AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಡರ್​ ಮಾಡಿ ತರಿಸಿಕೊಂಡ ಡಾಮಿನೋಸ್​ ಪಿಜ್ಜಾದಲ್ಲಿ ಸಿಕ್ಕಿದ್ದು ನಟ್ ಬೋಲ್ಟ್; ಅಪಾಯಕಾರಿ ಎಂದು ಎಚ್ಚರಿಸಿದ ಮಹಿಳೆ!

Viral News: ಪಿಜ್ಜಾ ಸವಿಯಬೇಕು ಅನ್ನುವಷ್ಟರಲ್ಲಿ ಅದರಲ್ಲಿದ್ದ ನಟ್- ಬೋಲ್ಟ್​ಗಳನ್ನು ನೋಡಿ ಧಂಗಾಗಿದ್ದಾರೆ. ಮಹಿಳೆ ಈ ಅಪಾಯಕಾರಿ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಆರ್ಡರ್​ ಮಾಡಿ ತರಿಸಿಕೊಂಡ ಡಾಮಿನೋಸ್​ ಪಿಜ್ಜಾದಲ್ಲಿ ಸಿಕ್ಕಿದ್ದು ನಟ್ ಬೋಲ್ಟ್; ಅಪಾಯಕಾರಿ ಎಂದು ಎಚ್ಚರಿಸಿದ ಮಹಿಳೆ!
ಆರ್ಡರ್​ ಮಾಡಿ ತರಿಸಿಕೊಂಡ ಡಾಮಿನೋಸ್​ ಪಿಜ್ಜಾದಲ್ಲಿ ಸಿಕ್ಕಿದ್ದು ನಟ್ ಬೋಲ್ಟ್!
TV9 Web
| Edited By: |

Updated on:Aug 23, 2021 | 12:10 PM

Share

ಡಾಮಿನೋಸ್ ಪಿಜ್ಜಾದಲ್ಲಿ ಅನೇಕ ವೆರೈಟಿಗಳಿವೆ. ಗ್ರಾಹಕರು ತಮಗೆ ಇಷ್ಟವಾಗುವ ವೆರೈಟಿ ಪಿಜ್ಜಾ​ ಆಯ್ದುಕೊಂಡು ತರಿಸಿಕೊಳ್ಳಬಹುದು. ವಿವಿಧ ಬಗೆಯ ವೆರೈಟಿಗಳೂ ಸಹ ಒಂದೊಂದು ಬಗೆಯ ರುಚಿಯನ್ನು ನೀಡುತ್ತದೆ. ಹಾಗೆಯೇ ತನಗಿಷ್ಟವಾದ ಪಿಜ್ಜಾವನ್ನು ಮಹಿಳೆ ಆರ್ಡರ್​ ಮಾಡಿ ತರಿಸಿಕೊಂಡಿದ್ದಾರೆ. ಪಿಜ್ಜಾ ಸವಿಯಬೇಕು ಅನ್ನುವಷ್ಟರಲ್ಲಿ ಅದರಲ್ಲಿದ್ದ ನಟ್- ಬೋಲ್ಟ್​ಗಳನ್ನು ನೋಡಿ ಧಂಗಾಗಿದ್ದಾರೆ. ಈ ಅಪಾಯಕಾರಿ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಪಿಜ್ಜಾ ಪ್ರಿಯರಿಗೆ ಎಚ್ಚರಿಕೆ ನೀಡುವ ದೃಷ್ಟಿಯಿಂದ ಪೋಸ್ಟ್ ಹಂಚಿಕೊಂಡಿರುವುದಾಗಿ ತಿಳಿಸಿದ್ದಾರೆ.

ಮಹಿಳೆ ಜುಲೈ 29ನೇ ತಾರೀಕಿನಂದು ಡಾಮಿನೋಸ್​ನಿಂದ ಪಿಜ್ಜಾ ಆರ್ಡರ್ ಮಾಡಿದ್ದಾರೆ. ಆಗಲೇ ಒಂದೆರಡು ಪಿಜ್ಜಾ ಪೀಸ್​ಗಳನ್ನು ಸವಿದಿದ್ದಾರೆ. ಮತ್ತೊಂದು ಪೀಸ್ ತಗೊಂದಿದ್ದೇ ಅದರಲ್ಲಿ ನಟ್ ಬೋಲ್ಟ್​ಗಳಿರುವುದು ಕಂಡು ಬಂದಿದೆ. ಅದನ್ನು ನೋಡಿದ ಮಹಿಳೆ ಗಾಬರಿಗೊಂಡು ಡಾಮಿನೋಸ್ ಪಿಜ್ಜಾ ಅಂಗಡಿಗೆ ಕರೆ ಮಾಡಿ ಮರಪಾವತಿ ಮಾಡುವಂತೆ ತಿಳಿಸಿದ್ದಾರೆ.

ತಮಗೆ ಆಘಾತ ಉಂಟು ಮಾಡಿದ ಘಟನೆಯನ್ನು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆ ಸ್ಥಳೀಯ ಮಾಧ್ಯಮ ಮತ್ತು ಸ್ಥಳೀಯ ಏಜೆನ್ಸಿಗಳಿಗೆ ಟ್ಯಾಗ್ ಮಾಡಿ ಫೋಟೋ ಪೋಸ್ಟ್ ಮಾಡಿದ್ದಾರೆ. ದಯವಿಟ್ಟು ತನ್ನು ಮೊದಲು ನೀವು ತರಿಸಿಕೊಂಡ ಪಿಜ್ಜಾವನ್ನು ಎರಡು ಬಾರಿ ಸರಿಯಾಗಿ ಪರೀಕ್ಷಿಸಿಕೊಳ್ಳಿ. ಯಾವಾಗಲೂ ಜಾಗರೂಕರಾಗಿರಿ ಎಂದು ಎಚ್ಚರಿಸುವ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಡಾಮಿನೋಸ್ ಪಿಜ್ಜಾ ಹಟ್​, ಮಹಿಳೆಗೆ ಕ್ಷಮೆಯಾಚಿಸಿದೆ. ಇಂತಹ ಘಟನೆ ಇನ್ನುಮುಂದೆ ನಡೆಯದಂತೆ ಅಂಗಡಿಗಳ ಜತೆ ನಾವು ಮಾತನಾಡಿದ್ದೇವೆ ಎಂದು ಹೇಳಿದೆ. ಗ್ರಾಹಕರ ತೃಪ್ತಿ ಮತ್ತು ಸುರಕ್ಷತೆಯನ್ನು ನಾವು ಎಂದಿಗೂ ಪಾಲಿಸುತ್ತೇವೆ ಎಂದು ಹೇಳಿದೆ.

ಇದನ್ನೂ ಓದಿ:

Viral News: ಕದ್ದು ಮುಚ್ಚಿ ಇಲಿಗಳಿಗೆ ಆಹಾರ ನೀಡುತ್ತಿದ್ದ ಮಕ್ಕಳಿಗೆ ಪಾಠ ಕಲಿಸಲು ಅಪ್ಪನ ಐಡಿಯಾ ಕೇಳಿದ್ರೆ ಧಂಗಾಗ್ತೀರಾ!

Domino’s Data Breach: ಡಾಮಿನೋಸ್​ 18 ಕೋಟಿ ಆರ್ಡರ್​, 13TBಯಷ್ಟು ಸಿಬ್ಬಂದಿ, ಗ್ರಾಹಕರ ಮಾಹಿತಿ ಸೋರಿಕೆ

(Women finding nut and bolts in dominos pizza)

Published On - 12:08 pm, Mon, 23 August 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