ಬಿಬಿಎಂಪಿ ನಿಲುವಿಗೆ ಹೈಕೋರ್ಟ್ ಅಸಮಾಧಾನ, BBMPಗೆ ಫುಲ್ ಕ್ಲಾಸ್

[lazy-load-videos-and-sticky-control id=”rOTKWsYUFqQ”] ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪರಿಸ್ಥಿತಿ ಬಿಗಡಾಯಿಸುತ್ತಿರೋ ಬಗ್ಗೆ ಹೈಕೋರ್ಟ್‌ ಆತಂಕ ವ್ಯಕ್ತಪಡಿಸಿದೆ. ವಲಸೆ ಕಾರ್ಮಿಕರು ಹಾಗೂ ಕಂಟೈನ್ಮೆಂಟ್‌ ಜೋನ್‌ಗಳ ಬಗ್ಗೆ ಪಿಐಎಲ್‌ ವಿಚಾರಣೆ ನಡೆಸಿದ ಹೈಕೋರ್ಟ್‌ ಬಿಬಿಎಂಪಿಯ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿ ಸರ್ಕಾರಕ್ಕೂ ಕೆಲ ಸೂಚನೆ ಕೊಟ್ಟಿದೆ. ಹಾಗಾದ್ರೆ ಹೈಕೋರ್ಟ್‌ ಹೇಳಿದ್ದೇನು. ಈ ವರದಿ ನೋಡಿ.. ಬಿಬಿಎಂಪಿ ನಿಲುವಿಗೆ ಆಕ್ಷೇಪ.. ಹೈಕೋರ್ಟ್ ತರಾಟೆ..! ಬೆಂಗಳೂರಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೆ ಏರಿಕೆ ಕಾಣ್ತಿದೆ. ಬೆಂಗಳೂರಿನಲ್ಲೇ ಕಂಟೇನ್ಮೆಂಟ್‌ ಜೋನ್‌ಗಳ ಸಂಖ್ಯೆ 3 ಸಾವಿರ […]

ಬಿಬಿಎಂಪಿ ನಿಲುವಿಗೆ ಹೈಕೋರ್ಟ್ ಅಸಮಾಧಾನ, BBMPಗೆ ಫುಲ್ ಕ್ಲಾಸ್
ಬಿಬಿಎಂಪಿ
Follow us
ಆಯೇಷಾ ಬಾನು
| Updated By:

Updated on:Jul 10, 2020 | 12:07 PM

[lazy-load-videos-and-sticky-control id=”rOTKWsYUFqQ”]

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪರಿಸ್ಥಿತಿ ಬಿಗಡಾಯಿಸುತ್ತಿರೋ ಬಗ್ಗೆ ಹೈಕೋರ್ಟ್‌ ಆತಂಕ ವ್ಯಕ್ತಪಡಿಸಿದೆ. ವಲಸೆ ಕಾರ್ಮಿಕರು ಹಾಗೂ ಕಂಟೈನ್ಮೆಂಟ್‌ ಜೋನ್‌ಗಳ ಬಗ್ಗೆ ಪಿಐಎಲ್‌ ವಿಚಾರಣೆ ನಡೆಸಿದ ಹೈಕೋರ್ಟ್‌ ಬಿಬಿಎಂಪಿಯ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿ ಸರ್ಕಾರಕ್ಕೂ ಕೆಲ ಸೂಚನೆ ಕೊಟ್ಟಿದೆ. ಹಾಗಾದ್ರೆ ಹೈಕೋರ್ಟ್‌ ಹೇಳಿದ್ದೇನು. ಈ ವರದಿ ನೋಡಿ..

ಬಿಬಿಎಂಪಿ ನಿಲುವಿಗೆ ಆಕ್ಷೇಪ.. ಹೈಕೋರ್ಟ್ ತರಾಟೆ..! ಬೆಂಗಳೂರಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೆ ಏರಿಕೆ ಕಾಣ್ತಿದೆ. ಬೆಂಗಳೂರಿನಲ್ಲೇ ಕಂಟೇನ್ಮೆಂಟ್‌ ಜೋನ್‌ಗಳ ಸಂಖ್ಯೆ 3 ಸಾವಿರ ದಾಟಿದೆ. ಈ ನಡುವೆ ಕಂಟೇನ್ಮೆಂಟ್‌ ಜೋನ್‌ಗಳಲ್ಲಿನ ಸುಮಾರು 900 ಕುಟುಂಬಗಳಿಗೆ ಬಿಬಿಎಂಪಿ ಆಹಾರ ಒದಗಿಸುತ್ತಿಲ್ಲವೆಂಬ ಮಾಹಿತಿ ಪಡೆದಿದ್ದ ಹೈಕೋರ್ಟ್‌ ಕಂಟೇನ್ಮೆಂಟ್‌ ಪ್ರದೇಶಗಳಲ್ಲಿ ಅಗತ್ಯವಿದ್ದವರಿಗೋ ಆಹಾರ ಪೂರೈಕೆ ಬಿಬಿಎಂಪಿಯ ಕರ್ತವ್ಯ.

