AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಈ ಅಪ್ಲಿಕೇಷನ್​ಗಳನ್ನು ಬಳಸುತ್ತಿದ್ದರೆ ಕೂಡಲೇ ಡಿಲೀಟ್ ಮಾಡಿ; ಮಾಹಿತಿ ಸೋರಿಕೆಯಿಂದ ಪಾರಾಗಿ!

ಆ ಪಟ್ಟಿಯಲ್ಲಿರುವ ಅಪ್ಲಿಕೇಷನ್​ಗಳನ್ನು ಹೊಂದಿರುವ ಮೊಬೈಲ್ ಫೋನ್​ಗಳಿಂದ ಖಾಸಗಿ ಮಾಹಿತಿಯನ್ನು ಕೂಡ ಕದ್ದಿರುವ ಶಂಕೆ ಇದೆ. ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಎರಡರಲ್ಲೂ ಹೀಗಾಗಿರುವ ಸಾಧ್ಯತೆ ಇದೆ.

ನೀವು ಈ ಅಪ್ಲಿಕೇಷನ್​ಗಳನ್ನು ಬಳಸುತ್ತಿದ್ದರೆ ಕೂಡಲೇ ಡಿಲೀಟ್ ಮಾಡಿ; ಮಾಹಿತಿ ಸೋರಿಕೆಯಿಂದ ಪಾರಾಗಿ!
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Aug 21, 2021 | 9:52 AM

Share

ನೀವು ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಕೆದಾರರಾಗಿದ್ದರೆ ನೀವು ಗಮನಹರಿಸಬೇಕಾದ ವಿಚಾರವೊಂದು ಇಲ್ಲಿದೆ. ಆಂಡ್ರಾಯ್ಡ್ ಮೊಬೈಲ್​ನಲ್ಲಿ ಇನ್​ಸ್ಟಾಲ್ ಆಗಿರುವ 2 ಡಜನ್​ಗೂ ಹೆಚ್ಚು ಅಪ್ಲಿಕೇಷನ್​ಗಳು ಬಳಕೆದಾರರ ಮಾಹಿತಿಯನ್ನು (ಡಾಟಾ) ಸೋರಿಕೆ ಮಾಡಿವೆ ಎಂಬ ಮಾಹಿತಿ ಲಭ್ಯವಾಗಿದೆ. ಸುಮಾರು 100 ಮಿಲಿಯನ್ ಬಳಕೆದಾರರ ಡಾಟಾ ಹೀಗೆ ಲೀಕ್ ಆಗಿರುವ ಸಾಧ್ಯತೆ ಅಂದಾಜಿಸಲಾಗಿದೆ. ಸಂಶೋಧಕರು ಇಂತಹ ಅಪ್ಲಿಕೇಷನ್​ಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಕೆಲವು ಅಪ್ಲಿಕೇಷನ್​ಗಳು ಬಹಳ ಖ್ಯಾತವಾಗಿದ್ದು, ಇನ್​ಸ್ಟಾಲ್ ಮಾಡಿಕೊಂಡವರ ಸಂಖ್ಯೆಯೂ ಹೆಚ್ಚಾಗಿದೆ.

