ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಸೂರಜ್ ರೇವಣ್ಣನನ್ನು ಹಾಜರುಪಡಿಸಿದ ಪೊಲೀಸ್!

ಅರಕಲುಗೂಡಿನ ಜೆಡಿಎಸ್ ಕಾರ್ಯಕರ್ತನೊಬ್ಬನ ಮೇಲೆ ಹೊಳೆನರಸೀಪುರದ ಹೊರವಲಯದಲ್ಲಿರುವ ಫಾರ್ಮ್ ಹೌಸೊಂದರಲ್ಲಿ ಅನೈಸರ್ಗಿಕ (ಸಲಿಂಗ ಕಾಮ) ಲೈಂಗಿಕ ಕ್ರೀಡೆಯಲ್ಲಿ ತೊಡಗಿದ ಆರೋಪವನ್ನು ಸೂರಜ್ ಎದುರಿಸುತ್ತಿದ್ದಾರೆ. ಹಲವಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿರುವ ಆರೋಪದಲ್ಲಿ ಸೂರಜ್ ಕಿರಿಯ ಸಹೋದರ ಮತ್ತು ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಈಗಾಗಲೇ ಬಂಧಿಸಿ ಜೈಲಿನಲ್ಲಿರಿಸಲಾಗಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಸೂರಜ್ ರೇವಣ್ಣನನ್ನು ಹಾಜರುಪಡಿಸಿದ ಪೊಲೀಸ್!
|

Updated on: Jun 23, 2024 | 8:44 PM

ಬೆಂಗಳೂರು: ನಾವು ಈಗಾಗಲೇ ವರದಿ ಮಾಡಿದ ಯುವಕನೊಬ್ಬನ ಮೇಲೆ ಅನೈಸರ್ಗಿಕ ಲೈಂಗಿಕ ಅತ್ಯಾಚಾರ (sodomy) ನಡೆಸಿದ ಆರೋಪ ಎದುರಿಸುತ್ತಿರುವ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣರನ್ನು (Suraj Revanna) ಇಂದು ಬೆಂಗಳೂರಿಗೆ ಕರೆತರಲಾಯಿತು ಮತ್ತು ದೃಶ್ಯಗಳಲ್ಲಿ ಕಾಣುತ್ತಿರುವ ಹಾಗೆ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (People’s Representative Court) ಮುಂದೆ ಹಾಜರುಪಡಿಸಲಾಯಿತು. ಕೆಂಪು ಟೀ ಶರ್ಟ್ ಧರಿಸಿರುವ ಸೂರಜ್ ರೇವಣ್ಣ ಪೊಲೀಸ್ ಜೀಪಿಂದ ಇಳಿದು ಕೋರ್ಟ್ ನೊಳಗೆ ನಡೆದು ಹೋಗುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಅರಕಲುಗೂಡಿನ ಜೆಡಿಎಸ್ ಕಾರ್ಯಕರ್ತನೊಬ್ಬನ ಮೇಲೆ ಹೊಳೆನರಸೀಪುರದ ಹೊರವಲಯದಲ್ಲಿರುವ ಫಾರ್ಮ್ ಹೌಸೊಂದರಲ್ಲಿ ಅನೈಸರ್ಗಿಕ (ಸಲಿಂಗ ಕಾಮ) ಲೈಂಗಿಕ ಕ್ರೀಡೆಯಲ್ಲಿ ತೊಡಗಿದ ಆರೋಪವನ್ನು ಸೂರಜ್ ಎದುರಿಸುತ್ತಿದ್ದಾರೆ. ಹಲವಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿರುವ ಆರೋಪದಲ್ಲಿ ಸೂರಜ್ ಕಿರಿಯ ಸಹೋದರ ಮತ್ತು ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಈಗಾಗಲೇ ಬಂಧಿಸಿ ಜೈಲಿನಲ್ಲಿರಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಅರಕಲುಗೂಡಿನ ಜೆಡಿಎಸ್ ಕಾರ್ಯಕರ್ತನನ್ನು ಸೂರಜ್ ರೇವಣ್ಣ ಅಸಹಜ ಲೈಂಗಿಕ ಕ್ರೀಡೆಗೆ ಬಳಸಿಕೊಂಡರೇ?

Follow us