೊಳಗೆ ಇದ್ದಾರೆ ಬಹುತೇಕರು. ಪರಿಣಾಮ ಸಿಲಿಕಾನ್ ಸಿಟಿಯ ರಸ್ತೆಗಳೆಲ್ಲಾ ಖಾಲಿ ಖಾಲಿ ಹೊಡೆಯುತ್ತಿವೆ.
ಪೀಕ್ ಹವರ್ನಲ್ಲೂ ವಾಹನಗಳ ಓಡಾಟ ಅತಿ ವಿರಳವಾಗಿದೆ. ಸದಾ ಬ್ಯೂಸಿಯಾಗಿರುತ್ತಿದ್ದ ಯಶವಂತಪುರ, ಮಲ್ಲೇಶ್ವರಂ, ಶಿವಾನಂದ ಸರ್ಕಲ್ ಸೇರಿ ಹಲವಾರು ರಸ್ತೆಗಳು ಈಗ ಖಾಲಿ ಹೊಡೆಯುತ್ತಿವೆ. ಇನ್ನೊಂದೆಡೆ ಬೆಂಗಳೂರಿನಲ್ಲಿ ಕೊರೊನಾ ಕೇಸ್ಗಳ ಸಂಖ್ಯೆ ಏರುತ್ತಿದ್ದಂತೆಯೇ ಸಾಕಷ್ಟು ಜನ ಬೆಂಗಳೂರು ಬಿಟ್ಟು ಹೋಗಿದ್ದಾರೆ. ಇನ್ನೂ ಕೆಲವರು ಹೋಗುತ್ತಿದ್ದಾರೆ.
Published On - 2:39 pm, Fri, 10 July 20