ಭಯ ಪಡಬೇಕಿಲ್ಲ.. BIEC ನಲ್ಲಿದೆ ಅತ್ಯುತ್ತಮ ಕೋವಿಡ್ ಆಸ್ಪತ್ರೆ, ಏನೆಲ್ಲ ಸೇವೆಗಳಿವೆ ಗೊತ್ತಾ?
[lazy-load-videos-and-sticky-control id=”Ei9kBlHXGIw”] ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೆ ಇವೆ. ಹೀಗಾಗಿ ರಾಜ್ಯ ಸರ್ಕಾರ ತುಮಕೂರು ರಸ್ತೆಯಲ್ಲಿರುವ ಬಿಐಇಸಿಯಲ್ಲಿ ಅತ್ಯಾಧುನಿಕ ವಿಶೇಷ ಕೋವಿಡ್ ಕೇರ್ ಸೆಂಟರ್ ನಿರ್ಮಿಸಿದ್ದು ಈಗ ಅಂತಿಮ ಹಂತದಲ್ಲಿದೆ. ಹೌದು ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಒಟ್ಟು 10,100 ಬೆಡ್ ಗಳನ್ನು ಕೋವಿಡ್ ರೋಗಿಗಳಿಗಾಗಿ ವ್ಯವಸ್ಥೆ ಮಾಡಲಾಗ್ತಿದೆ. ಇದರಲ್ಲಿ ಈಗಾಗಲೇ 6000 ಬೆಡ್ ಸಿದ್ದಗೊಂಡಿವೆ. ಇನ್ನುಳಿದ 4,100 ಬೆಡ್ ರೆಡಿ ಮಾಡಲಾಗ್ತಿದೆ. ಹೀಗೆ ರೆಡಿಯಾಗಿರುವ ಮತ್ತು […]
[lazy-load-videos-and-sticky-control id=”Ei9kBlHXGIw”]
ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೆ ಇವೆ. ಹೀಗಾಗಿ ರಾಜ್ಯ ಸರ್ಕಾರ ತುಮಕೂರು ರಸ್ತೆಯಲ್ಲಿರುವ ಬಿಐಇಸಿಯಲ್ಲಿ ಅತ್ಯಾಧುನಿಕ ವಿಶೇಷ ಕೋವಿಡ್ ಕೇರ್ ಸೆಂಟರ್ ನಿರ್ಮಿಸಿದ್ದು ಈಗ ಅಂತಿಮ ಹಂತದಲ್ಲಿದೆ.
ಹೌದು ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಒಟ್ಟು 10,100 ಬೆಡ್ ಗಳನ್ನು ಕೋವಿಡ್ ರೋಗಿಗಳಿಗಾಗಿ ವ್ಯವಸ್ಥೆ ಮಾಡಲಾಗ್ತಿದೆ. ಇದರಲ್ಲಿ ಈಗಾಗಲೇ 6000 ಬೆಡ್ ಸಿದ್ದಗೊಂಡಿವೆ. ಇನ್ನುಳಿದ 4,100 ಬೆಡ್ ರೆಡಿ ಮಾಡಲಾಗ್ತಿದೆ.
ಹೀಗೆ ರೆಡಿಯಾಗಿರುವ ಮತ್ತು ರೆಡಿಯಾಗ್ತಿರುವ ಬೆಡ್ ವಿವರ ಹೀಗಿದೆ. ಈ ಕೋವಿಡ್ ಆರೈಕೆ ಕೇಂದ್ರದಲ್ಲಿ ಒಟ್ಟು ಐದು ಹಾಲ್ಗಳಿವೆ. ಇದರಲ್ಲಿ ಹಾಲ್ ನಂ 1ರಲ್ಲಿ 920 ಬೆಡ್ಗಳಿವೆ. ಹಾಲ್ ನಂ 2ರಲ್ಲಿ 872 ಬೆಡ್ಗಳಿವೆ, ಹಾಲ್ ನಂ 3ರಲ್ಲಿ 1,180 ಬೆಡ್ಗಳಿವೆ. ಹಾಲ್ ನಂ 4ರಲ್ಲಿ 1,512 ಬೆಡ್ಗಳಿದ್ದು ಹಾಲ್ ನಂ 5ರಲ್ಲಿ 1,616 ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ.
ಕೋವಿಡ್ ಕೇರ್ ಸೆಂಟರ್ನಲ್ಲಿ 2,200 ಸಿಬ್ಬಂದಿಯ ನಿಯೋಜನೆ ಇನ್ನು ಇಷ್ಟೊಂದು ಪ್ರಮಾಣದಲ್ಲಿ ಮಾಡಿರುವ ವ್ಯವಸ್ಥೆಗೆ ಇಷ್ಟೇ ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿಯನ್ನು ಕೂಡಾ ನಿಯೋಜಿಸಲಾಗ್ತಿದೆ. ರೋಗಿಗಳ ಚಿಕಿತ್ಸೆಗಾಗಿ 300 ವೈದ್ಯರು, 500 ನರ್ಸ್ಗಳು, 300 ಸಹಾಯಕರು, 400 ಶುಚಿತ್ವ ಸಿಬ್ಬಂದಿ, 300 ಮಾರ್ಷಲ್ಗಳು ಮತ್ತು 300 ಆರಕ್ಷಕ ಸಿಬ್ಬಂದಿ ಸೇರಿ ಒಟ್ಟು 2,200 ಸಿಬ್ಬಂದಿಗಳು ಕೋವಿಡ್ ಕೇರ್ ಸೆಂಟರ್ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಊಟ, ಅಲ್ಪೋಪಹಾರದ ವಿವರ ಇನ್ನು ಸಿಬ್ಬಂದಿ ಮತ್ತು ಬೆಡ್ ಜೊತೆಗೆ ಸೋಂಕಿತರಿಗೆ ನೀಡುವ ಆಹಾರದ ಪಟ್ಟಿ ಕೂಡಾ ಬಲು ರುಚಿಕರವಾಗಿದೆ. ಬೆಳಗ್ಗೆ 8ಕ್ಕೆ ಉಪಹಾರದಲ್ಲಿ ಇಡ್ಲಿ, ಪೊಂಗಲ್, ದೋಸೆ, ಚೌಚೌ ಬಾತ್ ನೀಡಲಾಗುವುದು. ಇದಾದ ನಂತರ ಬೆಳಗ್ಗೆ 10ಕ್ಕೆ ಹಣ್ಣು ಮತ್ತು ಸೂಪ್ ನೀಡಲಾಗುತ್ತೆ. ಮಧ್ಯಾಹ್ನ 12ಕ್ಕೆ ರೊಟ್ಟಿ, ಚಪಾತಿ, ಪಲ್ಯ, ಅನ್ನ, ಸಾಂಬಾರ್ ಮತ್ತು ಮೊಸರು ನೀಡಲಾಗುವುದು. ಸಂಜೆ 5ಕ್ಕೆ ಸೋಂಕಿತರಿಗೆ ನೀಡುವ ಲಘು ಉಪಹಾರದಲ್ಲಿ ಬಾಳೆಹಣ್ಣು, ಬಿಸ್ಕತ್ ಮತ್ತು ಡ್ರೈ ಫ್ರೂಟ್ಸ್ ಇರಲಿವೆ.
ಇನ್ನು ರಾತ್ರಿ 7 ಘಂಟೆಗೆ ನೀಡುವ ಊಟದಲ್ಲಿ ರೊಟ್ಟಿ, ಚಪಾತಿ, ಸಬ್ಜಿ, ಪಲ್ಯ, ಅನ್ನ, ಸಾಂಬಾರ್ ಮತ್ತು ಮೊಸರು ಇರಲಿವೆ. ಇದಾದ ನಂತರ ಅಂತಿಮವಾಗಿ ರಾತ್ರಿ ಮಲಗುವ ಮುನ್ನ ಅರಿಶಿನ ಬೆರೆಸಿದ ಬಿಸಿ ಹಾಲು ನೀಡಲಾಗುತ್ತೆ.
ಟೈಮ್ ಪಾಸ್ಗೆ ಗ್ರಂಥಾಲಯ ಮತ್ತು ಆಟೋಟಗಳ ಸೌಲಭ್ಯ ಇನ್ನು ಇಲ್ಲಿ ದಾಖಲಾಗುವ ರೋಗಿಗಳಿಗೆ ಚಿಕಿತ್ಸೆ-ಊಟೋಪಚಾರದ ಜೊತೆಗೆ ಕೆಲ ಇತರೆ ಚಟುವಟಿಕೆಗಳಿಗೂ ಅವಕಾಶವಿದೆ. ಯೋಗ ಮಾಡಲಿಚ್ಚಿಸುವವರಿಗೆ ಯೋಗ ಮಾಡಲು ಅವಕಾಶವಿದೆ. ಯಾರೂ ಮಾನಸಿಕ ಖಿನ್ನತೆಗೊಳಗಾಗಬಾರದು ಎಂದು ಪ್ರೇರಣಾತ್ಮಕ ಭಾಷಣಗಳನ್ನ ತಜ್ಞರು ನೀಡಲಿದ್ದಾರೆ. ಜೊತೆಗೆ ಬೇಜಾರು ಆಗದಿರಲೆಂದು ಟೈಮ್ ಪಾಸ್ಗೆ ಕೇರಂ, ಚೆಸ್ ಬೋರ್ಡ್ಗಳಿವೆ.
ಇನ್ನು ಮಕ್ಕಳಿಗೆ ಆಟವಾಡಲು ಬೇಕಾಗುವಂತಹ ಆಟಿಕೆಗಳು ಸಹ ಇಲ್ಲಿ ಲಭ್ಯವಿರಲಿವೆ. ಹಾಗೇಯೇ ಓದುವ ಹವ್ಯಾಸ ಇರುವವರಿಗಾಗಿ ಗ್ರಂಥಾಲಯ ಸೌಲಭ್ಯವಿದೆ. ಇಲ್ಲಿ ದಿನಪತ್ರಿಕೆಗಳು, ಮಾಸಪತ್ರಿಕೆಗಳು ಹಾಗೂ ಇಂಟರ್ನೆಟ್ ಸೌಲಭ್ಯ ಸಹ ಕಲ್ಪಿಸಲಾಗಿದೆ. ಇದೆಲ್ಲದರ ಜೊತೆಗೆ ಆರೋಗ್ಯ ತಜ್ಞರಿಂದ ವಿಶೇಷ ಭಾಷಣಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಒಟ್ಟಿನಲ್ಲಿ ಇಲ್ಲಿಗೆ ಬರುವ ರೋಗಿಗಳಿಗೆ ಯಾವುದೇ ತೊಂದರೆಯಾಗದೇ ಸಂಪೂರ್ಣವಾಗಿ ಗುಣಮುಖರಾಗಲು ಬೇಕಾದ ಎಲ್ಲ ಅತ್ಯುತ್ತಮ ಸೇವೆಗಳನ್ನ ಕಲ್ಪಿಸಲು ಅವಕಾಶವಿದೆ.
Published On - 12:31 pm, Fri, 10 July 20