ಚೆಂದುಳ್ಳಿ ಚೆಲುವೆ ಅನನ್ಯಾ ಪಾಂಡೆಗೆ ಕಪ್ಪು ಉಡುಗೆ ಅಂದರೆ ಬಹಳ ಇಷ್ಟವಂತೆ, ವಿಡಿಯೋ ನೋಡಿದರೆ ನಿಮಗೂ ಗೊತ್ತಾಗುತ್ತದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 24, 2021 | 7:43 PM

ಅನನ್ಯಾ ಮುಖದಲ್ಲಿ ಕಾಣುವ ತಾಜಾತನ ನೋಡುಗರನ್ನು ಆಕರ್ಷಿಸುತ್ತದೆ. ಕಪ್ಪು ವರ್ಣದ ಡ್ರೆಸ್ಗಳು ಆಕೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ಅಕೆಗಿನ್ನೂ ಕೇವಲ 22 ರ ಪ್ರಾಯ. ಇನ್ನೂ ಸಾಕಷ್ಟು ವರ್ಷಗಳ ಕಾಲ ಬಾಲಿವುಡ್ನಲ್ಲಿ ಬಾಳಲಿದ್ದಾಳೆ.

ಕಪ್ಪು ಬಣ್ಣ ಅನಿಷ್ಟ, ಅದು ಸೂತಕ ದ್ಯೋತಕ ಅಂತ ಹೇಳುವವರು ನಮ್ಮಲ್ಲಿ ಸಾಕಷ್ಟು ಜನರಿದ್ದಾರೆ. ಆದರೆ, ಈ ಬಣ್ಣವನ್ನು ಮನಸಾರೆ ಇಷ್ಟಪಡುವ ಜನರ ಸಂಖ್ಯೆಯೇನೂ ಕಮ್ಮಿಯಿಲ್ಲ. ಸಿನಿಮಾ ತಾರೆಯರು, ರೂಪದರ್ಶಿಗಳು ಬ್ಲ್ಯಾಕ್ ಉಡುಗೆಗಳನ್ನು ಬಹಳ ಅಕ್ಕರೆಯಿಂದ ತೊಟ್ಟು ಕೆಮೆರಾಗಳಿಗೆ ಪೋಸ್ ನೀಡುತ್ತಾರೆ ಮತ್ತು ಸಿನಿಮಾಗಳಲ್ಲಿ ನಟಿಸುವಾಗಲೂ ಧರಿಸುತ್ತಾರೆ. ಕೆಲ ನಾಯಕಿಯರು ಕಪ್ಪು ಉಡುಗೆಯಲ್ಲಿ ಬಹಳ ಸೆಕ್ಸೀ ಕಾಣುತ್ತಾರೆ. ಅಂಥ ನಾಯಕಿಯರ ಪೈಕಿ ಬಾಲಿವುಡ್ ನಟ ಚಂಕೀ ಪಾಂಡೆಯ ಪುತ್ರಿ ಅನನ್ಯಾ ಪಾಂಡೆ ಸೇರಿದ್ದಾಳೆ. ಅನನ್ಯಾ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಇಮೇಜ್ಗಳನ್ನು ಪೋಸ್ಟ್ ಮಾಡಿ ಪಡ್ಡೆಗಳು ನಿದ್ದೆಗೆಡುವಂತೆ ಮಾಡುತ್ತಿದ್ದಾಳೆ.

