ಅಮಿತ್ ಶಾ ಒಬ್ಬ ರೌಡಿಯಿದ್ದಂತೆ, ಅತಂತ್ರ ಜನಾದೇಶ ಎದುರಾದಾಗ ಶಾಸಕರನ್ನು ಖರೀದಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪರಿಣಿತರು: ಬಿಕೆ ಹರಿಪ್ರಸಾದ್
ಕಾಂಗ್ರೆಸ್ ನಾಯಕರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಎಲ್ಲರೂ ಬೇರೆ ಬೇರೆ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದೇವೆ ಅಂತ ಹರಿಪ್ರಸಾದ್ ಹೇಳಿದರು.
ಉಡುಪಿ: ಕರಾವಳಿ ಪ್ರದೇಶದಲ್ಲಿ ಪ್ರಜಾಧ್ವನಿ ಯಾತ್ರೆಯ ಉಸ್ತುವಾರಿವಹಿಸಿಕೊಂಡಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ (BK Hari Prasad) ಅವರು ಇಂದು ಉಡುಪಿಯಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತಾಡುತ್ತಾ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಒಬ್ಬ ರೌಡಿ ಇದ್ದ ಹಾಗೆ, ಚುನಾವಣೆ ನಡೆದು ಯಾವ ಪಕ್ಷಕ್ಕೂ ಬಹುಮತ ಸಿಗದೆ ಅತಂತ್ರ ಸ್ಥಿತಿ (hung assembly) ಏರ್ಪಟ್ಟಾಗ ಶಾಸಕರನ್ನು ಖರೀದಿಸಿ ಬಿಜೆಪಿಯನ್ನು ಆಧಿಕಾರ ತರುವಲ್ಲಿ ನಿಸ್ಸೀಮರು ಎಂದು ಹೇಳಿದರು. ಆದರೆ ಅಂಥ ಸ್ಥಿತಿಯೇನೂ ಕರ್ನಾಟಕದಲ್ಲಿ ಈ ಬಾರಿ ಉದ್ಭವಿಸದು, ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹರಿಪ್ರಸಾದ್ ಹೇಳಿದರು. ಮುಂದುವರಿದು ಮಾತಾಡಿದ ಅವರು ಕಾಂಗ್ರೆಸ್ ನಾಯಕರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಎಲ್ಲರೂ ಬೇರೆ ಬೇರೆ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದೇವೆ ಅಂತ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