ಆ ಪಟ್ಟಿಯಲ್ಲಿರುವ ಅಪ್ಲಿಕೇಷನ್​ಗಳನ್ನು ಹೊಂದಿರುವ ಮೊಬೈಲ್ ಫೋನ್​ಗಳಿಂದ ಖಾಸಗಿ ಮಾಹಿತಿಯನ್ನು ಕೂಡ ಕದ್ದಿರುವ ಶಂಕೆ ಇದೆ. ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಎರಡರಲ್ಲೂ ಹೀಗಾಗಿರುವ ಸಾಧ್ಯತೆ ಇದೆ. ಜ್ಯೋತಿಷ್ಯ, ಫ್ಯಾಕ್ಸ್, ಟ್ಯಾಕ್ಸಿ ಸರ್ವೀಸಸ್ ಹಾಗೂ ಸ್ಕ್ರೀನ್ ರೆಕಾರ್ಡಿಂಗ್ ಸಂಬಂಧಪಟ್ಟ ಅಪ್ಲಿಕೇಷನ್​ಗಳಲ್ಲಿ ಹೀಗೆ ಖಾಸಗಿ ಮಾಹಿತಿ ಲೀಕ್ ಆಗಿರುವ ಸಾಧ್ಯತೆ ಇದೆ. ಇದರಲ್ಲಿ ಆಸ್ಟ್ರೋ ಗುರು (ಖ್ಯಾತ ಜ್ಯೋತಿಷ್ಯ ಅಪ್ಲಿಕೇಷಷನ್), ಟಿಲೆವಾ (ಟ್ಯಾಕ್ಸಿ ಅಪ್ಲಿಕೇಷನ್) ಹಾಗೂ ಲೋಗೊ ಡಿಸೈನ್ ಆಪ್ ಆದ ಲೋಗೊ ಮೇಕರ್. ಈ ಅಪ್ಲಿಕೇಷನ್​ಗಳು ಬಳಕೆದಾರರ ಖಾಸಗಿ ಮಾಹಿತಿ ಪಡೆದಿರುವ ಸಾಧ್ಯತೆ ಇದೆ. ಬಳಕೆದಾರರ ಇಮೈಲ್, ಪಾಸ್​ವರ್ಡ್, ಹೆಸರು, ಹುಟ್ಟಿದ ದಿನಾಂಕ, ಲಿಂಗ, ಖಾಸಗಿ ಚಾಟ್, ಲೊಕೇಷನ್ ಮಾಹಿತಿ ಇತ್ಯಾದಿಗಳನ್ನು ಅಪ್ಲಿಕೇಷನ್​ಗಳು ಪಡೆದುಕೊಂಡಿರುತ್ತವೆ.

ಈ ಅಪ್ಲಿಕೇಷನ್​ಗಳು ರಿಯಲ್ ಟೈಮ್ ಮಾಹಿತಿಯನ್ನು ಪಡೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಅಂದರೆ ಆಯಾ ಅಪ್ಲಿಕೇಷನ್​ಗಳು ತಮ್ಮ ಕ್ಲೈಂಟ್​ಗಳಿಗೆ ರಿಯಲ್ ಟೈಮ್​ನಲ್ಲಿ ಬಳಕೆದಾರರ ಮಾಹಿತಿ ಒದಗಿಸುತ್ತದೆ. ಹಲವು ಬಾರಿ ಅಪ್ಲಿಕೇಷನ್ ಡೆವೆಲಪರ್ಸ್ ಮಾಹಿತಿಯ ಸುರಕ್ಷತೆಯ ಬಗ್ಗೆ ಗಮನ ಹರಿಸಿರುವುದಿಲ್ಲ. ಅಂತಹ ಸಂದರ್ಭ ಸೇವೆಯಲ್ಲಿ ವ್ಯತ್ಯಾಸ, ವೈರಸ್ ಅಟ್ಯಾಕ್ ಆಗುವ ಸಾಧ್ಯತೆಯೂ ಇರುತ್ತದೆ.