ಫ್ಯಾಶನ್ ಜಗತ್ತಿನಲ್ಲಿ ಕಪ್ಪು ಬಣ್ಣಕ್ಕೆ ವಿಶಿಷ್ಟ ಸ್ಥಾನವಿದೆ. ವಿಶ್ವವಿಖ್ಯಾತ ಫ್ಯಾಶನ್ ಡಿಸೈನರ್ ಮತ್ತ್ತು ಉದ್ಯಮಿ ಫ್ರಾನ್ಸಿನ ದಿವಂಗತ ಗೇಬ್ರಿಯಲ್ ಬಾನ್ಹ್ಯೂರ್ ಕೊಕೊ ಚ್ಯಾನೆಲ್, ಕಪ್ಪು ಬಣ್ಣದ ಮೇಲೆ ಅದ್ಯಾವ ಪರಿ ವ್ಯಾಮೋಹ ಇಟ್ಟುಕೊಂಡಿದ್ದಳೆಂದರೆ ಒಮ್ಮೆ ಆಕೆ, ‘ಕಪ್ಪಿಗಿಂತ ಡಾರ್ಕ್ ಕಲರ್ ನನಗೊಂದು ವೇಳೆ ಸಿಕ್ಕಿದ್ದೇಯಾದರೆ, ನಾನು ಆ ಬಣ್ಣದ ಬಟ್ಟೆ ಧರಿಸಲಾರಂಭಿಸುತ್ತೇನೆ, ಆದರೆ ಅಲ್ಲಿಯವರೆಗೆ ಕಪ್ಪು ಬಣ್ಣದ ಬಟ್ಟೆ ಧರಿಸುವುದನ್ನು ಮುಂದುವರಿಸುತ್ತೇನೆ,’ ಅಂತ ಹೇಳಿದ್ದಳು.

ಕಪ್ಪು ಬಣ್ಣದ ಬಗ್ಗೆ ಅನನ್ಯಾಗಿರುವ ಪ್ರೀತಿ ನೋಡಿದರೆ ಈಕೆ ಕೊಕೊ ಚ್ಯಾನೆಲ್ ಹೇಳಿರುವುದನ್ನು ಸಂಪೂರ್ಣವಾಗಿ ಅಂಗೀಕರಿಸುತ್ತಾಳೆ ಅನಿಸದಿರದು. 2019 ರಲ್ಲಿ ಸ್ಟೂಡೆಂಟ್ ಆಫ್ ದಿ ಈಯರ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಚಂಕಿಯ ಮಗಳು ಬೇರೆ ಬೇರೆ ದಿರಿಸಿನಲ್ಲಿರುವ ಫೋಟೋಗಳನ್ನು ಇನ್​ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವುದು ನಿಜವೇ; ಆದರೆ, ಅವುಗಳಲ್ಲಿ ಹೆಚ್ಚಿನವು ಕಪ್ಪು ಉಡುಗೆಯಲ್ಲಿವೆ.

ಅನನ್ಯಾ ಮುಖದಲ್ಲಿ ಕಾಣುವ ತಾಜಾತನ ನೋಡುಗರನ್ನು ಆಕರ್ಷಿಸುತ್ತದೆ. ಕಪ್ಪು ವರ್ಣದ ಡ್ರೆಸ್ಗಳು ಆಕೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ಅಕೆಗಿನ್ನೂ ಕೇವಲ 22 ರ ಪ್ರಾಯ. ಇನ್ನೂ ಸಾಕಷ್ಟು ವರ್ಷಗಳ ಕಾಲ ಬಾಲಿವುಡ್ನಲ್ಲಿ ಬಾಳಲಿದ್ದಾಳೆ. ಈಕೆಯಲ್ಲಿ ಮೆಚ್ಚಬಹುದಾದ ಮತ್ತೊಂದು ಅಂಶವೆಂದರೆ ಅಪ್ಪನ ನಾಮಬಲವಿಲ್ಲದೆ, ತನ್ನ ಸ್ವಂತ ಪ್ರತಿಭೆ ಮತ್ತು ಸಾಮರ್ಥ್ಯದಿಂದ ಬೆಳೆಯಬೇಕೆಂಬ ಹಂಬಲ ಇಟ್ಟುಕೊಂಡಿದ್ದಾಳೆ.

ಇದನ್ನೂ ಓದಿ: ಕಾಬೂಲ್​ನಿಂದ ಭಾರತವನ್ನು ತಲುಪಿದ ಪುಟ್ಟ ಮಕ್ಕಳು ಖುಷಿಯಿಂದ ಮುದ್ದಾಡುತ್ತಿರುವ ದೃಶ್ಯ; ಹೃದಯಸ್ಪರ್ಶಿ ವಿಡಿಯೋ ವೈರಲ್