AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mobile users: ಪ್ರೀಪೇಯ್ಡ್​ನಿಂದ ಪೋಸ್ಟ್​ಪೋಯ್ಡ್ ಹಾಗೂ ಪೋಸ್ಟ್​ಪೋಯ್ಡ್​ನಿಂದ ಪ್ರೀಪೇಯ್ಡ್​ಗೆ ಒಟಿಪಿಯೇ ಸಾಕು

ಮೊಬೈಲ್ ಬಳಕೆದಾರರು ಪೋಸ್ಟ್​ಪೇಯ್ಡ್​ನಿಂದ ಪ್ರೀಪೇಯ್ಡ್​ಗೆ ಹಾಗೂ ಪ್ರೀಪೇಯ್ಡ್​ನಿಂದ ಪೋಸ್ಟ್​ಪೇಯ್ಡ್​ಗೆ ಒಟಿಪಿ ಬಳಸಿಯೇ ಬದಲಾಯಿಸಿಕೊಳ್ಳುವಂಥ ಕಾಲ ಸದ್ಯದಲ್ಲೇ ಬರಲಿದೆ.

Mobile users: ಪ್ರೀಪೇಯ್ಡ್​ನಿಂದ ಪೋಸ್ಟ್​ಪೋಯ್ಡ್ ಹಾಗೂ ಪೋಸ್ಟ್​ಪೋಯ್ಡ್​ನಿಂದ ಪ್ರೀಪೇಯ್ಡ್​ಗೆ ಒಟಿಪಿಯೇ ಸಾಕು
ಸಾಂದರ್ಭಿಕ ಚಿತ್ರ
Srinivas Mata
|

Updated on: May 24, 2021 | 10:40 PM

Share

ನವದೆಹಲಿ: ದೂರಸಂಪರ್ಕ ಇಲಾಖೆ (DoT) ಅಧಿಕೃತ ಮಾಹಿತಿ ಪ್ರಕಾರ, SIM ಕಾರ್ಡ್ ಬದಲಾಯಿಸದೆ OTP (ಒನ್ ಟೈಮ್ ಪಾಸ್​ವರ್ಡ್) ಆಧಾರದಲ್ಲಿ ಪೋಸ್ಟ್​ಪೇಯ್ಡ್ ಸಂಪರ್ಕದಿಂದ ಪ್ರೀಪೇಯ್ಡ್​ಗೆ ಹಾಗೂ ಪ್ರೀಪೇಯ್ಡ್​ನಿಂದ ಪೋಸ್ಟ್​ಪೇಯ್ಡ್​ಗೆ ಬದಲಾವಣೆ ಮಾಡಿಕೊಳ್ಳುವುದಕ್ಕೆ ಸದ್ಯದಲ್ಲೇ ಅವಕಾಶ ದೊರೆಯಬಹುದಾಗಿದೆ. ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ಹೇಗೆ ಇದನ್ನು ಮಾಡಬಹುದು ಎಂಬ ಬಗ್ಗೆ ದೂರಸಂಪರ್ಕ ಇಲಾಖೆಗೆ ಪ್ರಸ್ತಾವ ಮಾಡಿದೆ. ಇಲಾಖೆಯು ಟೆಲಿಕಾಂ ಆಪರೇಟರ್​ಗಳಿಗೆ ಈ ಬಗ್ಗೆ ಪ್ರೂಫ್ ಆಫ್ ಕಾನ್ಸೆಪ್ಟ್ (PoC) ಮುಂದುವರಿಸಲು ಕೇಳಲಾಗಿದೆ. PoC ಏನು ಬರುತ್ತದೆ ಎಂಬುದರ ಆಧಾರದಲ್ಲಿ ಖಾತೆ ಬದಲಾವಣೆ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.

COAI ಸದಸ್ಯರಾದ ರಿಲಯನ್ಸ್ ಜಿಯೋ, ಭಾರ್ತಿ ಏರ್​ಟೆಲ್ ಮತ್ತು ವೊಡಾಫೋನ್ ಐಡಿಯಾದಿಂದ ಏಪ್ರಿಲ್ 9ರಂದು ದೂರಸಂಪರ್ಕ ಇಲಾಖೆಗೆ ಮನವಿ ಸಲ್ಲಿಸಿದೆ. ಮೊದಲೇ ಹೇಳಿದ ಹಾಗೆ ಗ್ರಾಹಕರು ಪೋಸ್ಟ್​ಪೇಯ್ಡ್​ನಿಂದ ಪ್ರೀಪೇಯ್ಡ್​ಗೆ ಹಾಗೂ ಪ್ರೀಪೇಯ್ಡ್​ನಿಂದ ಪೋಸ್ಟ್​ಪೇಯ್ಡ್​ಗೆ ಬದಲಾವಣೆಯನ್ನು ಒಟಿಪಿಯಿಂದಲೇ ಮಾಡಿಕೊಳ್ಳುವಂತಾಗಬೇಕು. ಹೊಸದಾಗಿ ಕೆವೈಸಿ (ನೋ ಯುವರ್ ಕಸ್ಟಮರ್) ಪಡೆಯುವ ಅಗತ್ಯ ಇರಬಾರದು ಎಂದು ಮನವಿ ಸಲ್ಲಿಸಿವೆ.

ಈ ಹೊಸ ಪ್ರಸ್ತಾವಿತ ಪ್ರಕ್ರಿಯೆಯಲ್ಲಿ ಚಂದಾದಾರರು ತಮ್ಮ ಮೊಬೈಲ್​ ಸಂಪರ್ಕದ ಬಗೆಯನ್ನು ಎಸ್ಸೆಮ್ಮೆಸ್, ಐವಿಆರ್​ಎಸ್​, ವೆಬ್​ಸೈಟ್ ಅಥವಾ ಅಧಿಕೃತ ಆ್ಯಪ್ ಮೂಲಕ ಮಾಡಬಹುದು. ಮನವಿ ಬಂದ ಮೇಲೆ, ಚಂದಾದಾರಿಗೆ ಮೊಬೈಲ್ ಖಾತೆ ಬದಲಾವಣೆ ಬಗ್ಗೆ ಖಾತ್ರಿ ಬರುತ್ತದೆ. ವಿಶಿಷ್ಟ ವಹಿವಾಟಿನ ಐಡಿ (ಯೂನಿಕ್ ಟ್ರಾನ್ಸಾಕ್ಷನ್ ಐಡಿ) ಮತ್ತು ಒಟಿಪಿ 10 ನಿಮಿಷಗಳ ಸಿಂಧುತ್ವದೊಂದಿಗೆ ಬರುತ್ತದೆ.

ಇದನ್ನೂ ಓದಿ: Mobile data plan: 100 ರೂಪಾಯಿಯೊಳಗೆ ಅನ್​ಲಿಮಿಟೆಡ್ ಮೊಬೈಲ್ ಇಂಟರ್​ನೆಟ್ ಸಿಗುವ ಪ್ಲಾನ್​ಗಳಿವು

(Mobile users may soon change their postpaid to prepaid and viceversa with OTP. Here is the details)

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