ಟಿವಿ9 ಬಯಲು ಮಾಡ್ತಿದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಕರಾಳ ಬಣ್ಣ..

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಕೌರ್ಯ ಮೆರೆಯುತ್ತಿದೆ. ಈ ನಡುವೆ ಖಾಸಗಿ ಆಸ್ಪತ್ರೆಗಳ ಅಮಾನವೀಯ ವರ್ತನೆ ಎಂತವರನ್ನೂ ಬೆಚ್ಚಿ ಬೀಳಿಸುವಂತಿದೆ. ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ಖಾಸಗಿ ಆಸ್ಪತ್ರೆಗಳ ಅಸಲಿಯತ್ತು, ವಸ್ತುಸ್ಥಿತಿ ಬೆತ್ತಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ನೆಗಡಿ, ಕೆಮ್ಮು, ಜ್ವರ ಇದ್ರೆ ರೋಗಿಯನ್ನ ಹತ್ತಿರಕ್ಕೇ ಸೇರಿಸಲ್ಲ. ಕೊವಿಡ್ ರೋಗಿ ಬಿಡಿ, ಕೊವಿಡ್ ಅಲ್ಲದ ರೋಗಿಗೂ ಇಲ್ಲಿ ಡೋಂಟ್ ಕೇರ್. ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಸುಮಾರು 10 ಆಸ್ಪತ್ರೆಗಳನ್ನು ಅಲೆದಾಟಿ ಟಿವಿ9 ರಿಯಾಲಿಟಿ ಚೆಕ್​ ನಡೆಸಿ ಆಸ್ಪತ್ರೆಗಳ ಬಂಡವಾಳ […]

ಟಿವಿ9 ಬಯಲು ಮಾಡ್ತಿದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಕರಾಳ ಬಣ್ಣ..
Ayesha Banu

| Edited By: sadhu srinath

Jul 10, 2020 | 3:07 PM

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಕೌರ್ಯ ಮೆರೆಯುತ್ತಿದೆ. ಈ ನಡುವೆ ಖಾಸಗಿ ಆಸ್ಪತ್ರೆಗಳ ಅಮಾನವೀಯ ವರ್ತನೆ ಎಂತವರನ್ನೂ ಬೆಚ್ಚಿ ಬೀಳಿಸುವಂತಿದೆ. ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ಖಾಸಗಿ ಆಸ್ಪತ್ರೆಗಳ ಅಸಲಿಯತ್ತು, ವಸ್ತುಸ್ಥಿತಿ ಬೆತ್ತಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ನೆಗಡಿ, ಕೆಮ್ಮು, ಜ್ವರ ಇದ್ರೆ ರೋಗಿಯನ್ನ ಹತ್ತಿರಕ್ಕೇ ಸೇರಿಸಲ್ಲ. ಕೊವಿಡ್ ರೋಗಿ ಬಿಡಿ, ಕೊವಿಡ್ ಅಲ್ಲದ ರೋಗಿಗೂ ಇಲ್ಲಿ ಡೋಂಟ್ ಕೇರ್.

ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಸುಮಾರು 10 ಆಸ್ಪತ್ರೆಗಳನ್ನು ಅಲೆದಾಟಿ ಟಿವಿ9 ರಿಯಾಲಿಟಿ ಚೆಕ್​ ನಡೆಸಿ ಆಸ್ಪತ್ರೆಗಳ ಬಂಡವಾಳ ಬಯಲು ಮಾಡಿದೆ. ಇಲ್ಲಿ ಬಿಬಿಎಂಪಿ ಲೆಟರ್ ಕೊಟ್ರೆ ಮಾತ್ರ ಆಸ್ಪತ್ರೆಗೆ ದಾಖಲಾಗಬಹುದು. ಒಂದು ಕೊವಿಡ್ ಟೆಸ್ಟ್ ಗೆ 5 ಸಾವಿರ ಖರ್ಚಂತೆ. ಸರ್ಕಾರಿ ಆಸ್ಪತ್ರೆಯಲ್ಲಿ ಫ್ರೀ.. ಖಾಸಗಿಯಲ್ಲಿ ಸುಲಿಗೆ ಮಾಡಲಾಗುತ್ತಿದೆ. ಚಿಕಿತ್ಸೆ ಬಯಸಿ ಖಾಸಗಿ ಆಸ್ಪತ್ರೆಗೆ ಹೋದ್ರೆ ಸಾವೇ ಗತಿ.

ಸಿಎಂ ಮಾತು ನಿಜವಾಗುತ್ತಾ? ಖಾಸಗಿ ಆಸ್ಪತ್ರೆಗಳು ಸುಲಿಗೆಗೆ ಇಳಿದ್ರೆ ಸಹಿಸೋದಿಲ್ಲ ಎಂಬ ಸಿಎಂ ಮಾತು ನಿಜವಾಗುತ್ತಾ?ಸಿಎಂ ಹೇಳಿಕೆ ನಂತರವಾದ್ರೂ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಪರಿಸ್ಥಿತಿ ಬದಲಾಗುತ್ತಾ? ಅಡ್ಮಿಟ್ ಮಾಡಿಕೊಳ್ಳದಿದ್ರೆ, ಚಿಕಿತ್ಸೆ ನೀಡದಿದ್ರೆ ದೂರು ಕೊಡಿ ಅಂತ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ರು. ಆದರೆ ಖಾಸಗಿ ಆಸ್ಪತ್ರೆಗಳು ಸರ್ಕಾರದ ಆದೇಶ ಮೀರಿ ನಿಂತಿವೆ. ಹಾಗಿದ್ರೆ ಸರ್ಕಾರದ ಆದೇಶ ಪಾಲಿಸದ ಆಸ್ಪತ್ರೆಗಳ ವಿರುದ್ಧ ನಿಜಕ್ಕೂ ಕ್ರಮ ಜರುಗುತ್ತಾ? ಎಂಬ ಪ್ರಶ್ನೆ ಎದ್ದಿದೆ.

ಕೊವಿಡ್ ಭೀತಿಯ ನಡುವೆ ಅನ್ಯ ರೋಗಿಗಳ ಪರಿಸ್ಥಿತಿ ಹೇಗಿದೆ ಗೊತ್ತಾ? ಸರ್ಕಾರ ನೋಟಿಸ್ ಕೊಟ್ಟ ನಂತರವೂ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳದ್ದು ಅದೇ ದರ್ಪವಾಗಿದೆ. ಬಾಗಿಲಿಗೆ ಹೋದ ರೋಗಿಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಒಳಗೆ ಸೇರಿಸಲ್ಲ. ರೋಗಿಗಳು ನರಕಯಾತನೆ ಅನುಭವಿಸ್ತಿದ್ರೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡ್ತಿಲ್ಲ. ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಅಸಲಿಯತ್ತು ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಸಣ್ಣ ನೆಗಡಿ, ಜ್ವರ, ಕೆಮ್ಮು ಬಂದಿದ್ರೂ ಟ್ರೀಟ್ ಮೆಂಟ್ ಸಿಗೋದು ಕನಸಿನ ಮಾತೇ ಆಗಿದೆ.

[lazy-load-videos-and-sticky-control id=”rFNwcZ_MuwA”]

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada