ಕಾಬೂಲ್ನಿಂದ ಭಾರತವನ್ನು ತಲುಪಿದ ಪುಟ್ಟ ಮಕ್ಕಳು ಖುಷಿಯಿಂದ ಮುದ್ದಾಡುತ್ತಿರುವ ದೃಶ್ಯ; ಹೃದಯಸ್ಪರ್ಶಿ ವಿಡಿಯೋ ವೈರಲ್
ಪುಟ್ಟ ಮಕ್ಕಳು ಖುಷಿಯಿಂದ ಒಬ್ಬರನ್ನೊಬ್ಬರು ಮುದ್ದಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ಎಲ್ಲರ ಮನಕಲಕುವಂತಿದೆ.
ನಿನ್ನೆ (ಭಾನುವಾರ) ಬೆಳಿಗ್ಗೆ ವಿಶೇಷ ವಾಯುಪಡೆ ವಿಮಾನದಲ್ಲಿ 168 ಜನರಲ್ಲಿ ಇಬ್ಬರು ಪುಟ್ಟ ಮಕ್ಕಳು ಕಾಬೂಲ್ನಿಂದ ಭಾರತಕ್ಕೆ ಬಂದಿಳಿದಿದ್ದಾರೆ. ವಿಮಾನವು ದೆಹಲಿಯ ಸಮೀಪದ ಗಾಜಿಯಾಬಾದ್ನ ವಾಯುನೆಲೆಯಲ್ಲಿ ಸುರಕ್ಷಿತವಾಗಿ ಇಳಿದಿದೆ. ಪುಟ್ಟ ಮಕ್ಕಳು ಖುಷಿಯಿಂದ ಒಬ್ಬರನ್ನೊಬ್ಬರು ಮುದ್ದಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ಎಲ್ಲರ ಮನಕಲಕುವಂತಿದೆ.
ಪುಟ್ಟ ಮಗುವಿನ ಅಕ್ಕ ಬಾಯ್ತುಂಬ ನಗುತ್ತಿದ್ದಾಳೆ. ಮಗುವಿನ ಕೆನ್ನೆಗೆ ಮುತ್ತಿಡುತ್ತಿದ್ದಾಳೆ. ವಿಡಿಯೋದಲ್ಲಿ ಮಹಿಳೆ ಸತತ ಏಳು ದಿನದ ಒತ್ತಡವನ್ನು ಮತ್ತು ಮಾನಸಿಕ ಪರಿಸ್ಥಿತಿಯನ್ನು ಹಂಚಿಕೊಳ್ಳುತ್ತಿರುವುದನ್ನು ಕೇಳಬಹುದು.
#WATCH | An infant was among the 168 people evacuated from Afghanistan’s Kabul to Ghaziabad on an Indian Air Force’s C-17 aircraft pic.twitter.com/DoR6ppHi4h
— ANI (@ANI) August 22, 2021
ತಾಯಿ ಮಗುವನ್ನು ಸುರಕ್ಷಿತವಾಗಿ ತನ್ನ ತೋಳುಗಳಲ್ಲಿ ಬಿಗಿದಪ್ಪಿ ಹಿಡಿದಿದ್ದಾಳೆ. ತಂದೆ ಆಕೆಯ ಪಕ್ಕದಲ್ಲಿ ನಿಂತು ಮಗುವನ್ನೇ ನೋಡುತ್ತಿದ್ದಾರೆ. ಇವರು ಆರ್ಟಿಪಿಸಿಆರ್ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ನಿಂತಿರುವ ದೃಶ್ಯ ನೋಡಬಹುದು.
ನನ್ನ ದೇಶದ ಪರಿಸ್ಥಿತಿ ಹದಗೆಡುತ್ತಿದೆ. ತಾಲಿಬಾನ್ ನಮ್ಮ ಮನೆಗಳನ್ನು ಭಸ್ಮ ಮಾಡಿದೆ ಎಂದು ಅಫ್ಘಾನಿಸ್ತಾನದ ಮಹಿಳೆ ಎನ್ಎನ್ಐ ಸುದ್ದಿ ಮಾಧ್ಯಮದ ಜತೆ ಪರಿಸ್ಥಿತಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
ಪುಟ್ಟ ಕಂದಮ್ಮಗೆ ಅನಾರೋಗ್ಯ; ಮಗುವನ್ನು ಉಳಿಸಲು ಅಮೆರಿಕ ಪಡೆಗೆ ನೀಡಿದ ಪೋಷಕರು, ಮುಂದೇನಾಯ್ತು?
ವೈರಲ್ ಆಯ್ತು ಪುಟ್ಟ ಮುದ್ದು ಕಂದಮ್ಮನ ತೊದಲು ನುಡಿ
Published On - 10:28 am, Mon, 23 August 21