ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರ ಹಂಚಿಕೊಂಡ ಅಮಿತ್ ಶಾ

|

Updated on: Sep 20, 2024 | 2:04 PM

ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ, ನೋವುಗಳನ್ನು ವಿವರಿಸುವ ಬಸ್ತರ್ ಶಾಂತಿ ಸಮಿತಿ ಪ್ರಸ್ತುತಪಡಿಸಿರುವ ಸಾಕ್ಷ್ಯಚಿತ್ರವನ್ನು ಗೃಹ ಸಚಿವ ಅಮಿತ್ ಶಾ ಹಂಚಿಕೊಂಡಿದ್ದಾರೆ. ಮಾನವೀಯತೆಯ ಶತ್ರುವಾದ ನಕ್ಸಲಿಸಂ ಈ ಜನರ ಜೀವನವನ್ನು ಹೇಗೆ ಹಾಳುಮಾಡಿದೆ ಎಂಬುದನ್ನು ಅದರಲ್ಲಿ ವಿವರಿಸಲಾಗಿದೆ ಎಂದು ಅಮಿತ್ ಶಾ ಬರೆದಿದ್ದಾರೆ.

ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ, ನೋವುಗಳನ್ನು ವಿವರಿಸುವ ಬಸ್ತರ್ ಶಾಂತಿ ಸಮಿತಿ ಪ್ರಸ್ತುತಪಡಿಸಿರುವ ಸಾಕ್ಷ್ಯಚಿತ್ರವನ್ನು ಗೃಹ ಸಚಿವ ಅಮಿತ್ ಶಾ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಮಾನವೀಯತೆಯ ಶತ್ರುವಾದ ನಕ್ಸಲಿಸಂ ಈ ಜನರ ಜೀವನವನ್ನು ಹೇಗೆ ಹಾಳುಮಾಡಿದೆ ಎಂಬುದನ್ನು ಅದರಲ್ಲಿ ವಿವರಿಸಲಾಗಿದೆ ಎಂದು ಅಮಿತ್ ಶಾ ಬರೆದಿದ್ದಾರೆ.

ಹಿಂಸಾಚಾರವನ್ನು ಕೈಬಿಡುವಂತೆ ನಕ್ಸಲರಿಗೆ ಮನವಿ ಮಾಡಿದರು, ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮತ್ತು ಶರಣಾಗತರಾಗಿ, ಇಲ್ಲದಿದ್ದರೆ ಅವರ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.  ನಕ್ಸಲರ ಹಿಂಸಾಚಾರ ಮತ್ತು ಸಿದ್ಧಾಂತವನ್ನು ನಾಶಪಡಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಹೇಳಿದರು.

ಉದ್ಯೋಗ, ಆರೋಗ್ಯ ಮತ್ತು ಇತರ ಕ್ಷೇತ್ರಗಳಲ್ಲಿ ನಮ್ಮ ಕಲ್ಯಾಣ ಕ್ರಮಗಳ ಮೂಲಕ ನಾವು ಯಾವುದೇ ರೀತಿಯಲ್ಲಿ ನಿಮಗೆ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ ಎಂದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published on: Sep 20, 2024 02:02 PM