ಹೀಗಾಗಿ ಕೂಡಲೇ ಆಹಾರ ಒದಗಿಸಿ ಎಂದು ಸೂಚಿಸಿತ್ತು. ಆದ್ರೂ ಆಹಾರ ಪೂರೈಕೆ ಸಾಧ್ಯವಾಗಿಲ್ಲ ಎಂದು ಬಿಬಿಎಂಪಿ ವಕೀಲರು ಕೋರ್ಟ್‌ಗೆ ತಿಳಿಸಿದ್ರು. ಅಲ್ಲದೆ ಕಂಟೇನ್ಮೆಂಟ್‌ ಪ್ರದೇಶದಲ್ಲಿ ಜನ ನಿಯಮ ಪಾಲಿಸುತ್ತಿಲ್ಲ. ಹೀಗಾಗಿ ಪಡಿತರ ಮಳೆಗೆಯಲ್ಲಿ ಜನ ಆಹಾರ ಸಾಮಗ್ರಿ ಪಡೆಯಬಹುದು ಎಂದ್ರು. ಬಿಬಿಎಂಪಿ ನಿಲುವಿಗೆ ಅಚ್ಚರಿ ವ್ಯಕ್ತಪಡಿಸಿದ ಹೈಕೋರ್ಟ್‌ ಬಿಬಿಎಂಪಿಯನ್ನ ತರಾಟೆಗೆ ತೆಗೆದುಕೊಂಡಿದೆ.

ಹೈಕೋರ್ಟ್ ತರಾಟೆ ಬಿಬಿಎಂಪಿ ಕಂಟೇನ್ಮೆಂಟ್‌ ಜೋನ್‌ಗಳನ್ನು ಸೂಕ್ತವಾಗಿ ನಿರ್ವಹಿಸುತ್ತಿಲ್ಲ. ಬದಲಿಗೆ ಜನ ಕಂಟೇನ್ಮೆಂಟ್‌ ಜೋನ್ ನಿಯಮ ಪಾಲಿಸುತ್ತಿಲ್ಲವೆಂದು ಬಿಬಿಎಂಪಿಯೇ ಹೇಳುತ್ತಿದೆ. ಇದರಿಂದ ಕೊವಿಡ್‌ 19 ಸೋಂಕು ಮತ್ತಷ್ಟು ಏರಿಕೆಯಾಗಬಹುದು. 3 ಸಾವಿರ ಕಂಟೇನ್ಮೆಂಟ್‌ ಜೋನ್‌ಗಳಲ್ಲಿ ಅಗತ್ಯವಿದ್ದವರಿಗೆ ಆಹಾರ ಒದಗಿಸಬೇಕು. ಸರ್ಕಾರದ ಮಾರ್ಗಸೂಚಿಯಿದ್ದರೂ ಬಿಬಿಎಂಪಿ ಅದನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ಸರ್ಕಾರವೇ ಅಗತ್ಯ ಕ್ರಮ ಕೈಗೊಳ್ಳಬೇಕು ಅಂತ ಸೂಚನೆ ಕೊಟ್ಟಿದೆ. ವಲಸೆ ಕಾರ್ಮಿಕರು ತಮ್ಮ ರಾಜ್ಯಕ್ಕೆ ಮರಳಲು ಸರ್ಕಾರ ಒದಗಿಸಿದ್ದ ಉಚಿತ ಶ್ರಮಿಕ್ ರೈಲು ಸೇವೆಯನ್ನ ಸ್ಥಗಿತಗೊಳಿಸಿದ್ದಕ್ಕೂ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಹೈಕೋರ್ಟ್ ಅಸಮಾಧಾನ ಬೆಂಗಳೂರಿನ ಪರಿಸ್ಥಿತಿ ಹಿಂದಿಗಿಂತ ಕೆಟ್ಟದಾಗಿದೆ. ಈಗ ಉಚಿತ ರೈಲು ವ್ಯವಸ್ಥೆ ನಿಲ್ಲಿಸಿದರೆ ಕಾರ್ಮಿಕರ ಗತಿ ಏನು. ಇದು ವಲಸೆ ಕಾರ್ಮಿಕರ ಮೂಲಭೂತ ಹಕ್ಕಿನ ಪ್ರಶ್ನೆ. ಶೀಘ್ರದಲ್ಲೇ ಕೊರೊನಾ ಸೋಂಕು ಮುಗಿಯುವ ಲಕ್ಷಣಗಳಿಲ್ಲ. ಕಛೇರಿಗೆ ಬರಲು ಸಿಬ್ಬಂದಿಗಳೇ ಹೆದರುವ ಸ್ಥಿತಿ ಬರುತ್ತಿದೆ. ಕಾರ್ಮಿಕರು ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದಾರೆ. ಹೀಗಾಗಿ ಮತ್ತೆ ಕಾರ್ಮಿಕರಿಗೆ ಉಚಿತ ರೈಲು ಸೇವೆ ಒದಗಿಸುವ ಬಗ್ಗೆ ಸರ್ಕಾರ ಮರುಪರಿಶೀಲನೆ ನಡೆಸಬೇಕು ಎಂದು ಹೈಕೋರ್ಟ್ ಸಲಹೆ ಕೊಟ್ಟಿದೆ.

ಜೆೊತೆಗೆ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಸಿಗೆ ಒದಗಿಸದ ಬಗ್ಗೆಯೂ ಈಗಾಗಲೇ ಸರ್ಕಾರಕ್ಕೆ ನೋಟಿಸ್ ನೀಡಿರುವ ಹೈಕೋರ್ಟ್ ವಿಚಾರಣೆಯನ್ನ ಇಂದಿಗೆ ನಿಗದಿಪಡಿಸಿದೆ. ಒಟ್ಟಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರತಿನಿತ್ಯ ವಿಚಾರಣೆ ನಡೆಸ್ತಿರೋ ಕೋರ್ಟ್ ಆದೇಶಗಳಿಂದಲಾದ್ರೂ ಬಿಬಿಎಂಪಿ, ಸರ್ಕಾರ ಚುರುಕಾಗುತ್ತಾ ಅಂತ ನೋಡಬೇಕು.

Published On - 7:03 am, Fri, 10 July 20