ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ; ಜೆಡಿಎಸ್ ಎಂಎಲ್​ಸಿ ಡಾ.ಸೂರಜ್ ರೇವಣ್ಣ ಜೈಲುಪಾಲು

|

Updated on: Jun 23, 2024 | 9:14 PM

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೆಡಿಎಸ್ ಎಂಎಲ್​ಸಿ ಡಾ.ಸೂರಜ್ ರೇವಣ್ಣ (Suraj Revanna) ಅವರು ಜೈಲುಪಾಲಾಗಿದ್ದಾರೆ. ಸೂರಜ್‌ನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ 42ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶರು ಆದೇಶಿಸಿದ್ದಾರೆ. ಅದರಂತೆ ಇದೀಗ ಪರಪ್ಪನ ಅಗ್ರಹಾರಕ್ಕೆ ಪೊಲೀಸರು ಕರೆದೊಯ್ದಿದ್ದಾರೆ.

ಬೆಂಗಳೂರು, ಜೂ.23: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೆಡಿಎಸ್ ಎಂಎಲ್​ಸಿ ಡಾ.ಸೂರಜ್ ರೇವಣ್ಣ (Suraj Revanna) ಅವರು ಜೈಲುಪಾಲಾಗಿದ್ದಾರೆ. ಸೂರಜ್‌ನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ 42ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶರು ಆದೇಶಿಸಿದ್ದಾರೆ. ಇಂದು(ಭಾನುವಾರ) ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್‌ನಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ಜಡ್ಜ್‌ ಮುಂದೆ ಸೂರಜ್​ನನ್ನು ಹಾಸನ ಪೊಲೀಸರು ಹಾಜರುಪಡಿಸಿದ್ದರು. ಇದೀಗ ಪರಪ್ಪನ ಅಗ್ರಹಾರಕ್ಕೆ ಪೊಲೀಸರು ಕರೆದೊಯ್ದಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 23, 2024 09:12 PM