ಈ ಬಾರಿ ನಾನು ಡಾರ್ಲಿಂಗ್ ಕೃಷ್ಣನ ಬಿಟ್ಟು ಹೋಗಲ್ಲ: ಅಮೃತಾ ಅಯ್ಯಂಗಾರ್

Updated on: Dec 30, 2025 | 9:55 PM

‘ಫಾದರ್’ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಅಮೃತಾ ಅಯ್ಯಂಗಾರ್ ಅಭಿನಯಿಸಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರಾಜ್ ಸಹ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿ ನಡೆದಿದೆ. ಈ ವೇಳೆ ನಟಿ ಅಮೃತಾ ಅಯ್ಯಂಗಾರ್ ಅವರು ತಮ್ಮ ಪಾತ್ರದ ಕುರಿತು ಮಾತಾಡಿದರು.

‘ಫಾದರ್’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಅಮೃತಾ ಅಯ್ಯಂಗಾರ್ (Amrutha Iyengar) ಅವರು ನಟಿಸಿದ್ದಾರೆ. ಪ್ರಕಾಶ್ ರಾಜ್ ಕೂಡ ಪ್ರಮುಖ ಪಾತ್ರದಲ್ಲಿ ಇದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ನಡೆದಿದೆ. ಈ ವೇಳೆ ಅಮೃತಾ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಅಮೃತಾ ಅವರು ಈ ಸಿನಿಮಾ ಒಪ್ಪಿಕೊಳ್ಳಲು ಡಾರ್ಲಿಂಗ್ ಕೃಷ್ಣ (Darling Krishna) ಅವರು ಕಾರಣ. ಕೃಷ್ಣ ಅವರಿಗೆ ಕಥೆ ಇಷ್ಟ ಆಗಿದ್ದರಿಂದ ಅಮೃತಾಗೆ ಸಜೆಸ್ಟ್ ಮಾಡಿದ್ದರು. ಆ ಸಂಗತಿಯನ್ನು ಅಮೃತಾ ಅವರು ವೇದಿಕೆಯಲ್ಲಿ ನೆನಪು ಮಾಡಿಕೊಂಡರು. ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಕೈ ಕೊಟ್ಟು ಹೋಗುವ ಹುಡುಗಿಯ ಪಾತ್ರವನ್ನು ಅಮೃತಾ ಅಯ್ಯಂಗಾರ್ ಮಾಡಿದ್ದರು. ಆದರೆ ‘ಫಾದರ್’ (Father) ಸಿನಿಮಾದಲ್ಲಿ ಆ ರೀತಿ ಆಗಲ್ಲ ಎಂದು ಅಮೃತಾ ಹೇಳಿದ್ದಾರೆ. ‘ಬಿಟ್ಟು ಹೋಗುವ ಪಾತ್ರಗಳನ್ನು ಆದಷ್ಟು ಬ್ರೇಕ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರನ್ನು ನಾನು ಬಿಟ್ಟು ಹೋಗಲ್ಲ’ ಎಂದು ಅಮೃತಾ ಅಯ್ಯಂಗಾರ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More