Domino’s Data Breach: ಡಾಮಿನೋಸ್ 18 ಕೋಟಿ ಆರ್ಡರ್, 13TBಯಷ್ಟು ಸಿಬ್ಬಂದಿ, ಗ್ರಾಹಕರ ಮಾಹಿತಿ ಸೋರಿಕೆ
ಡಾಮಿನೋಸ್ ಪಿಜ್ಜಾದ 18 ಕೋಟಿ ಆರ್ಡರ್, ಗ್ರಾಹಕರಿಗೆ ಹಾಗೂ ಸಿಬ್ಬಂದಿಗೆ ಸಂಬಂಧಿಸಿದ 13TB ಮಾಹಿತಿ ಸೋರಿಕೆ ಆಗಿದೆ ಎಂಬುದನ್ನು ಹ್ಯಾಕರ್ಸ್ಗಳು ಬಹಿರಂಗಪಡಿಸಿದ್ದಾರೆ.
ಏರ್ ಇಂಡಿಯಾ ಪ್ರಯಾಣಿಕರ ಮಾಹಿತಿ ಸೋರಿಕೆ ಸುದ್ದಿ ಬಂದು ಹೆಚ್ಚೇನೂ ಸಮಯ ಆಗಿಲ್ಲ. ಇದೀಗ ಮತ್ತೊಂದು ಮಾಹಿತಿ ಸೋರಿಕೆ ಭಾಂಡಾರ ಬಯಲಿಗೆ ಬಿದ್ದಿದೆ. ಡಾಮಿನೋಸ್ ಪಿಜ್ಜಾದ 18 ಕೋಟಿ ಆರ್ಡರ್ಗಳಿಗೆ ಸಂಬಂಧಪಟ್ಟ ದತ್ತಾಂಶ ಮತ್ತು ಹತ್ತಿರಹತ್ತಿರ 13ಟೆರಾಬೈಟ್ (ಟಿಬಿ)ನಷ್ಟು ಸಿಬ್ಬಂದಿ ಹಾಗೂ ಗ್ರಾಹಕರಿಗೆ ಸಂಬಂಧಿಸಿದ ದಾಖಲೆಗಳು ಆನ್ಲೈನ್ನಲ್ಲಿ ಕಾಣಿಸಿಕೊಂಡಿದೆ. ಈ ಹ್ಯಾಕ್ ಹಿಂದೆ ಇರುವ ಗುಂಪು ಮಾಹಿತಿಯನ್ನು ಸಾರ್ವಜನಿಕವಾಗಿ ತಿಳಿಸಿದೆ. ಸದ್ಯದಲ್ಲೇ ಪಾವತಿ ಮಾಹಿತಿ ಮತ್ತು ಸಿಬ್ಬಂದಿಯ ಫೈಲ್ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಲಾಗಿದೆ. ಈ ಡೇಟಾಬೇಸ್ನಲ್ಲಿ ಇರುವ ಮಾಹಿತಿ ಏನು ಎಂದು ಗೊತ್ತಾಗಬೇಕಾದರೆ Tor Browser ಡೌನ್ಲೋಡ್ ಮಾಡಿಕೊಳ್ಳಬೇಕು.
ಒಂದು ಸಲ ಅದು ಪೂರ್ಣವಾದ ಮೇಲೆ ಇಲ್ಲಿ ಕ್ಲಿಕ್ ಮಾಡಬೇಕು. ಈ ಲೇಖನ ಬರೆಯುವ ಹೊತ್ತಿಗೆ ಲಿಂಕ್ ಕಾರ್ಯ ನಿರ್ವಹಿಸುತ್ತಿತ್ತು. ಆದರೆ 13TB ಡೇಟಾ ಹುಡುಕಾಟ ನಡೆಸಬೇಕಾದ್ದರಿಂದ ಸ್ವಲ್ಪ ನಿಧಾನ ಆಗಿತ್ತು. ಆಗಾಗ ಲಿಂಕ್ ಕ್ರಾಶ್ ಕೂಡ ಆಗಿದೆ. ಒಂದು ವೇಳೆ ಹಾಗಾಗಿದ್ದಲ್ಲಿ ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ. ಈ ಲೇಖನವನ್ನು ಬರೆಯುವ ಹೊತ್ತಿಗೆ ಸರ್ಚ್ಗೆ ಬಹಳ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ತಾಳ್ಮೆ ಕಳೆದುಕೊಳ್ಳದೆ ಕಾಯಬೇಕು. ಡೇಟಾಬೇಸ್ನಲ್ಲಿ ಇರುವ ಭಾರೀ ದತ್ತಾಂಶ ಇರುವುದರಿಂದ ಜನರಿಗೆ ಹುಡುಕುವುದಕ್ಕೆ ಸಮಯ ಆಗುತ್ತಿದೆ.
ನೀವು ಒಂದು ವೇಳೆ ಆನ್ಲೈನ್ನಲ್ಲಿ ಡಾಮಿನೋಸ್ ಪಿಜ್ಜಾ ಆರ್ಡರ್ ಮಾಡಿದ್ದಲ್ಲಿ ಈ ಡೇಟಾಬೇಸ್ನಲ್ಲಿ ನಿಮ್ಮ ಹೆಸರು ಇರುವ ಸಾಧ್ಯತೆ ಶೇ 100ರಷ್ಟು ಇರುತ್ತದೆ. ಇನ್ನು ಈಗಿನ ಮಾಹಿತಿ ಸೋರಿಕೆ ಬಗ್ಗೆ ಇನ್ನಷ್ಟು ವಿವರಗಳನ್ನು ಪಡೆಯುವುದಕ್ಕೆ ಡಾಮಿನೋಸ್ ಮಾತೃಸಂಸ್ಥೆಯಾದ ಜುಬಿಲಿಯಂಟ್ ಫುಡ್ವರ್ಕ್ಸ್ನ ಸಂಪರ್ಕ ಮಾಡಿದಾಗ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ಮಾಹಿತಿ ಭದ್ರತೆ ಘಟನೆ ಎಂದಿದ್ದು, ಹಣಕಾಸಿಗೆ ಸಂಬಂಧಿಸಿದ ಮಾಹಿತಿಯನ್ನು ಹ್ಯಾಕರ್ಗಳು ಪಡೆದುಕೊಂಡಿದ್ದಾರೆ ಎಂಬುದನ್ನು ನಿರಾಕರಿಸಿದೆ.
ಇದನ್ನೂ ಓದಿ: Air India data breach: ಏರ್ಇಂಡಿಯಾದ 45 ಲಕ್ಷ ಪ್ರಯಾಣಿಕರ ಮಾಹಿತಿ ಸೋರಿಕೆ ಆಗಿದ್ದು ಹೇಗೆ?
(Dominos 18 crore order data breached and 13TB data related to staff and customers leaked by hackers in online)
Published On - 5:34 pm, Mon, 24 May 21