ಒಂದು ಕ್ಲಿಕ್​ನಿಂದ ಹಲವು ಮಾಹಿತಿ ಸೋರಿಕೆಯಾಗಬಹುದು ಮಾಹಿತಿಯನ್ನು ಸಂಗ್ರಹಿಸಿ ನೀಡುವುದು ಒಂದು ವಿಧ. ಆದರೆ ಕೆಲವೆಡೆ ರಿಯಲ್ ಟೈಮ್ ಮಾಹಿತಿ ಸೋರಿಕೆಯೂ ಆಗುತ್ತಿದೆ. ಅಂದರೆ, ಚಾಟ್ ಸಂದೇಶಗಳು, ಹ್ಯಾಕಿಂಗ್ ಅವಕಾಶವೂ ಇರುತ್ತದೆ. ಟಿಲೆವಾ ಅಪ್ಲಿಕೇಷನ್​ನಿಂದ ಬಳಕೆದಾರರ ಪೂರ್ಣ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಲೊಕೇಷನ್ ಮಾಹಿತಿ ಪಡೆಯಲು ಸಂಶೋಧಕರಿಗೆ ಸಾಧ್ಯವಾಗಿದೆ. ಅಂದರೆ, ಬಳಕೆದಾರರ ಸುರಕ್ಷತೆ ದೃಷ್ಟಿಯಿಂದ ಈ ಅಪ್ಲಿಕೇಷನ್​ಗಳು ಎಷ್ಟು ವೀಕ್ ಆಗಿವೆ ಎಂದು ನಾವು ಅಂದಾಜಿಸಬಹುದು. ನಾವು ಇಂತಹ ಅಪ್ಲಿಕೇಷನ್ ಡೌನ್​ಲೋಡ್ ಮಾಡಿಕೊಂಡು, ಅವಕಾಶ ಅಥವಾ ಅವುಗಳು ಕೇಳುವ ಎಲ್ಲಾ ವಿಚಾರಕ್ಕೂ ಒಂದು ಕ್ಲಿಕ್ ಮೂಲಕ ಪರ್ಮಿಷನ್ ನೀಡಿದರೆ ಸಾಕು, ಡಾಟಾ ಸೋರಿಕೆ ಸುಲಭವಾಗಲಿದೆ.

ಅಂತಹ ಅಪ್ಲಿಕೇಷನ್​ಗಳನ್ನು ಡಿಲೀಟ್ ಮಾಡಿ ಈ ಅಪ್ಲಿಕೇಷನ್​ಗಳ ಮತ್ತೊಂದು ಸಮಸ್ಯೆ ಏನೆಂದರೆ, ಇವುಗಳು ಹ್ಯಾಕರ್​ಗಳಿಗೆ ಪುಶ್ ನೋಟಿಫಿಕೇಷನ್ ಕೊಡಲು ಅನುವು ಮಾಡಿಕೊಡುತ್ತವೆ. ಅಂದರೆ, ಬಳಕೆದಾರರು ಈ ಆ್ಯಪ್​ಗಳ ಮೂಲಕ ನೋಟಿಫಿಕೇಷನ್ ಪಡೆಯುತ್ತಾರೆ. ಆದರೆ, ಅವುಗಳನ್ನು ಆ ಆ್ಯಪ್​ಗಳು ಕಳಿಸಿರುವುದಿಲ್ಲ. ಬದಲಾಗಿ, ಹ್ಯಾಕರ್​ಗಳು ಕಳಿಸಿರುತ್ತಾರೆ. ಬಳಕೆದಾರರು ತಿಳಿಯದೆ ಅವುಗಳನ್ನು ತೆರೆಯುತ್ತಾರೆ. ಅದನ್ನು ಬಳಕೆದಾರರು ತಿಳಿಯದೆ ಮತ್ತಷ್ಟು ಜನರಿಗೆ ಹಂಚಿಕೆ ಮಾಡುವ ಸಾಧ್ಯತೆ ಇರುತ್ತದೆ. ಅದರಿಂದ ಅವರ ಮೊಬೈಲ್​ಗೆ ಹಾನಿ ಉಂಟಾಗಬಹುದು. ಹಾಗಾಗಿ, ಈ ರೀತಿಯ ಅಪ್ಲಿಕೇಷನ್​ಗಳು ನಿಮ್ಮ ಫೋನ್​ನಲ್ಲಿ ಇದ್ದರೆ ಅವುಗಳನ್ನು ಡಿಲೀಟ್ ಮಾಡುವುದು ಸೂಕ್ತ.

ಇದನ್ನೂ ಓದಿ: Android Smart Phones: ಆಂಡ್ರಾಯಿಡ್ ಸ್ಮಾರ್ಟ್​ಫೋನ್ ಬಳಕೆದಾರರು ತಪ್ಪಿಸಬೇಕಾದ 15 ತಪ್ಪುಗಳಿವು

Mobile data plan: 100 ರೂಪಾಯಿಯೊಳಗೆ ಅನ್​ಲಿಮಿಟೆಡ್ ಮೊಬೈಲ್ ಇಂಟರ್​ನೆಟ್ ಸಿಗುವ ಪ್ಲಾನ್​ಗಳಿವು

Published On - 3:40 pm, Tue, 25 May 21

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು