ಟಿವಿ9 ವರದಿ ಬಳಿಕ ಎಚ್ಚೆತ್ತ ಸರ್ಕಾರ, ಟ್ವೀಟ್ ಮಾಡಿ ಸಚಿವ ಸುಧಾಕರ್ ಹೇಳಿದ್ದೇನು?
[lazy-load-videos-and-sticky-control id=”15u9SkjDFQA”] ಬೆಂಗಳೂರು: ಟಿವಿ9ನಲ್ಲಿ ಖಾಸಗಿ ಆಸ್ಪತ್ರೆಗಳ ಕರ್ಮಕಾಂಡ ಬಯಲಾಗುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ. ಟಿವಿ9 ವರದಿ ಪ್ರಸ್ತಾಪಿಸಿ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ. ಚಿಕಿತ್ಸೆ ಕೊಡದ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ. ಕೊರೊನಾ ಬಿಕ್ಕಟ್ಟು ಸಂದರ್ಭದಲ್ಲಿಯೂ ಬೆಂಗಳೂರಿನ ಕೆಲ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿಲ್ಲ. ನೆಗಡಿ, ಕೆಮ್ಮು, ಮೈ-ಕೈ ನೋವಿಗೂ ಚಿಕಿತ್ಸೆ ನೀಡುತ್ತಿಲ್ಲ. ಖಾಸಗಿ ಆಸ್ಪತ್ರೆಗಳು ರೋಗಿಗಳ ಬಳಿ ಹಣ ಪೀಕುತ್ತಿವೆ. ಬಿಬಿಎಂಪಿ ಲೆಟರ್ ತರಲು ಉಡಾಫೆ ಉತ್ತರ ನೀಡುತ್ತಿವೆ. ಖಾಸಗಿ ಆಸ್ಪತ್ರೆ […]
[lazy-load-videos-and-sticky-control id=”15u9SkjDFQA”]
ಬೆಂಗಳೂರು: ಟಿವಿ9ನಲ್ಲಿ ಖಾಸಗಿ ಆಸ್ಪತ್ರೆಗಳ ಕರ್ಮಕಾಂಡ ಬಯಲಾಗುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ. ಟಿವಿ9 ವರದಿ ಪ್ರಸ್ತಾಪಿಸಿ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ. ಚಿಕಿತ್ಸೆ ಕೊಡದ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.
ಕೊರೊನಾ ಬಿಕ್ಕಟ್ಟು ಸಂದರ್ಭದಲ್ಲಿಯೂ ಬೆಂಗಳೂರಿನ ಕೆಲ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿಲ್ಲ. ನೆಗಡಿ, ಕೆಮ್ಮು, ಮೈ-ಕೈ ನೋವಿಗೂ ಚಿಕಿತ್ಸೆ ನೀಡುತ್ತಿಲ್ಲ. ಖಾಸಗಿ ಆಸ್ಪತ್ರೆಗಳು ರೋಗಿಗಳ ಬಳಿ ಹಣ ಪೀಕುತ್ತಿವೆ. ಬಿಬಿಎಂಪಿ ಲೆಟರ್ ತರಲು ಉಡಾಫೆ ಉತ್ತರ ನೀಡುತ್ತಿವೆ. ಖಾಸಗಿ ಆಸ್ಪತ್ರೆ ಸಿಬ್ಬಂದಿ ಮಾತಾಡಿರುವ ಬಗ್ಗೆ, ರೋಗಿಗಳು ಪರದಾಡಿರುವ ದೃಶ್ಯ ಸಹ ಟಿವಿ9ನಲ್ಲಿ ತೋರಿಸಿದ್ದಾರೆ.
ಸಚಿವರಾದ ನನ್ನ ಗಮನಕ್ಕೂ ಈ ವಿಚಾರ ಬಂದಿದೆ. ಇಂತಹ ಅವ್ಯವಸ್ಥೆಗೆ ಕಡಿವಾಣ ಹಾಕಲು ಸರ್ಕಾರ ಬದ್ಧ. ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಟಿವಿ9 ವರದಿ ಪ್ರಸ್ತಾಪಿಸಿ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಬೆಂಗಳೂರಿನ ಕೆಲ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಕೆಮ್ಮು, ನೆಗಡಿ, ಮೈ-ಕೈ ನೋವಿಗೂ ಚಿಕಿತ್ಸೆ ನೀಡುತ್ತಿಲ್ಲ. ರೋಗಿ ಬಳಿ ಹಣ ಪೀಕುತ್ತಿವೆ. ಬಿಬಿಎಂಪಿಯಿಂದ ಲೆಟರ್ ತೆಗೆದುಕೊಂಡು ಬನ್ನಿ ಎಂದು ಉಡಾಫೆ ಉತ್ತರ ನೀಡುತ್ತಿರುವ ಸಿಬ್ಬಂದಿ ಮಾತನಾಡಿರುವುದನ್ನು ಟಿವಿ-9 ತೋರಿಸಿದೆ
— Dr Sudhakar K (@mla_sudhakar) July 10, 2020
ಮಾನವೀಯತೆ ಮರೆತು ಚಿಕಿತ್ಸೆ ಕೊಡದೇ ರೋಗಿಗಳನ್ನು ಪರದಾಡಿಸುವ ದೃಶ್ಯವನ್ನು ಸುದ್ದಿ ಸಂಸ್ಥೆ ತೋರಿಸಿದೆ. ಸಚಿವನಾದ ನನ್ನ ಗಮನಕ್ಕೂ ಬಂದಿದೆ. ನಮ್ಮ ಸರ್ಕಾರ ಇಂತಹ ಅವ್ಯವಸ್ಥೆಗೆ ಕಡಿವಾಣ ಹಾಕಲು ಬದ್ಧವಿದೆ. ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.
— Dr Sudhakar K (@mla_sudhakar) July 10, 2020
Published On - 11:00 am, Fri, 10 July 20